ಪ್ರಕೃತಿ ಸಹಜ ಜೀವನಶೈಲಿ ಅಳವಡಿಸಿಕೊಳ್ಳಿ- ಡಾ.ರಾಜೇಶ್

ಪ್ರಕೃತಿ ಸಹಜ ಜೀವನಶೈಲಿ ಅಳವಡಿಸಿಕೊಳ್ಳಿ- ಡಾ.ರಾಜೇಶ್  Adopt a natural lifestyle - Dr. Rajesh

        ರಾಣೆಬೆನ್ನೂರು:2 ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ನಾವಿಂದು ಮರೆತಿದ್ದೇವೆ. ಓಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರಿ​‍್ಡಸಿಕೊಳ್ಳುವ ಮೂಲಕ ಮರೆತ ಅಂಶಗಳನ್ನು ಪುನ:  ಪ್ರಕೃತಿ ಚಿಕಿತ್ಸಾ ಪದ್ಧತಿ ನೆನಪಿಸುತ್ತಿದೆ. ಎಂದು ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ  ಡಾ. ರಾಜೇಶ್ ಪಾದೇಕಲ್ ಹೇಳಿದರು. ಅವರು ತಾಲೂಕಿನ ಆರೇ ಮಲ್ಲಾಪುರ ಗ್ರಾಮದ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಸಭಾಭವನದಲ್ಲಿ, ಬಿಎಜೆ ಎಸ್‌.ಎಸ್‌.ಶಿಕ್ಷಣ ಮಹಾವಿದ್ಯಾಲಯ, ಗ್ರಾಮ ಪಂಚಾಯತ್  ಆಯೋಜಿಸಿರುವ, ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರದಲ್ಲಿ ನಡೆದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಜ್ಞಾನ ,ವಿಜ್ಞಾನ, ತಂತ್ರಜ್ಞಾನ ತಂತ್ರಜ್ಞಾನ ಭರಾಟೆಯಲ್ಲಿ ನಮ್ಮ ಪೂರ್ವಜರು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವ ಯೋಗ ಧ್ಯಾನ ಪ್ರಾಣಾಯಾಮ ಮತ್ತು ಆಯುರ್ವೇದ ಪ್ರಕೃತಿ ಚಿಕಿತ್ಸೆಯು ಮರೆತಿದ್ದೇವೆ.

ಇಂದಿನ ಆಧುನಿಕ ಬದುಕು, ಯುವ ಜನಾಂಗದವರಲ್ಲಿ ಹಿತ್ತಲ ಗಿಡ ಮದ್ದಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಜಕ್ಕೂ ಹಿತ್ತಲ ಗಿಡದಲ್ಲಿ ಮದ್ದು ಇದೆ. ಅಂದು ಇದೆ, ಇಂದು  ಇದೆ, ಇದು ಮುಂದೆಯೂ ಇದ್ದೇ ಇರುತ್ತದೆ ಈ ಕುರಿತು  ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ,  ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕಾದ ಅಗತ್ಯವಿದೆ ಎಂದರು.ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ್ ಭಟ್ ಅವರು ಮಾತನಾಡಿ,  ಭಾರತೀಯ ಆಹಾರ- ವಿಹಾರ, ಆಚಾರ- ವಿಚಾರಗಳು ಮನೋದೈಹಿಕ ಆರೋಗ್ಯಕ್ಕೆ ಪೂರಕ. ಮನಸ್ಸು ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳುವುದೇ ಉತ್ತಮ ಆರೋಗ್ಯದ ಗುಟ್ಟು ಎಂದು ಆಧುನಿಕ ವಿಜ್ಞಾನವೂ ಸಹಾ ಒಪ್ಪಿಕೊಳ್ಳುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಇದಕ್ಕೆ ಯೋಗ- ಪ್ರಾಣಾಯಾಮದ ಮೂಲಕ ಇದಕ್ಕೆ ಪರಿಪೂರ್ಣ ಪರಿಹಾರವನ್ನು ನಮ್ಮ ವೇದಕಾಲದ ಋಷಿ ಮುನಿಗಳು ಕಂಡುಕೊಂಡಿದ್ದಾರೆ.

ಪಾಶ್ಚಾತ್ಯರ ಅಂಧಾನುಕರಣೆ ತೊರೆದು ನಮ್ಮತನವನ್ನು ರೂಢಿಸಿಕೊಳ್ಳುವುದು ಇಂದಿನ ಅಗತ್ಯವಿದೆ  ಅಗತ್ಯ ಎಂದರು.ಯಾವುದೇ ಬಾಹ್ಯ ಓಷಧ, ಅಡ್ಡಪರಿಣಾಮಗಳಿಲ್ಲದ ಚಿಕಿತ್ಸಾ ವಿಧಾನ ಪ್ರಕೃತಿ ಚಿಕಿತ್ಸೆ. ಪಂಚಭೂತಗಳಿಂದ ಆದ ಶರೀರಕ್ಕೆ ರೋಗಗಳು ಬಂದಾಗ ಬಗೆ ಹರಿಸುವ ಶಕ್ತಿ ಪಂಚಭೂತಗಳಲ್ಲೇ ಅಡಗಿದೆ ಎಂಬ ತತ್ವವನ್ನು ಆಧರಿಸಿದ ಈ ಸರಳ- ಸಹಜ ಚಿಕಿತ್ಸಾ ಪದ್ಧತಿ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು. ಕಾಲೇಜಿನ ಪ್ರಾಧ್ಯಾಪಕ ಡಾ.ರಾಜೀವ್,ಆರ್‌. ಕೆ, ಎನ್‌ಎಸ್‌ಎಸ್ ಅಧಿಕಾರಿ ಪರಶುರಾಮ ಪವಾರ ಯೋಗ ಪ್ರಾಧ್ಯಾಪಕ ಬಿ.ಜಯರಾಂ, ವೈದ್ಯರಾದ ಡಾ.ಅಭಿರಾಮಿ, ಡಾ.ದೀಪಾ, ಡಾ.ಸಹನಾ, ಡಾ.ಸುಷ್ಮಿತಾ, ವ್ಯವಸ್ಥಾಪಕ ಅನೀಶ್ ಮತ್ತಿತರರು ಉಪಸ್ಥಿತರಿದ್ದರು. ಉಚಿತವಾಗಿ ನಡೆದ ಶಿಬಿರದಲ್ಲಿ ಗ್ರಾಮದ ಮತ್ತು ತಾಲೂಕಿನ  250ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡು ಶಿಬಿರದ  ಪ್ರಯೋಜನ ಪಡೆದರು.