ಮತದಾರರ ಪಟ್ಟಿಯಲ್ಲಿ ಹೆಸರು ಸೇರೆ್ಡ- ತಿದ್ದುಪಡಿಗೆ ಅವಕಾಶ -ಜಿಲ್ಲಾಧಿಕಾರಿ
Add name to voter list - Allow for correction - District Magistrate
ಹಾವೇರಿ 02 : ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ-2026ರ ಅರ್ಹತಾ ದಿನಾಂಕ 01-11-2025ಕ್ಕೆ ಸಂಬಂಧಿಸಿದಂತೆ ದಿನಾಂಕ 30-12-2025 ರಂದು ಹಾವೇರಿ ಜಿಲ್ಲೆಯಾದ್ಯಂತ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ರಾಜಕೀಯ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ತಾಲ್ಲೂಕಿನ ತಹಶೀಲ್ದಾರರ, ತಾಲ್ಲೂಕು ಪಂಚಾಯತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ, ಮತಗಟ್ಟೆಗಳಲ್ಲಿ ಮತ್ತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಮತದಾರರು ಪಟ್ಟಿ ಪರೀಶೀಲಿಸಿಕೊಳ್ಳಬೇಕು ಹಾಗೂ ಸೇರೆ್ಡ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
22,160 ಮತದಾರರು: ಅಂತಿಮ ಮತದಾರರ ಪಟ್ಟಿ ಅನುಸಾರ ಜಿಲ್ಲೆಯಲ್ಲಿ 13,951 ಪುರುಷ ಹಾಗೂ 8,209 ಮಹಿಳೆಯರು ಸೇರಿ 22,160 ಪದವೀಧರ ಮತದಾರರಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 1,263 ಪುರುಷ ಹಾಗೂ 725 ಮಹಿಳೆಯರು ಸೇರಿ 1,988, ಹಾನಗಲ್-1,966 ಪುರುಷ ಹಾಗೂ 977 ಮಹಿಳೆಯರು ಸೇರಿ 2,943, ಹಾವೇರಿ-2,594 ಪುರುಷ ಹಾಗೂ 1,606 ಮಹಿಳೆಯರು ಸೇರಿ 4,200, ಹಿರೇಕೆರೂರು-1,323 ಪುರುಷ ಹಾಗೂ 693 ಮಹಿಳೆಯರು ಸೇರಿ 2,016, ರಟ್ಟಿಹಳ್ಳಿ- 849 ಪುರುಷ ಹಾಗೂ 452 ಮಹಿಳೆಯರು ಸೇರಿ 1,301, ಸವಣೂರು-1,271 ಪುರುಷ ಹಾಗೂ 583 ಮಹಿಳೆಯರು ಸೇರಿ 1,854, ಶಿಗ್ಗಾಂವ-1,343 ಪುರುಷ ಹಾಗೂ 775 ಮಹಿಳೆಯರು ಸೇರಿ 2118 ಹಾಗೂ ರಾಣೇಬೆನ್ನೂರ ತಾಲೂಕಿನಲ್ಲಿ 3,342 ಪುರುಷ ಹಾಗೂ 2,398 ಮಹಿಳೆಯರು ಸೇರಿ 5,740 ಮತದಾರರಿದ್ದಾರೆ.
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರೆ್ಡಗೆ ಜಿಲ್ಲೆಯಲ್ಲಿ ನವಂಬರ್ 25 ರಿಂದ ಡಿಸೆಂಬರ್ 10ರವರೆಗೆ ನಮೂನೆ -18ರಲ್ಲಿ 3,815 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 3,775 ಅರ್ಜಿಗಳು ಕ್ರಮವಾಗಿದ್ದು, 40 ಅರ್ಜಿಗಳು ತಿರಸ್ಕೃತವಾಗಿವೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ 7ರಲ್ಲಿ 9 ಅರ್ಜಿಗಳು ಸಲ್ಲಿಕೆಯಾಗಿವೆ ಹಾಗೂ ತಿದ್ದುಪಡಿಗೆ ನಮೂನೆ-8ರಲ್ಲಿ 186 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ 30-12-2025 ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯ ಒಂದು ಪ್ರತಿಯನ್ನು ಅಧೀಕೃತ ರಾಜಕೀಯ ಪಕ್ಷಿಗಳಿಗೆ ಉಚಿತವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದ ಪಡೆಯಬಹುದಾಗಿದೆ ಎಂದರು. 28 ಮತಗಟ್ಟೆ: ಜಿಲ್ಲೆಯಲ್ಲಿ ಒಟ್ಟು 28 ಮತಗಟ್ಟೆಗಳಿದ್ದು, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ಸವಣೂರು ತಾಲೂಕಿನಲ್ಲಿ ತಲಾ ಎರಡು, ಶಿಗ್ಗಾಂವ-ಮೂರು, ಹಾನಗಲ್-ನಾಲ್ಕು, ಹಾವೇರಿ-ಐದು ಹಾಗೂ ರಾಣೇಬೆನ್ನೂರು ತಾಲೂಕಿನಲ್ಲಿ ಎಂಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 