ನವದೆಹಲಿ, ಜುಲೈ 8: ಕೊರೊನಾ ಸೋಂಕಿತ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಖಾತರಿ ಪಡಿಸಿ ಸಾವಿನ ಪ್ರಮಾಣ ತಗ್ಗಿಸಲು, ವಿವಿಧ ರಾಜ್ಯಗಳ ಆಸ್ಪತ್ರೆಯ ತುರ್ತು ನಿಗಾ ಘಟಕಗಳನ್ನು ನಿಭಾಯಿಸುವ ವೈದ್ಯರಿಗೆ ದೆಹಲಿಯ ಏಮ್ಸ್ ತಜ್ಞ ವೈದ್ಯರಿಂದ ಮಾರ್ಗದರ್ಶನ ಒದಗಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ಧರಿಸಿದೆ.
ವಿಡಿಯೋ ಕಾನ್ಪರೆನ್ಸ್/ ಟೆಲಿಕಾನ್ಫರೆನ್ಸ್ ಮೂಲಕ ವಿವಿಧ ರಾಜ್ಯ ಸರ್ಕಾರ ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿರುವ ಕೋವಿಡ್ -೧೯ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಕಲ್ಪಿಸಲು ದೆಹಲಿಯ ಏಮ್ಸ್ ತಜ್ಞ ವೈದ್ಯರ ತಂಡ ಮಾರ್ಗದರ್ಶನ ಒದಗಿಸಲಿದೆ.
ವಾರದಲ್ಲಿ ಎರಡು ಬಾರಿ ಮಂಗಳವಾರ ಹಾಗೂ ಶುಕ್ರವಾರ ರಾಜ್ಯಗಳ ವೈದ್ಯರಿಗೆ ಸಕಾಲಿಕ ಹಾಗೂ ತಜ್ಞ ಮಾರ್ಗದರ್ಶನವನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ತಜ್ಞ ವೈದ್ಯರು ಈ ಟೆಲಿ ಸಮಾಲೋಚನೆಯ ಮೂಲಕ ನೀಡಲಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸಲು ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಖಾತರಿಪಡಿಸಲು ರಾಜ್ಯದಲ್ಲಿರುವ ವೈದ್ಯರಿಗೆ ತಜ್ಞರು ಮಾರ್ಗರ್ಶನ ಮಾಡಲಿದ್ದಾರೆ.
ಈ ಕುರಿತ ಮೊದಲ ಟೆಲಿ ಮಾರ್ಗದರ್ಶನ ಬುಧವಾರ ಸಂಜೆ ಆರಂಭಗೊಳ್ಳಲಿದೆ
ಮೊದಲ ಟೆಲಿ ಮಾರ್ಗ ದರ್ಶನಕ್ಕೆ ಮುಂಬೈನ ಒಂಬತ್ತು ಹಾಗೂ ಗೋವಾದ ಒಂದು ಸೇರಿ ೧೦ ಆಸ್ಪತ್ರೆಗಳು ಆಯ್ಕೆಯಾಗಿವೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.