ಲೋಕದರ್ಶನ ವರದಿ
ದಾಂಡೇಲಿ 11: ಸಾಮಾಜಿಕ ಜಾಲತಾಣಗಳಲ್ಲಿ ಮಹಾಪುರುಷರ ಕುರಿತು ಅವಹೇಳನಕಾರಿ ಪೋಸ್ಟಿಂಗ್ ಹಾಕುವುದು ಅಥವಾ ಕಮೇಂಟ್ ಮಾಡುವುದು ಯಾವುದೇ ರೀತಿಯ ಶೂರತನದ ಲಕ್ಷಣವಲ್ಲ ಇದು ಹೇಡಿಗಳ ಲಕ್ಷಣವಾಗಿದೆ ಇಂತಹ ಪೋಸ್ಟಿಂಗ್ ಅಥವಾ ಕಮೇಂಟ್ ಮಾಡುವುದನ್ನು ನಾನು ಖಂಡಿಸುತ್ತೇನೆಂದು ಮಾಜಿ ಶಾಸಕ ಭಾ.ಜ.ಪ ಮುಖಂಡ ಸುನೀಲ ಹೆಗಡೆ ಹೇಳಿದ್ದಾರೆ.
ನಗರದ 3 ನಂ ಗೇಟ್ ಯುವಕನನ್ನು ವಿವಾದಿತ ಪೋಸ್ಟಿಂಗ್ ಹಾಕಿದಕ್ಕೆ ನಗರದ ಪೋಲಿಸರು ಬಂಧಿಸಿರುವ ಕುರಿತು ಮಾಹಿತಿ ಪಡೆಯಲು ದಾಂಡೇಲಿ ನಗರ ಪೋಲಿಸ್ ಠಾಣೆಗೆ ಆಗಮಿಸಿದ ಸುನೀಲ ಹೆಗಡೆಯವರು ವೃತ್ತ ನೀರಿಕ್ಷಕ ಅನಿಸ್ ಮುಜಾವರ ಅವರ ಬಳಿ ಮಾತುಕತೆ ನಡೆಸಿದರು. ವಿವಾದಿತ ಪೋಸ್ಟಿಂಗ್ ಮಾಡುವವರನ್ನು ನಾನು ಬೆಂಬಲಿಸುವುದಿಲ್ಲ ಹಾಗೆಯೆ ದಾಂಡೇಲಿ ನಗರ ಪೋಲಿಸ್ ಠಾಣೆಯ ವೃತ್ತ ನೀರಿಕ್ಷಕರ ಜಿಪ್ ಚಾಲಕ ಇಪರ್ಾನ್ ಶೇಖ ಸಹ ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರಕಾರದ ವಿರುದ್ದ ಹಾಗೂ ಬಹು ಸಂಖ್ಯಾತರ ಧರ್ಮದ ವಿರುದ್ದ ವಿವಾದಿತ ಅವಹೇಳನಕಾರಿ ಪೋಸ್ಟಿಂಗ್ ಮಾಡುತ್ತಿದ್ದು ಆತನ ಮೇಲು ಸಹ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕೆಂದು ಸುನೀಲ ಹೆಗಡೆ ಮೌಕಿಕವಾಗಿ ವೃತ್ತ ನೀರಿಕ್ಷಕ ಅನಿಸ್ ಮುಜಾವರ ಬಳಿ ಮನವಿ ಮಾಡಿಕೊಂಡರು.
ಟಿಪ್ಪು ಸುಲ್ತಾನ ಜಯಂತಿಯ ಮೆರವಣಿಗೆಗೆ ಯಾವುದೇ ರೀತಿಯಿಂದಲು ಅನುಮತಿ ನೀಡಬಾರದೆಂದು ಆಗ್ರಹಿಸಿದ ಸುನೀಲ ಹೆಗಡೆ ಇದಕ್ಕೆ ತಮ್ಮ ಸಂಪೂರ್ಣ ವಿರೋಧವಿದೆ, ಮೆರವಣಿಗೆಗೆ ಅನುಮತಿ ನೀಡಿ ಏನಾದರೂ ಹೆಚ್ಚಿನ ಅನಾಹುತವಾದರೆ ಅದಕ್ಕೆ ಸ್ಥಳೀಯ ಆಡಳಿತವೇ ಜವಾಬ್ದಾರಿಯಾಗುತ್ತದೆ ಎಂದು ಸುನೀಲ ಹೆಗಡೆ ತಿಳಿಸಿದರು. ಈ ಸಂದರ್ಭದಲ್ಲಿ ಭಾ.ಜ.ಪ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಜಿಲ್ಲಾ ಕಾರ್ಯದಶರ್ಿ ಸುಧಾಕರ ರೆಡ್ಡಿ, ಟಿ.ಎಸ್. ಬಾಲಮಣಿ, ನಗರಸಭಾ ಸದಸ್ಯ ನರೇಂದ್ರ ಚವ್ಹಾಣ, ಗುರುಮಠಪತಿ, ಮಂಜುನಾಥ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.