ಮುತವಾಡ ಗ್ರಾಮದ ಮಹಿಳೆ ಕಾಣೆ
ಯರಗಟ್ಟಿ 30: ಸಮೀಪದ ಮುತವಾಡ ಗ್ರಾಮದ ಮಹಿಳೆ ದಿನಾಂಕ 25 09-2024 ರಂದು ಕಾಣೆಯಾಗಿದ್ದಾಳೆ ಲಕ್ಷ್ಮೀ ಗಂಡ ಹೊಳೆಪ್ಪ ನೇಸರಗಿ (27) ಸಾ : ಲಗಮೇಶ್ವರ ತಾಲೂಕು ಗೋಕಾಕ ಎಂಬುವ ಯುವತಿಯನ್ನು ಹುಡುಕಿ ಕೊಡುವಂತೆ ಈಕೆಯ ತಾಯಿ ಮಲ್ಲವ್ವ ಬಸಪ್ಪ ಬಾಲಪ್ಪಗೋಳ ಸಾ: ಮುತವಾಡ ಇವರು ಮುರಗೋಡ ಪೊಲೀಸ ಠಾಣೆಯಲ್ಲಿ ದಿನಾಂಕ 28-01-2025 ರಂದು ದೂರು ದಾಖಲು ಮಾಡಿದ್ದಾರೆ.ಮನೆಯಿಂದ ಈಕೆ ಹೊರ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಟಾಪ್, ಗುಲಾಬಿ ಬಣ್ಣದ ಪ್ಯಾಂಟ್ ಧರಿಸಿದ್ದು 5.2 ಅಡಿ ಎತ್ತರವಿದ್ದಾಳೆ.
ಕನ್ನಡ ಮಾತನಾಡುತ್ತಾಳೆ. ಈಕೆಯನ್ನು ಪತ್ತೆ ಮಾಡುವಂತೆ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿದ್ದು,ಈ ಮಹಿಳೆ ಎಲ್ಲಾದರೂ ಕಂಡುಬಂದಲ್ಲಿ ಮುರಗೋಡ ಪೊಲೀಸ ಠಾಣೆಗೆ ಮಾಹಿತಿ ನೀಡಲು ಸಿಪಿಐ ಆಯ್. ಎಮ್ ಮಠಪತಿ ತಿಳಿಸಿದ್ದಾರೆ.