ನೂತನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿದ ವಕೀಲರಾದ ಪ್ರಕಾಶ್ ಬನ್ನಿಹಟ್ಟಿ

ನೂತನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿದ ವಕೀಲರಾದ ಪ್ರಕಾಶ್ ಬನ್ನಿಹಟ್ಟಿ  Advocate Prakash Bannihatti inaugurated the new Women Milk Producers Cooperative Society

                    ಬ್ಯಾಡಗಿ 25 :  ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಕೆಎಂಎಫ್ ನಿರ್ದೇಶಕರು ವಕೀಲರು ಪ್ರಕಾಶ್ ಬನ್ನಿಹಟ್ಟಿ  ಗೋ ಮಾತೇ ಪೂಜೆ ಮಾಡುವ ಮೂಲಕ ಇಂದು ನೂತನ ರಾಮಗೊಂಡನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಹಾಲು ಶೇಖರಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದವರು. ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲು, ಮತ್ತು ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರುಕಟ್ಟೆಯನ್ನು ಒದಗಿಸಲು ಸ್ಥಾಪಿಸಲ್ಪಟ್ಟಿವೆ; ಇವುಗಳು ಹಾಲು ಉತ್ಪಾದಕರಿಗೆ  ನೆರವು ನೀಡುವದರ ಜೊತಗೆ ಪಶುಸಂಗೋಪನೆ ಸೇವೆಗಳು, ಮತ್ತು ಉತ್ತಮ ಬೆಲೆ ಸಿಗುವಂತೆ ಮಾಡುವ ಮೂಲಕ ಕ್ಷೀರ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

                    ಸಂಘಗಳು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸಿ, ರೈತರು ಮತ್ತು ಗ್ರಾಹಕರ ನಡುವಿನ ಸೇತುವೆಯಾಗಿವೆ. ಸಹಕಾರ ಸಂಘ ಮತ್ತು ಖಾಸಗಿ ಸಂಘಗಳ ವ್ಯತ್ಯಾಸ ಹಾಗೂ ಒಕ್ಕೂಟದ ಸೌಲಭ್ಯಗಳ ಬಗ್ಗೆ ತಿಳಿಸಿದರು . ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಕರಬಸವ್ವ ಉದಗಟ್ಟಿ ಹಾಗೂ ಉಪಾಧ್ಯಕ್ಷರಾದ ನಾಗವ್ವ ಉದಗಟ್ಟಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಶೀಲಮ್ಮ ಬನ್ನಿಹಟ್ಟಿ ಹಾಗೂ ಮಾಜಿ ಸದಸ್ಯರು ನಿಂಗಪ್ಪ ದೇವಗೇರಿ ರವರು ಹಾಗೂ ರೈತ ಮುಖಂಡರಾದ ಕಿರಣ ಗಡಿಗೋಳ ್ಘ ಕಐಆ ಬ್ಯಾಂಕ್ ಮಾಜಿ ಅಧ್ಯಕ್ಷರಾದ  ಮಹದೇವಪ್ಪ ಶಿಡೆನೂರ ದ್ಯಾಮಪ್ಪ ಶಿಡೇನೂರರವರು ಹಾಗೂ ಒಕ್ಕೂಟದ ಅಧಿಕಾರಿಗಳು ್ಘ ಗ್ರಾಮದ ಮಹಿಳೆಯರು ಹಾಗೂ ಹಿರಿಯರು ್ಘ ಹಾಲು ಉತ್ಪಾದಕರು ಹಾಜರಿದ್ದರು.