ಬಸವಶಾಂತಿ ಮಿಶನ್ದಲ್ಲಿ, ಅನುಭವ ಮಂಟಪ ಸಂಘವು ಆಯೋಜಿಸಿದ್ದ ಮಾಸಿಕ ಕಾರ್ಯಕ್ರಮ
ಧಾರವಾಡ 28 : ವಚನಗಳು ಜ್ಯೋತಿಯ ಪ್ರತೀಕ. ಕನ್ನಡದ ಅಂತಃಸತ್ವದರಸಪಾಕ. ವಚನಗಳು ನಮ್ಮ ಬದುಕನ್ನುತಿದ್ದಿ ಸಂಸ್ಕಾರಗೊಳಿಸುವಂತವುಗಳಾಗಿವೆ ಎಂದು ಕ.ವಿ.ವ. ಸಂಘದಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣಒಡ್ಡೀನ ಹೇಳಿದರು.ಅವರು ನಗರದಯಾ ಲಕ್ಕಿ ಶೆಟ್ಟರ ಕಾಲೋನಿಯ ಬಸವಶಾಂತಿ ಮಿಶನ್ದಲ್ಲಿ, ಅನುಭವ ಮಂಟಪ ಸಂಘವು ಆಯೋಜಿಸಿದ್ದ ಮಾಸಿಕ ಕಾರ್ಯಕ್ರಮದಲ್ಲಿ ‘ಅರಿವೇಗುರು’ ‘ಅನುಭಾವವೇ ಗುರಿ’ ವಿಷಯ ಕುರಿತು ಮಾತನಾಡಿ, ಅರಿವುತೃಪ್ತಿ ಹೊಂದಬೇಕಾದರೆ ಅದು ಅನುಭಾವದಿಂದ ಸಾಧ್ಯ .ಚನ್ನಬಸವಣ್ಣನವರು ವಯಸ್ಸಿನಲ್ಲಿ ಕಿರಿಯರಾದರೂ ತಮ್ಮ ಅರಿವು ಹಾಗೂ ಆಚಾರ, ಸತ್ಯಶುದ್ದ ನಡೆಯಿಂದ ಶರಣ ಸಂಕುಲದಲ್ಲಿ ದೊಡ್ಡವರಾಗಲು ಸಾಧ್ಯವಾಯಿತು.ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಮುಂತಾದ ಶಿವಶರಣರು ರಚಿಸಿದ ವಚನಗಳು ನಮಗೆಲ್ಲ ಮಹಾಮಂತ್ರಗಳಾಗಿ ಶರಣರೆಲ್ಲಾ ಲೋಕ ಪೂಜ್ಯರಾದರು. ಬಸವಾದಿ ಶರಣರು ಎಲ್ಲರಂತೆ ಬದುಕಲಿಲ್ಲ ಶ್ರೇಷ್ಠ ಆಚಾರ, ವಿಚಾರ, ನಡೆ-ನುಡಿ ಸತ್ಯಶುದ್ದಕಾಯಕ ಮಾಡುತ್ತಎಲ್ಲರಿಗಾಗಿ ಬದುಕಿದರು.ಜನ ಮೆಚ್ಚಲೆಂದು ಬದುಕದೇ ಮನದ ಮಹಾದೇವನಇಚ್ಚೆಯಂತೆ ಬದುಕಿದವರುಎಂದು ಹೇಳಿದರು.ಹೊಂಬೆಳಕು ಪ್ರತಿಷ್ಠಾನದಅಧ್ಯಕ್ಷಡಾ. ವೀಣಾ ಬಿರಾದಾರ ಮಾತನಾಡಿ, ಶರಣ ಸಂಸ್ಕೃತಿಯಲ್ಲಿಅರಿವು, ಆಚಾರಕ್ಕೆ ಮಹತ್ವದ ಸ್ಥಾನವಿದೆ.ಅರಿವುಎಂದರೆಜ್ಞಾನ, ಆಚಾರವೆಂದರೆ ಒಳ್ಳೆಯ ನಡತೆ.ಅರಿವುಆಚಾರವಿಲ್ಲದ ಬದುಕು ನಿರರ್ಥಕ.ಅರಿವಿನಲ್ಲಿಅಹಂಭಾವಇರಬಾರದು.ಕಾಯಕದಾಸೋಹದಲ್ಲಿ ವಿಶ್ವಕಲ್ಯಾಣದ ಗುಣಗಳಿವೆ ವಚನಗಳುಜ್ಞಾನದರ್ಶನ ನೀಡುವಂತವುಗಳಾಗಿವೆ ಎಂದರು.ಅನುಭವ ಮಂಟಪ ಸಂಘದಅಧ್ಯಕ್ಷಡಾ.ಎಸ್.ಬಿ. ಕೋಟೂರ್ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಸಂಸ್ಕೃತಿಯಲ್ಲಿ ನಡೆನುಡಿಗಳಲ್ಲಿ ಒಂದಾಗುವಿಕೆ, ಸಹಿಷ್ಣುತೆ, ಸಾಮಾಜಿಕ ಬದ್ಧತೆ, ಸಮಾನತೆಯನ್ನು ಪ್ರತಿಪಾದಿಸುತ್ತವೆ. ಇಂದಿನ ಯುವಕರು ಶರಣ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.ವೇದಿಕೆಯಲ್ಲಿ ವಿಶ್ವಗುರು ಬಸವಣ್ಣ ಹಾಗೂ ವೇಮನಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಮಾಡಿಗೌರವ ಸಲ್ಲಿಸಲಾಯಿತು.ಆಧ್ಯಾ ಶೀಲಂತರ್ ಅವರಿಂದ ವಾಯಲಿನ್ವಾದನ ಜರುಗಿತು.ಕೆ. ಬಿ. ಶಿರಹಟ್ಟಿ ಧ್ವಜಗೀತೆ ಹಾಡಿದರು. ಮಲಪ್ರಭಾಕನ್ಹೂರ ಪ್ರಾರ್ಥಿಸಿದರು. ಸದಯ್ಯ ಪಾಲಭಾವಿಮಠ ಸ್ವಾಗತಿಸಿದರು. ಅನ್ನದಾನಪ್ಪ ನಿರೂಪಿಸಿದರು.ಎಸ್.ಎಂ.ಯಲಿಗಾರ ವಂದಿಸಿದರು.