ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಎಬಿವಿಪಿ ಧರಣಿ : ಕೌಜಲಗಿ ಭರವಸೆ ಮೇರೆಗೆ ಹಿಂದಕ್ಕೆ

ಬೈಲಹೊಂಗಲ 14: ಪಟ್ಟಣದ ಬಡ ವಿದ್ಯಾಥರ್ಿಗಳಿಗೆ ಅನುಕೂಲವಾಗಲು  ಸಕರ್ಾರಿ ಪ್ರಥಮ ದಜರ್ೆಯ ಗಂಡು ಮಕ್ಕಳ ಮಹಾವಿದ್ಯಾಲಯ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಸಂಘಟನೆ ಆಶ್ರಯದಲ್ಲಿ ವಿವಿಧ ಕಾಲೇಜು ವಿದ್ಯಾಥರ್ಿಗಳು ನಡೆಸಿದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಮಹಾಂತೇಶ ಕೌಜಲಗಿ ಶುಕ್ರವಾರ ಭೇಟಿ ನೀಡಿ ಕಾಲೇಜು ಸ್ಥಾಪನೆಗೆ ಭರವಸೆ ನೀಡಿದರಿಂದ ವಿದ್ಯಾಥರ್ಿಗಳು ಅನಿಧರ್ಿಷ್ಟ ಧರಣಿ ಸತ್ಯಾಗ್ರಹ ಹಿಂಪಡೆದರು.

    ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ಧಾರೂಢ ಹೊಂಡಪ್ಪನವರ ಮಾತನಾಡಿ, ಈ ಭಾಗದಲ್ಲಿ 13 ಸಾವಿರಕ್ಕೂ ಹೆಚ್ಚು ಪದವಿ ಶಿಕ್ಷಣ ಓದುವ ವಿದ್ಯಾಥರ್ಿಗಳಿದ್ದು, ಬಿಎ, ಬಿಕಾಂ, ಬಿ.ಎಸ್ಸಿ ವಿಭಾಗಗಳನ್ನು ಸ್ಥಾಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಫೀ ಇರುವದರಿಂದ ಬಡ ವಿದ್ಯಾಥರ್ಿಗಳಿಗೆ ಶಿಕ್ಷಣ ಓದಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಂಬಂಧಿಸಿದ ಉನ್ನತ ಶಿಕ್ಷಣ ಸಚಿವರಿಗೆ, ಶಾಸಕರಿಗೆ, ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿದ್ಯಾಥರ್ಿಗಳಿಗೆ ಆಗುತ್ತಿರುವ ಶೋಷಣೆ ತಡೆಯಲು ಸಕರ್ಾರ ಬೈಲಹೊಂಗಲಕ್ಕೆ ಕೂಡಲೇ ಸಕರ್ಾರಿ ಪ್ರಥಮ ದಜರ್ೆ ಮಹಾವಿದ್ಯಾಲಯ ಮಂಜೂರು ಮಾಡಿ ಬಡ ಮಕ್ಕಳು ಪದವಿ ಓದಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ವಿದ್ಯಾಥರ್ಿಗಳು ಬೀದಿಗಿಳಿದು ಉಗ್ರ ಪ್ರತಿಭಟನೆ, ಬೈಲಹೊಂಗಲ ಬಂದ ಮಾಡಲಾಗುವುದು  ಎಂದು ಎಚ್ಚರಿಸಿದರು. 

    ವಿದ್ಯಾಥರ್ಿಗಳ ಧರಣಿಗೆ ಸ್ಪಂದಿಸಿದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಈ ವರ್ಷ ಬಜೆಟ್ನಲ್ಲಿ ಕಾಲೇಜು ಸ್ಥಾಪನೆ ಕುರಿತು ಯಾವುದೆ ನಿಧರ್ಾರ ಇಲ್ಲ. ಮುಂದಿನ ಬಜೆಟ್ನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಕರ್ಾರ ಮಟ್ಟದಲ್ಲಿ ಕಾಲೇಜು ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಮನವಿ ಸೀಕರಿಸಿ ಭರವಸೆ ನೀಡಿದರು. ಶಾಸಕರ ಭರವಸೆ ನಂತರ ವಿದ್ಯಾಥರ್ಿಗಳು ಧರಣಿಯನ್ನು ಹಿಂದಕ್ಕೆ ಪಡೆದರು.

   ವಿದ್ಯಾಥರ್ಿಗಳಾದ ಪ್ರವೀಣ ತಿಗಡಿ, ಸೋಮೇಶ ಅಸುಂಡಿ, ಅಂಕಿತ ಶಿಂತ್ರಿ, ಸಾಗರ ಗಂಗಬಸಪ್ಪನವರ, ಕಾವೇರಿ ಬಡಿಗೇರ, ವಿಜಯಲಕ್ಷ್ಮೀ ಪಾಟೀಲ, ಭಾರತಿ ಮೇದಾರ, ಅಂಜಲಿ ಹಟ್ಟಿಯವರ, ಭಾರತಿ ಸಂಬನ್ನವರ, ಮುಖಂಡರಾದ ಶ್ರೀಶೈಲ ಬೋಳನ್ನವರ, ಶಿವರಂಜನ ಬೋಳನ್ನವರ, ಮಹಾಂತೇಶ ತುರಮರಿ, ರಫೀಕ ಬಡೇಘರ, ಶಿವಾನಂದ ಕೋಲಕಾರ ಪಾಲ್ಗೊಂಡಿದ್ದರು.