ಛಲ, ಬದ್ಧತೆ ಹಾಗೂ ಕ್ರೀಯಾಶೀಲತೆ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ

 ಛಲ, ಬದ್ಧತೆ ಹಾಗೂ ಕ್ರೀಯಾಶೀಲತೆ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ   Achievement is possible only when there is determination, commitment, and proactivity.

ಧಾರವಾಡ 10: ಶಿಕ್ಷಕರು ಉತ್ತಮ ಸಮಾಜ ಹಾಗೂ ದೇಶದ ನಿರ್ಮಾತೃಗಳು ಎಂದು ಕರೆಯುವ ನಮ್ಮ ಸಮಾಜದಲ್ಲಿ ನನ್ನಿಂದ ಒಂದು ಉತ್ತಮ ಚಲನಚಿತ್ರದ ನಿರ್ಮಾಣ ಮಾಡಲು ಏಕೆ ಸಾಧ್ಯವಾಗುವುದಿಲ್ಲ ಎಂಬ ಫಲದೊಂದಿಗೆ ನಾನು ಚಲನಚಿತ್ರವೊಂದನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು. ಛಲ, ಬದ್ಧತೆ ಹಾಗೂ ಕ್ರೀಯಾಶೀಲತೆ ಇದ್ದಾಗ ಮಾತ್ರ ನಾವು ಸಾಧನೆ ಮಾಡಬಹುದೆಂದು ಶಿಕ್ಷಕ ಸಾಹಿತಿ, ಚಿತ್ರ ನಿರ್ದೇಶಕ ಉಮೇಶ ಬಡಿಗೇರ ಅಭಿಪ್ರಾಯಪಟ್ಟರು.  

ಅವರು ದಿ: 09-11-2025 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ನನ್ನ ವೃತ್ತಿಧರ್ಮ ಕಾಪಾಡುವುದರ ಜೊತೆಗೆ ಸಮಯ ಸಿಕ್ಕಾಗ ಸಮಾಜಮುಖಿ ಚಿಂತನೆಗಳ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇನೆ. ಸಮಾಜ ಪರಿವರ್ತನೆಗಾಗಿ ಒಳ್ಳೆಯ ಸಂದೇಶ ಸಾರುವ ಸಾಕ್ಷ್ಯಚಿತ್ರ, ಕಿರುಚಿತ್ರಗಳನ್ನು ನಿರ್ದೇಶನ  ಹಾಗೂ ನಿರ್ಮಾಣ ಮಾಡಿದ್ದೇನೆ. ಅದೇ ನನ್ನ ಸಾಧನೆಎಂತನೂಅಲ್ಲ, ನನ್ನದೊಂದು ಸಣ್ಣ ಪ್ರಯತ್ನವಷ್ಟೇ. ಕ.ವಿ.ವ. ಸಂಘ ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು. 

ಡಾ. ಶಾಂತಾರಾಮ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ.ವಿ.ವ. ಸಂಘವು ನಾಡಿನ ಸಾಂಸ್ಕೃತಿಕ ಕ್ಷೇತ್ರದಎಲ್ಲಾ ಪ್ರತಿಭಾನ್ವಿತ ಸಾಧಕರನ್ನು ಗುರುತಿಸಿ, ಸನ್ಮಾನಿಸುವ ಈ ಪರಂಪರೆ ಅಭಿನಂದನೀಯ. ಕ.ವಿ.ವ. ಸಂಘದ ಈ ಪರಂಪರೆ ಮುಂದುವರೆಯಲಿ. ಕ.ವಿ.ವ. ಸಂಘವು ನನ್ನ ಸಂಗೀತಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸಿದ ಖುಷಿ ನನಗಿದೆಎಂದು ಹೇಳಿದರು. 

ಪ್ರಾರಂಭದಲ್ಲಿ ಮಾಯಾಚಿಕ್ಕೇರೂರಅವರಿಂದ ಸಂಗೀತ ಗೋಷ್ಠಿ ಜರುಗಿತು.ಡಾ. ಅನೀಲ ಮೇತ್ರಿತಬಲಾ ಹಾಗೂ ಆದರ್ಶ ಬಗಾಡೆ ಹಾರ್ಮೋನಿಯಂ ಸಾಥ ನೀಡಿದರು.ಪೊಲೀಸ ಅಧಿಕಾರಿಗಳಾದ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಜಾನಪದ ಹಾಡುಗಾರಿಕೆ ಪ್ರಸ್ತುತಪಡಿಸಿದರು.ಕೊನೆಯಲ್ಲಿ ಭರತ ನೃತ್ಯಅಕಾಡೆಮಿಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನವಾಯಿತು. 

ಶಂಕರ ಕುಂಬಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿದರು. ಡಾ. ಜಿನದತ್ತ ಅ. ಹಡಗಲಿ ವಂದಿಸಿದರು.  ಕಾರ್ಯಕ್ರಮದಲ್ಲಿ ರಾಜೇಂದ್ರ ಟೊಣಪಿ, ಸಿ.ಎಸ್‌.ಪಾಟೀಲ ಕುಲಕರ್ಣಿ, ಶಂಕರಘಟ್ನಟ್ಟಿ, ಡಾ. ಬಾಳಪ್ಪ ಚಿನಗುಡಿ, ಭೀಮುಖಟಾವಿ, ಚಂದ್ರಶೇಖರರಾಯರ್ ಸೇರಿದಂತೆ ಮುಂತಾದವರಿದ್ದರು.