ಕಾರ್ಯಕರ್ತರು ಮುಖ್ಯವಾಹಿನಿಗೆ ಬರಲು ಕಾಂಗ್ರೇಸ ಪಕ್ಷದಿಂದ ಮಾತ್ರ ಸಾಧ್ಯ : ಸಚಿವ ತಿಮ್ಮಾಪೂರ
Activists can come into the mainstream only with the Congress Party: Minister Thimmapura
ಕಾರ್ಯಕರ್ತರು ಮುಖ್ಯವಾಹಿನಿಗೆ ಬರಲು ಕಾಂಗ್ರೇಸ ಪಕ್ಷದಿಂದ ಮಾತ್ರ ಸಾಧ್ಯ : ಸಚಿವ ತಿಮ್ಮಾಪೂರ
ಶಿಗ್ಗಾವಿ 08 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಗಳ ಮೌಲ್ಯ ನಮ್ಮ ಮತದಾರರಿಗೆ ಗೊತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಪಟ್ಟಣದಲ್ಲಿ ಶಿಗ್ಗಾವಿ ಸವಣೂರ ಕ್ಷೇತ್ರದ ಆದಿಜಾಂಬವ ಜನಾಂಗದ ವತಿಯಿಂದ ನಡೆದ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬಸವ ತತ್ವ ಆಧಾರದ ಮೇಲೆ ದೀನದಲಿತರ, ಕಡು ಬಡವರು, ರೈತರು, ಸಣ್ಣ ಸಣ್ಣ ಸಮಾಜದ ಕಾರ್ಯಕರ್ತರು ಮುಖ್ಯವಾಹಿನಿಗೆ ಬರಬೇಕಾದರೆ ಅದು ಕಾಂಗ್ರೇಸ ಪಕ್ಷದ ವತಿಯಿಂದ ಮಾತ್ರ ಸಾಧ್ಯ ಎಂದರು. 30 ವರ್ಷಗಳ ನಂತರ ನಮಗೆ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದರು.
ಸುಳ್ಳು ಬಂಡವಾಳ ಮಾಡಿಕೊಂಡು ಜಾತಿ, ಒಗ್ಗಟ್ಟು ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದ್ದೆ. ತಾಖತ್ತ ಇದ್ದರೆ ವಕ್ಪ ಕಾಯ್ದೆಯನ್ನು ಕೇಂದ್ರ ಸರಕಾರ ರದ್ದು ಮಾಡಲಿ ಎಂದು ಸವಾಲೆಸೆದರು. ನಮ್ಮ ಸಮಾಜದ ಸದಸ್ಯರಿಗೆ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಚುನಾವಣೆಯಲ್ಲಿ ಅವಕಾಶ ಮಾಡಿ ಕೊಡಿ ಹಾಗೂ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಬಂದಾಗ ಕೆಲಸವನ್ನು ಮಾಡಿಕೊಡಬೇಕು ಎಂದು ಜೋಡೆತ್ತಿನ ಹತ್ತಿರ ಮನವಿ ಮಾಡಿದರು.
ಶಾಸಕ ಯಾಸೀರಖಾನ ಪಠಾಣ ಮಾತನಾಡಿ ಬಾಬಾ ಸಾಹೇಬ ಅಂಬೇಡ್ಕರ ಸಂವಿಧಾನವನ್ನು ರಚಿಸದೇ ಇದ್ದರೇ ಇಂದು ಜನ ಸಾಮಾನ್ಯ ಹಾಗೂ ರೈತ ಕುಟುಂಬದಿಂದ ಬಂದಂತಹ ನಾನು ವಿಧಾನ ಪರಿಷತ್ತ ಸದಸ್ಯರಾಗಲು ಸಂವಿಧಾನವೇ ಕಾರಣ ಅಲ್ಲದೇ ನಮ್ಮ ಸರಕಾರದ ಪಂಚ ಗ್ಯಾರಂಟಿಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ ಹಾಗೂ ಕ್ಷೇತ್ರದ ಪ್ರತಿಯೊಂದು ದೀನ ದಲಿತರ ಓಣಿಗಳಲ್ಲಿ ಸಮಗ್ರ ಅಭಿವೃದ್ಧಿ ಹಾಗೂ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಹಾಗೂ ಉಳಿದ ಸಣ್ಣ ಸಣ್ಣ ಸಮಾಜದ ಅಭಿವೃದ್ಧಿಯನ್ನು ಅದಿವೇಶನದ ಬಳಿಕ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದರು.
ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮಾತನಾಡಿ ಸರ್ವ ಜನಾಂಗದ ಅಭಿವೃದ್ದಿಗೋಸ್ಕರ ನೀಡಿದ ಸಂವಿಧಾನ ವಿಶ್ವದಲ್ಲಿ ಶ್ರೇಷ್ಠ ಸಂವಿಧಾನ ಹಾಗೂ ಸಂವಿಧಾನ ರಚಿಸಿ ಬಡವರ ಫರವಾಗಿ ಅನೇಕ ಕೆಲಸಗಳನ್ನು ಮಾಡಿ ದೀನ ದಲಿತರ, ಕಡು ಬಡವರ ಸಮಗ್ರ ಅಭಿವೃದ್ಧಿಗೆ ಸಂವಿಧಾನ ಕಾರಣವಾಗಿದೆ ಆ ನಿಟ್ಟಿನಲ್ಲಿ ಕಾಂಗ್ರೇಸ ಸರಕಾರ ಬಡವರ ಪಾಲಿಗೆ ಕಾಮದೇನು ಆಗಿದೆ ಹಾಗೂ ವಿಶ್ವದಲ್ಲಿ ಭಾಗ್ಯಗಳ ಸರದಾರ ಯಾರಾದರೂ ಇದ್ದರೆ ಅದು ಸಿ.ಎಂ ಸಿದ್ದರಾಮಯ್ಯ ಎಂದರು.
ಮುಖಂಡ ಮಂಜುನಾಥ ತಿಮ್ಮಾಪೂರ, ಬಿ.ಸಿ.ಪಾಟೀಲ, ಪ್ರೇಮಾ ಪಾಟೀಲ, ವಸಂತಾ ಬಾಗೂರ, ಮಲ್ಲಮ್ಮ ಸೋಮನಕಟ್ಟಿ, ಭೀಮಣ್ಣಾ ಹೊಟ್ಟುರ, ಬಸವರಾಜ, ಯಲ್ಲಪ್ಪ ಹರಿಜನ, ಸುರೇಶ ಹರಿಜನ, ಸೇರಿದಂತೆ ಶೇಖಪ್ಪ ಮಣಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 