ಕ್ರಿಸ್ ಮಾಸಾಚರಣೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಚಾಲನೆ
Additional District Collector Sidrameshwara launches Christmas celebrations
ಕೊಪ್ಪಳ 01: ಜಿಲ್ಲೆಯಲ್ಲಿರುವ ಸಮಸ್ತ ಜನರಿಗೂ ಕ್ರಿಸ್ಮಸ್ ಪೂರ್ವದ ಶುಭಾಶಯಗಳು.ಎಲ್ಲಾ ಧರ್ಮಗಳ ಸಂದೇಶ ಒಂದೇ ಇದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ನಗರದಲ್ಲಿ ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ಸೋಮವಾರ ಆಯೋಜಿಸಿದ್ದ ಕ್ರಿಸ್ ಮಾಸಾಚರಣೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸನ್ಮಾನ ಸ್ವೀಕರಿಸಿ ಚಾಲನೆ ನೀಡಿ ಮುಂದುವರೆದು ಮಾತನಾಡಿ ಎಲ್ಲರೂ ಖುಷಿ ಹಾಗೂ ಶಾಂತಿಯಿಂದ ಇರಬೇಕು. ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಶುಭ ಹಾರೈಸಿದರು.
ಕೊಪ್ಪಳ ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ ತಮ್ಮ ಅಸೋಸಿಯೇಷನ್ ವತಿಯಿಂದ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿ ಜಿಲ್ಲೆಯಾದ್ಯಂತ ಇಂದಿನಿಂದ ಜನವರಿ ಒಂದರ ವರೆಗೆ ಕ್ರಿಸ್ಮಸ್ ತಾತನ ಉಡುಗೆಗಳನ್ನು ತೊಟ್ಟು ಮನೆ ಮನೆಗಳಿಗೆ ತೆರಳಿ ನಾಟ್ಯ ಮತ್ತು ಭಜನೆಯನ್ನು ಮಾಡುತ್ತಾ ಕ್ರೈಸ್ತ ಜಯಂತಿಯ ಶುಭಾಶಯಗಳು ತಿಳಿಸಲಾಗುವುದು ಅಲ್ಲದೆ ಮೆರವಣಿಗೆ ಮುಖಾಂತರ ಏಸು ಸ್ವಾಮಿ ಅವರ ಪ್ರವಚನವನ್ನು ಹೇಳ್ತಾ ಬೀದಿ ಬೀದಿಗಳಲ್ಲಿ ಸಂಚರಿಸಿ ಕ್ರೈಸ್ತನ ಶಾಂತಿ ಸಂದೇಶವನ್ನು ಎಲ್ಲಾ ಜಾತಿ ಜನರ ನಡುವೆ ಸಾರುವ ಮತ್ತು ಕೇಕ್ ಕಟ್ ಮಾಡುವುದರ ಮೂಲಕ ಕ್ರೈಸ್ತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಫಾದರ್ ತಿಪ್ಪೇಶ್ ನಾಯಕ್ ಕುಷ್ಟಗಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾದರ್ ಡಿ.ಆರೀ್ಪಟರ್ ಗಂಗಾವತಿ. ಜಿಲ್ಲಾ ಖಜಾಂಚಿ ಫಾದರ್ ಎಂ.ಡೇವಿಡ್ ಗಂಗಾವತಿ.ಜಿಲ್ಲಾ ಸಹ ಖಜಾಂಚಿ ಫಾದರ್ ಪ್ರಸಾದ್ ಕುದರಿಮೂತಿ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್. ಹಂಚಳಪ್ಪ ಇಟಗಿ ಹ್ಯಾಟಿ ಮುಂಡರಗಿ. ದುರುಗಪ್ಪ ದೊಡ್ಡಮನಿ ವಟಪರವಿ. ಮುದುಕಪ್ಪ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 