ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಶರಣಪ್ಪ ಸುರಗುಂಟಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರೀಶೀಲನೆ
A team of officials led by Sharanappa Suragunti, Chief Engineer of the Public Works Department, vis
ಕಂಪ್ಲಿ 13: ಕಂಪ್ಲಿ-ಕೋಟೆಯ ಪ್ರದೇಶದ ತುಂಗಭದ್ರ ನದಿಯ ಶಿಥಿಲಗೊಂಡ ಸೇತುವೆ ಸ್ಥಳಕ್ಕೆ ಕಲಬುರ್ಗಿ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಶರಣಪ್ಪ ಸುರಗುಂಟಿ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರೀಶೀಲಿಸಿದರು. ನಂತರ ಶರಣಪ್ಪ ಸುರಗುಂಟಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಸೇತುವೆ ಕಂಪ್ಲಿ-ಗಂಗಾವತಿ ಸಂಪರ್ಕದ ಕೊಂಡಿಯಾಗಿದೆ. ಕಂಪ್ಲಿ ಸೇತುವೆ ಹಳೆದಾಗಿರುವ ಜೊತೆಗೆ ಶಿಥಿಲದ ವ್ಯವಸ್ಥೆಯಲ್ಲಿರುವುದರಿಂದ ಹೊಸ ಸೇತುವೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನಲೆ ಮಾನ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಸ್ಥಳೀಯ ಶಾಸಕ ಜೆ.ಎನ್.ಗಣೇಶ ಅವರು ಈಗಾಗಲೇ ಪರೀಶೀಲನೆ ಮಾಡಿದ್ದು, ಸರ್ಕಾರದ ಮಟ್ಟದಲ್ಲಿ ಪ್ರಾಸ್ತಾಪಿಸಿ, ಹೊಸ ಸೇತುವೆಯ ಸಂಬಂಧ ಸರ್ಕಾರದ ನಿರ್ದೇಶನಂತೆ ಕಂಪ್ಲಿ ಸೇತುವೆಗೆ ಖುದ್ದಾಗಿ ಭೇಟಿ ನೀಡಿ ಪರೀಶೀಲಿಸಲಾಗಿದೆ. ಇಲ್ಲಿನ ಸೇತುವೆಯೂ ನದಿ ಪ್ರವಾಹದಿಂದ ಶಿಥಿಲಗೊಂಡು, ಸಂಚಾರಕ್ಕೆ ಬಹಳಷ್ಟು ಅಡೆತಡೆಯನ್ನುಂಟು ಮಾಡುತ್ತಿದೆ. ಇದರಿಂದ ಹೊಸ ಸೇತುವೆಯ ಅಗತ್ಯತೆ ಇರುವದರಿಂದ ಹೊಸ ಸೇತುವೆ ನಿರ್ಮಾಣಕ್ಕಾಗಿ ಸೂಕ್ತ ಸ್ಥಳವನ್ನು ಸೂಚಿಸಬೇಕಾಗಿದೆ. ಆದ್ದರಿಂದ ಸ್ಥಳ ಪರೀಶೀಲಿಸಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಾರಿ ಕಂಪ್ಲಿ ಹೊಸ ಸೇತುವೆ ನಿರ್ಮಾಣವಾಗುವ ಭರವಸೆ ಮೂಡುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ಲೋಕೋಪಯೋಗಿ ಇಲಾಖೆಯ ಅಧಿಕ್ಷಕ ಅಭಿಯಂತರ ತಿಮ್ಮರಾಯಪ್ಪ, ಇಇಗಳಾದ ಹೇಮ್‌ರಾಜ್, ಹೇಮಂತರಾಜ್, ಎಇ ಬಸವರೆಡ್ಡಿ, ವಿಶ್ವನಾಥ, ಜೆಇ ಆನಂದ ಸೇರಿದಂತೆ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 