70ನೇ ರಾಜ್ಯೋತ್ಸವದ ಅಂಗವಾಗಿ ಸಾಧಕರ ಸನ್ಮಾನ
Achievements felicitated as part of the 70th Rajyotsava
ಧಾರವಾಡ 08: ಕನ್ನಡದ ಕಂಪನ್ನು ನಾಡಿನಲ್ಲಿ ಮಾತ್ರವಲ್ಲ ಗಡಿಯಾಚೆಗೂ ವಿಸ್ತರಿಸಿದ ಕ.ವಿ.ವ ಸಂಘದ ಮಹೋನ್ನತ ಸಾಧನೆಯಾಗಿದೆ ಎಂದು ನ್ಯಾಯವಾದಿ ಪ್ರಕಾಶ ಭಾವಿಕಟ್ಟಿ ಅಭಿಪ್ರಾಯಪಟ್ಟರು.ಅವರು ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕವಿವ ಸಂಘವು ನವ್ಹಂಬರ ತಿಂಗಳು ಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿ ಕನ್ನಡ ಭಾಷೆ ಸಂಸ್ಕೃತಿಯ ಹಿರಿಮೆ ಹೆಚ್ಚಿಸಿದೆ. ವಿದ್ಯಾರ್ಥಿಗಳು ಇಂದು ಓದಿನ ಜೊತೆಗೆ ಕನ್ನಡ ಕಟ್ಟುವ ಕಾರ್ಯ ಮಾಡಬೇಕು. ಅನ್ಯ ವಿಷಯಗಳತ್ತ ಗಮನ ಕೊಡದೇ ಸಮಯ ಪ್ರಜ್ಞೆಯೊಂದಿಗೆ ಅಧ್ಯಯನ ಮಾಡಬೇಕೆಂದು ತಿಳಿಸಿದರು.ಸಾಧಕರ ಸನ್ಮಾನ ಪ್ರಶಸ್ತಿಗೆ ಭಾಜನರಾದ ವಾ.ಕ.ರಾ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕರಾದ ಪ್ರಕಾಶಯ್ಯ ಶಿವಯೋಗಿಮಠ ಸನ್ಮಾನ ಸ್ವೀಕರಿಸಿ ಈ ಸನ್ಮಾನ ಇನ್ನೂ ಹೆಚ್ಚು ನನಗೆ ಕನ್ನಡದ ಕೆಲಸ ಮಾಡಲು ಪ್ರೇರಣೆಯಾಗಿದೆ. ನಾನು ನಿರ್ವಾಹಕನಾಗಿ 2 ದಶಕಗಳಿಂದ ಶ್ರದ್ಧೆ ಬದ್ದತೆಯಿಂದ ಕಾರ್ಯ ಮಾಡಿದ್ದೇನೆ. ಪ್ರಯಾಣಿಕರ ಜೊತೆ ಆಂಗ್ಲ ಪದ ಬಳಸದೇ ಕನ್ನಡದಲ್ಲೇ ವ್ಯವಹರಿಸಿದ್ದೇನೆ. ಕನ್ನಡದ ಬಗ್ಗೆ ಕಿಟೆಲ್‌ರಂತಹ ವಿದೇಶಿ ಮಹನೀಯರು ಬಹುದೊಡ್ಡ ಕೊಡುಗೆ ನೀಡಿದ್ದು. ಕನ್ನಡಿಗರಾಗಿ ನಾವೇ ಕನ್ನಡದಲ್ಲಿ ವ್ಯವಹರಿಸದಿದ್ದರೆ ಹೇಗೆ? ಭಾಷೆ ಉಳಿದರೆ ಮಾತ್ರ ನಾಡು ಸಮೃದ್ಧವಾಗಲು ಸಾಧ್ಯ ಎಂದು ಹೇಳಿದರು.ಕಿಟೆಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ರೇಖಾ ಜೋಗುಳ ಮಾತನಾಡಿ, ಕವಿವ ಸಂಘಕ್ಕೂ ನಮ್ಮ ಸಂಸ್ಥೆಗಳಿಗೂ ಅವಿನಾಭಾವ ಸಂಬಂಧ ಮೊದಲಿನಿಂದಲೂ ಇದೆ. ಕನ್ನಡದ ಕೆಲಸಕ್ಕೆ ನಮ್ಮ ಸಂಸ್ಥೆಯ ಸಹಕಾರ ಸದಾಕಾಲ ತಮಗೆ ಇದೆ. ನಮ್ಮ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು ಜಾನಪದ ವಾದ್ಯ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೆ ಸ್ಥಾನ ಪಡೆದದ್ದು ಅಭಿಮಾನದ ಸಂಗತಿ ಎಂದರು.ಕಿಟೆಲ್ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಜಾನಪದ ಸಮೂಹ ನೃತ್ಯ, ಹಾಡು ವೈವಿದ್ಯಮಯ ಕಾರ್ಯಕ್ರಮಗಳು ಜರುಗಿದವು.ಪ್ರಾರಂಭದಲ್ಲಿ ಸರಿತಾ ಮಹೇಶ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ತಬಲಾ ಸಾಥ್ ಡಾ. ಅಲ್ಲಮಪ್ರಭು ಕಡಕೋಳ ಹಾಗೂ ವಿನೋದ ಪಾಟೀಲ ಹಾರ್ಮೊನಿಯಮ್ ಸಾಥ್ ನೀಡಿದರು.ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ಸನ್ಮಾನ ಪತ್ರ ಓದಿದರು ಶಿವಾನಂದ ಭಾವಿಕಟ್ಟಿ ವಂದಿಸಿದರು. ಪ್ರೊ. ಎಸ್. ಜಿ. ಬೇಲಿ, ಡಾ. ಸುರೇಶ ನ್ಯಾಮತಿ, ಕಿರಣ ಸಿದ್ಧಾಪೂರ, ಭೀಮು ಖಾಟವೆ, ಸುಪ್ರೀಯಾ ಭಟ್, ಈರಣ್ಣ ನವಲಗುಂದ, ಮೆಹಬೂಬಅಲಿ, ಬಸಯ್ಯ ಪತ್ರಿಮಠ, ಡಾ. ಪ್ರಕಾಶ ಮಲ್ಲಿಗವಾಡ ಹಾಗೂ ಕಿಟೆಲ್ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 