ನಟಿ ಉಮಾಶ್ರೀ ಶರ್ಮಿಷ್ಠೆಯಾಗಿ ಅದ್ಭುತ ಅಭಿನಯ
Actress Umashree Sharmishtha gives a wonderful performance.
ನಟಿ ಉಮಾಶ್ರೀ ಶರ್ಮಿಷ್ಠೆಯಾಗಿ ಅದ್ಭುತ ಅಭಿನಯ
ಬೆಳಗಾವಿ 6: ಬೆಳಗಾವಿಯ ರಂಗಸಂಪದದವರು ಶ್ರೇಷ್ಠ ನಟಿ, ರಾಜಕಾರಣಿ ಉಮಾಶ್ರೀಯವರು ಅಭಿನಯಿಸಿರುವ ರಂಗಸಂಪದ ಬೆಂಗಳೂರಿನ ತಂಡದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಇದೇ ದಿ.5 ಶನಿವಾರದಂದು ಸಾಯಂಕಾಲ ಸರಿಯಾಗಿ 6-30 ಕ್ಕೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು.
ಸಾಕಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿ, ಮಂತ್ರಿ ಪಟ್ಟವನ್ನು ಅಲಂಕರಿಸಿ ಕರ್ನಾಟಕ ಜನರ ಮನವನ್ನು ಗೆದ್ದಿರುವ ಖ್ಯಾತ ಅಭಿನೇತ್ರಿ ಉಮಾಶ್ರೀಯವರು ಶರ್ಮಿಷ್ಠೆ ಏಕವ್ಯಕ್ತಿ ನಾಟಕದಲ್ಲಿ ಶರ್ಮಿಷ್ಠೆಯಾಗಿ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡಿದರು.
ಮೂಲ ಮರಾಠಿಯ ವಿ.ಸ ಖಾಂಡೇಕರ ಅವರ ಯಯಾತಿ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಮ್. ಇನಾಮದಾರ ಅವರು ಅನುವಾದಿಸಿದ್ದಾರೆ. ಇದೇ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗೀರೀಶ ಕಾರ್ನಾಡರ ರಚಿಸಿರುವ ‘ಯಯಾತಿ’ ನಾಟಕದಲ್ಲಿ ಬರುವ ಒಂದು ಪ್ರಮುಖ ಪಾತ್ರವೇ ಶರ್ಮಿಷ್ಠೆ. ಇವಳು ಒಬ್ಬಳು ರಾಜಕುಮಾರಿಯಾಗಿದ್ದರೂ ದೇವಯಾನಿ ಹತ್ತಿರ ಆಳಾಗಿ ದುಡಿದು ಬದುಕುವ ಪ್ರಸಂಗ ಬಂದಾಗ ಅವಳ ಮನಸ್ಸಿನಲ್ಲಿ ಆಗುವ ತಳಮಳ, ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾವಸ್ತು. ಉಮಾಶ್ರೀಯವರು ಹಾವ,ಭಾವ ಅದ್ಭುತ ಅಭಿನಯದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಈ ಏಕವ್ಯಕ್ತಿಯ ರಂಗ ಪ್ರಯೋಗಗಳು ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ಕರ್ನಾಟಕದ ಉದಯೋನ್ಮುಖ ನಾಟಕಕಾರ ಬೇಲೂರು ರಘುನಂದನ್ ರಚಿಸಿದ್ದಾರೆ. ಕರ್ನಾಟಕದ ಪ್ರಸಿದ್ಧ ರಂಗ ನಿರ್ದೇಶಕ ಮೈಸೂರು ರಂಗಾಯಣದ ಮಾಜಿ ನಿರ್ದೇಶಕರೂ, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಚಿದಂಬರರಾವ್ ಜಂಬೆ ಈ ನಾಟಕವನ್ನು ನಿರ್ದೇಶಸಿದ್ದಾರೆ. ಅನುಷ್ ಶೆಟ್ಟಿಯವರ ಸಂಗೀತ ಈ ನಾಟಕಕ್ಕೆ ಇದೆ. ವಸ್ತ್ರವಿನ್ಯಾಸ, ರಂಗ ಸಜ್ಜಿಕೆ ಮತ್ತು ರಂಗ ಪರಿಕರಗಳ ನಿರ್ವಹಣೆ ಪ್ರಮೋದ್ ಶಿಗ್ಗಾವ್ ಇವರದ್ದಾಗಿದೆ.
ಇದೇ ಸಂದರ್ಭದಲ್ಲಿ ಕಲಾವಿದೆ ಉಮಾಶ್ರೀಯವರನ್ನು ಸನ್ಮಾನಿಸಿ ಗೌರವಿಸಲಾಯಿತು
ಪ್ರಾಸ್ತಾವಿಕ ನುಡಿಗಳನ್ನಾಡಿದ ರಂಗಸಂಪದ ಅಧ್ಯಕ್ಷ ಇಂದು ನಾಟಕ ನೋಡುವ ಪ್ರೇಕ್ಷಕರ ಕೊರತೆಯಿಲ್ಲ. ಸರಿಯಾದ ಸಮಯ ಕಾಪಾಡಿಕೊಂಡು ಹೋಗುವುದು ಅಲ್ಲದೇ ಒಳ್ಳೆಯ ನಾಟಕಗಳನ್ನು ನೀಡಿದಲ್ಲಿ ಪ್ರೇಕ್ಷಕರು ಖಂಡಿತ ಬರುತ್ತಾರೆ ಇದಕ್ಕೆ ಇಂದು ಕಿಕ್ಕಿರಿದು ತುಂಬಿದ ರಂಗಮಂದಿರವೇ ಸಾಕ್ಷಿ ಎಂದು ಹೇಳಿದರು.
ಡಾ.ಬಸವರಾಜ ಜಗಜಂಪಿ, ಪ್ರೊ. ಎಂ. ಎಸ್. ಇಂಚಲ, ಎಲ್.ಎಸ್. ಶಾಸ್ತ್ರಿ, ಜಯಂತ ಜೋಶಿ, ಡಾ. ಸರಜು ಕಾಟ್ಕರ್, ರವಿ ಭಜಂತ್ರಿ, ಸುರೇಖಾ ದೇಸಾಯಿ, ಜ್ಯೋತಿ ಬದಾಮಿ, ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ, ಅನಂತ ಪಪ್ಪು, ಪದ್ಮಾ ಕುಲಕರ್ಣಿ, ಯೊಗೇಶ ದೇಶಪಾಂಡೆ, ಚಿದಾನಂದ ವಾಳ್ಕೆ, ವಿನೋದ ಸಪ್ಪಣ್ಣವರ, ಎ. ಎಂ. ಕುಲಕರ್ಣಿ ರಂಗಸಂಪದದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 