ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಯಶವಂತರಾಯಗೌಡ ಪಾಟೀಲ
Adopt modern farming methods: Yashwant Rayagouda Patil
ಇಂಡಿ 03: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾರ್ಯೋನ್ಮುಖರಾದರೆ ಕೃಷಿ ಒಂದು ಉದ್ಯಮವಾಗಿ ಹೊರಹೊಮ್ಮುತ್ತದೆ. ಸರಕಾರಗಳಿಗೆ ರೈತರು ಸಾಲ ಮನ್ನಾ ಮಾಡುವಂತೆ ಮನವಿ ಮಾಡುವುದನ್ನು ನಿಲ್ಲಿಸಿ, ಉತ್ತಮ ಕೃಷಿ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಮುಂದಾಗಿ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದ ಅಹಿರಸಂಗ ರಸ್ತೆಯ ಶ್ರೀಮಂತ ಇಂಡಿ ಇವರ ತೋಟದಲ್ಲಿ ಶುಕ್ರವಾರ ಕೃಷಿ ಇಲಾಖೆ ಇಂಡಿ, ಕೃಷಿ ವಿಜ್ಞಾನ ಕೇಂದ್ರ ವಿಜಯಪುರ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಮರಗೂರ ಹಾಗೂ ಶಾಂತೇಶ್ವರ ವಿವಿದ್ದೇಶಗಳ ಸಹಕಾರಿ ಸಂಘ ಹೋರ್ತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಬ್ಬಿನ ಬೆಳೆ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕೀರಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಣ್ಣಿನ ಫಲವತ್ತತೆ ಕಾಪಾಡಿ ಆಧುನಿಕ ಪದ್ಧತಿಯ ಡ್ರೀಪ್ ನೀರಾವರಿ ಪದ್ಧತಿ ಅಳವಡಿಸಿ ಕಬ್ಬಿನ ಇಳುವರಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ 40 ಸಾವಿರ ಸಸಿ ನೆಡಬೇಕು. ಒಂದು ಸಸಿ ಎರಡರಿಂದ ಮೂರು ಕಿಲೋ ಆಗುವಂತೆ ನೋಡಿಕೊಳ್ಳಬೇಕು. ಆಗ ಕಬ್ಬಿನ ಅಧಿಕ ಇಳುವರಿ ಬರುತ್ತದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ನಾವು ಕಬ್ಬಿನ ತಳಿ ಆಯ್ಕೆ ಮಾಡುವಾಗ ಉತ್ತಮ ತಳಿ ಆಯ್ಕೆ ಮಾಡಬೇಕು. ಕಬ್ಬು ಬೆಳೆಯು ಚೆನ್ನಾಗಿ ಬರಬೇಕು, ರಿಕವರಿ ಚೆನ್ನಾಗಿ ಬರಬೇಕು ಅಂತಹ ತಳಿಗಳಾದ 86022 ಸಂಕೇಶ್ವರದ ಎಸ್‌ಎನ್‌ಕೆ , ಎಂ ಎಸ್ 10001 ಅಮೃತ 9004ಮತ್ತು122274 ನಂತಹ ತಳಿಗಳನ್ನು ಆಯ್ಕೆ ಮಾಡಿ ಕಬ್ಬಿನ ಇಳುವರಿ ಪಡೆಯಲು ತಿಳಿಸಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ ಕಬ್ಬು ವರ್ಷದ 365ದಿನ ಮತ್ತು ದಿನದ 24 ಗಂಟೆ ಬೆಳೆಯುತ್ತದೆ. ಆದ್ದರಿಂದ ಆಧುನಿಕ ಪದ್ದತಿಯ ಡ್ರೀಪ್ ನೀರಾವರಿ ಅಳವಡಿಸಿದರೆ 30 ರಿಂದ 40 ರಷ್ಟು ಇಳುವರಿ ಹೆಚ್ಚಿಗೆ ಪಡೆಯಬಹುದು ಎಂದರು.
ಗೊಬ್ಬರ ಬೆಳೆಗಳಿಗೆ ಕೊಟ್ಟು ನೀರು ಕೊಟ್ಟರೆ ಬೇರುಗಳಿಗೆ ಹೋಗುವದಿಲ್ಲ, ಡ್ರೀಪ ಅಳವಡಿಸಿ ನೀರು ಕೊಟ್ಟರೆ ಬೇರುಗಳಿಗೆ ಹೋಗಿ ಕಬ್ಬಿನ ತೂಕ ಚೆನ್ನಾಗಿ ಬರುತ್ತದೆ ಎಂದರು. ಸಂಕೇಶ್ವರದ ಮುಖ್ಯ ವಿಜ್ಞಾನಿ ತಳಿ ಶಾಸ್ತೊದ ಸಂಜಯ ಪಾಟೀಲ ಮಾತನಾಡಿ ಕಬ್ಬಿನ ರವದಿ ಸುಡಬಾರದು . ಅದು ಮಣ್ಣಿನಲ್ಲಿರುವ ಪೋಷಕಾಂಶ ಹೆಚ್ಚಿಸುತ್ತದೆ. ಜೊತೆಗೆ ಸಸಿ ನೇಡುವಾಗ ರೋಗಾಣು ರಹಿತ ಬೀಜೋಪಚಾರ ಮಾಡಬೇಕು. ಸಾವಯುವ ಪ್ರಾಣಿಗಳ ಗೊಬ್ಬರ ಬಳಕೆ ಮಾಡಿ ಕಬ್ಬಿನ ತೂಕ ಹೆಚ್ಚಿಸಿಕೊಳ್ಳಬಹುದು ಎಂದರು.ಕಬ್ಬು ಅಭಿವೃದ್ದಿ ಸಂಶೋಧನಾ ಕೇಂದ್ರ ಬೆಳಗಾವಿಯ ನಿರ್ದೇಶಕ ರಾಜಗೋಪಾಲ ಮಾತನಾಡಿ ಕಬ್ಬು ಇಳುವರಿ ಹೆಚ್ಚಿಗೆ ಬರಲು ಕಬ್ಬಿನ ತಳಿಗಳು ಮುಖ್ಯ, ನಾವು ಮಣ್ಣಿಗೆ ಕೊಡುವ ಲಕ್ಷ ಕೊಡುತ್ತಿಲ್ಲ,
ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ಬದುಕಿಸಬೇಕು. ಸೂಕ್ಷ್ಮ ಜೀವಿಗಳು ಇದ್ದರೆ ಮಣ್ಣಿನ ಫಲವತ್ತತೆ ಕಾಪಾಡುತ್ತದೆ. ಇಲ್ಲದಿದ್ದರೆ ಮಣ್ಣು ಬರಡಾಗಿ ಇಳುವರಿ ಕಡಿಮೆ ಬರುತ್ತದೆ ಎಂದರು. ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥ ಡಾ. ಶಿವಶಣಕರ ಮೂರ್ತಿ, ಪ್ರಗತಿಪರ ರೈತ ಎಂ.ಆರ್.ಪಾಟೀಲ, ಬಸವರಾಜ ಸಾಹುಕಾರ, ಶ್ರೀಮಂತ ಇಂಡಿ ಮಾತನಾಡಿದರು. ಎಕರೆಗೆ 172ಟನ್ ಕಬ್ಬು ಬೆಳೆದು ರೈತರಿಗೆ ಮಾರ್ಗದರ್ಶನ ನೀಡುತ್ತಿರುವ ಶ್ರೀಮಂತ ಇಂಡಿ ಮತ್ತು ನಾರಾಯಣ ಸಾಳುಂಕೆ ಇವರನ್ನು ಸನ್ಮಾನಿಸಲಾಯಿತು. ಎಂ.ಆರ್. ಪಾಟೀಲ, ಕೃಷಿ ವಿಜ್ಷಾನ ಕೇಂದ್ರದ ಮುಖ್ಯಸ್ಥ ಎಂ.ಶಿವಶಂಕರಮೂರ್ತಿ, ಕೃಷಿ ಇಲಾಖೆಯ ಮಹಾದೇವಪ್ಪ ಏವೂರ, ಶ್ರೀಮಂತ ಇಂಡಿ ಮತ್ತಿತರರು ಮಾತನಾಡಿದರು.
ವೇದಿಕೆಯ ಮೇಲೆ ಕೃಷಿ ಆಡಳಿತ ಮಂಡಳಿ ಸದಸ್ಯ ಪಾರ್ವತಿ ಕುರ್ಲೆ, ಸಹ ವಿಸ್ತರಣಾ ನಿರ್ದೇಶಕ ಡಾ.ಎಂ.ಎಂ.ಜಮಾದಾರ, ರೇವಗೊಂಡಪ್ಪಗೌಡ ಬಿರಾದಾರ, ಪ್ರಗತಿಪರ ರೈತ ಗುರುನಾಥ ಬಗಲಿ, ಭೀಮಾಶಂಕರ ಕಾರ್ಖಾನೆ ಎಂ.ಡಿ ಭಾಗ್ಯಶ್ರೀ ಕುಂಬಾರ, ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ವಿಶ್ವನಾಥ ಬಿರಾದಾರ, ಮತ್ತಿತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 