ಎಐ ತಂತ್ರಜ್ಞಾನದ ಹೊಸ ಆಯಾಮ: ಡಾ. ಬಿ.ಆರ್ ಪಾಟೀಲ್
A new dimension of AI technology: Dr. B.R. Patil
ಬಾಗಲಕೋಟೆ 22: ಎಐ ತಂತ್ರಜ್ಞಾನದ ಹೊಸ ಆಯಾಮವಾಗಿದ್ದು ಅದನ್ನು ಸರಿಯಾಗಿ ಅರ್ಥೈಸಿಕೊಂಡು ಬಳಸಿಕೊಳ್ಳುವ ಕೆಲಸ ಮಾಡಬೇಕು. ಕೃತಕ ಬುದ್ಧಿಮತ್ತೆ ಜ್ಞಾನಾಭಿವೃದ್ಧಿಗೆ ಪೂರಕ ಎಂದು ವಿದ್ಯಾಗಿರಿಯ ಬಸವೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ.ಆರ್ ಪಾಟೀಲ್ ಹೇಳಿದರು. ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಐಕ್ಯೂಎಸಿ ಚರ್ಚಾ ಕಮೀಟಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮೀತಿ ಸಹಯೋಗದಲ್ಲಿ ಸಂಸ್ಥಾಪಕ ಪ್ರಾಚಾರ್ಯರಾದ ಡಾ.ಶಿ.ಚ ನಂದೀಮಠ ಅವರ ಸ್ಮರಣಾರ್ಥ ಬಾಗಲಕೋಟೆ ವಿ ವಿ ಮಟ್ಟದ ಅಂತರ್ ಮಹಾವಿದ್ಯಾಲಯ ಮಟ್ಟದ ಕೃತಕ ಬುದ್ಧಿಮತ್ತೆ ಉದ್ಯೋಗ ಸೃಷ್ಟಿಗೆ ಅಡೆತಡೆ ವಿಷಯದ ಚರ್ಚಾ ಸ್ಪರ್ಧೆಯನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಎಐ ಆಗಮನದಿಂದ ಪರ ವಿರೋಧ ಚರ್ಚೆಗಳು ಹೆಚ್ಚಾಗಿದ್ದು ಅದನ್ನು ಅರ್ಥೈಸಿಕೊಳ್ಳುವ ಆಧಾರದ ಮೇಲೆ ತಂತ್ರಜ್ಞಾನದ ಬಳಕೆಯಾಗುತ್ತದೆ. ಕಂಪ್ಯೂಟರ್ ಆವಿಷ್ಕಾರದ ಸಂದರ್ಭದಲ್ಲಿಯೂ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಹುದ್ದೆಗಳನ್ನು ಕಸಿದುಕೊಳ್ಳುತ್ತದೆ ಎಂಬ ವದಂತಿ ಭಯದ ವಾತಾವರಣ ನಿರ್ಮಾಣ ಮಾಡಿತ್ತು ಆದರೆ ದಿನ ಕಳೆದಂತೆ ಅದಕ್ಕೆ ಹೊಂದಿಕೊಂಡು ಚಟುವಟಿಗೆಳು ಪ್ರಾರಂಭವಾದವು. ಎಐ ಆವಿಷ್ಕಾರದ ನಂತರವೂ ಇಂತಹದ್ದೊಂದು ಮಾತು ಕೇಳಿಬರುತ್ತಿದ್ದು ಎಐಯಿಂದ ಯಾವ ಹಾನಿಯೂ ಇಲ್ಲ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅದು ಒಂದು ವರದಾನ ಆಗಲಿದೆ. ತಂತ್ರಜ್ಞಾನ ಅಭಿವೃದ್ಧಿಗೆ ಹೊಂದಿಕೊಂಡು ಕೆಲಸ ಮಾಡುವ ಕೌಶಲ್ಯಗಳನ್ನು ಬೆಳಸಿಕೊಳ್ಳುವುದು ಅವಶ್ಯಕ. ನಂಧಿಮಠ ಅವರ ಸ್ಮರಣಾರ್ಥ ಪ್ರತಿವರ್ಷ ಪ್ರಚಲಿತ ವಿಷಯಗಳ ಕುರಿತು ಚರ್ಚಾಸ್ಪರ್ಧೆ ಹಮ್ಮಿಕೊಳ್ಳುತ್ತಿದ್ದು ಇದರಿಂದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕ ಎಂದರು.
ಪ್ರಾಚಾರ್ಯರಾದ ಎಸ್. ಆರ್ ಮೂಗನೂರಮಠ ಮಾತನಾಡಿ ಚರ್ಚಾ ಸ್ಪರ್ಧೆಗಳಿಂದ ವಿವೇಚನಾ ಶಕ್ತಿ ಹೆಚ್ಚುವುದರ ಜೊತೆಗೆ ಜ್ಞಾನವನ್ನು ವರೆಗೆ ಹಚ್ಚಲು ಸಹಾಯವಾಗುತ್ತದೆ. ಸ್ಪರ್ಧೆಯಲ್ಲಿ ಸೋಲು ಗೆಲವು ಸಾಮಾನ್ಯ ಭಾಗವಹಿಸುವುದು ಅತ್ಯವಶ್ಯಕ. ಸ್ಪರ್ಧೆಗಳು ವಿವೇಚನಾ ಶಕ್ತಿ ಮತ್ತು ಮಾತುಗಾರಿಕೆಯ ಕೌಶಲ್ಯಗಳನ್ನು ಬೆಳೆಸುತ್ತವೆ. ಕೃತಕ ಬುದ್ದಿಮತ್ತೆಯ ಆಗಮನದಿಂದ ನೈಜ ಬುದ್ಧಿಮತ್ತೆಗೆ ಯಾವುದೇ ದಕ್ಕೆಯಾಗುವುದಿಲ್ಲ ಪ್ರತಿವರ್ಷ ಹೊಸ ವಿಚಾರಗಳ ಚರ್ಚಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಲೇ ಬರಲಾಗುತ್ತಿದ್ದು ಹೀಗೆ ಮುಂದುವರೆಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ವಿರೂಪಾಕ್ಷಿ ಎನ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಚಟುವಟಿಕೆಗಳ ಸಮೀತಿ ಸಂಯೋಜಕರಾದ ಡಾ.ಕೆ.ವಿ ಮಠ, ಉಪಸ್ಥಿತರಿದ್ದರು ಡಾ.ಎಸ್.ಡಿ ಕೆಂಗಲಗುತ್ತಿ ವಂದಿಸಿದರು. ಪ್ರೊ ಶ್ರೇಯ ಜೋರಾಪುರ ಅವರು ಕಾರ್ಯಕ್ರಮ ನಿರೂಪಿಸಿದರು ಮಹಾವಿದ್ಯಾಲಯದ ಸಿಬ್ಬಂದಿಗಳು ಸೇರಿದಂತೆ ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 