ಸಾಂಪ್ರಧಾಯಿಕ ಅಡುಗೆ ಜ್ಞಾನಕ್ಕೆ ಆಧುನಿಕ ಸ್ಪರ್ಶ. -ಡಾ: ಲಾವಣಾ ಎಮ್ ಎನ್
A modern touch to traditional cooking knowledge. -Dr. Lavana M.N.
ಹಾವೇರಿ 26 : ಸಿರಿಧಾನ್ಯಗಳು ನಮ್ಮ ಪರಂಪರೆಯ ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ ಇಂದಿನ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ಆಹಾರಗಳ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸಲು ಹಾಗೂ ಅವುಗಳ ಬಳಕೆ ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಆಹಾರ ಸಂಸ್ಕರಣಾ ತಂತ್ರಜ್ಞಾನ, ಡಿ.ಎಸ್.ಎಲ್. ಡಿ ತೋಟಗಾರಿಕಾ ಅಭಿಯಂತರರು ್ಘ ಆಹಾರ ತಂತ್ರಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ: ಲಾವಣ್ಯಾ ಎಮ್ ಎನ್ ಹೇಳಿದರು.
ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸಿರಿಧಾನ್ಯಗಳ ಅರಿವು ಕುರಿತು "ಮರೆತು ಹೋದ ಖಾದ್ಯಗಳ ಹಾಗೂ ಸಿರಿಧಾನ್ಯ ಪಾಕಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳು ಪೌಷ್ಠಿಕಾಂಶಗಳ ಆಗರ ಅವುಗಳಿಂದ ತಯಾರಿಸಿದ ಆಹಾರಗಳು ಆರೋಗ್ಯಕ್ಕೆ ಉತ್ತಮವಾದ ಓಷಧಗಳಾಗಿದ್ದಂತೆ ಈಗೀನ ಕಲುಷಿತಗೊಂಡ ವಾತಾವರಣದಲ್ಲಿ ಸಿರಿಧಾನ್ಯಗಲ ಬಳಕೆ ಆರೋಗ್ಯಕ್ಕೆ ಉತ್ತಮ ಎಂದರು.
ಬಳಿಕ ಜಿಲ್ಲಾ ಪಂಚಾಯ ಉಪ ಕಾರ್ಯದರ್ಶಿ ಡಾ: ಪುನಿತ್ ರವರು ಮಾತನಾಡಿ, ಸಿರಿಧಾನ್ಯಗಳ ಉಪಯೋಗದಿಂದ ಆರೋಗ್ಯಯುತ ಜೀವನ ನಡೆಸಲು ಅನುಕೂಲವಾಗಿದ್ದು, ಆಹಾರದಲ್ಲಿ ಪ್ರತಿ ದಿನ ಇವುಗಳನ್ನು ಬಳಕೆ ಮಾಡುವುದರಿಂದ ಖಾಯಲೆಗಳನ್ನು ದೂರವಿಡಬಹುದು. ಸಿರಿಧಾನ್ಯಗಳ ಬಳಕೆ ಮತ್ತು ಬಿತ್ತನೆ ಕಡಿಮೆ ಆಗುತ್ತಿದ್ದು ಜಾಥಾ ಮತ್ತು ಪಾಕ ಸ್ಪರ್ಧೆಯಂತ ಕಾರ್ಯಕ್ರಮಗಳಿಂದ ಅವುಗಳ ಬಳಕೆ ಹೆಚ್ಚುವುದರಿಂದ ಕಾರ್ಯಕ್ರಮಕ್ಕೆ ಮನ್ನಣೆ ಸಿಕ್ಕಂತಾಗುತ್ತದೆ. ಕೇವಲ ಒಂದೇ ದಿನಕ್ಕೆ ಸಿರಿಧಾನ್ಯಗಳ ಬಳಕೆ ಸಿಮಿತವಾಗಿರದೆ ನಿತ್ಯ ಜೀವನದಲ್ಲಿ ಬಳಸಿದರೆ ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಮ.ನಿ.ಪು ಸದಾಶಿವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಿರಿಧಾನ್ಯ ಪಾಕಸ್ಪರ್ಧೆಯನ್ನು ಒಟ್ಟು ಮೂರು ವಿಭಾಗಗಳಲ್ಲಿ ನಡೆಸಿದ್ದು, ಸಿರಿಧಾನ್ಯ ಸಿಹಿ ತಿನಿಸು ವಿಭಾಗದಲ್ಲಿ ಜಿಲ್ಲಾಧ್ಯಂತ ಒಟ್ಟು 26 ಜನ ಸ್ಪರ್ದಾಳುಗಳು ಭಾಗವಹಿಸಿದ್ದು, ಖಾರ ತಿನಿಸು ವಿಭಾಗದಲ್ಲಿ ಒಟ್ಟು 20 ಜನ ಮತ್ತು ಮರೆತುಹೋದ ಖಾದ್ಯದಲ್ಲಿ 14 ಜನ ಸ್ಪರ್ದಾಳುಗಳು ಭಾಗವಹಿಸಿದ್ದರು. ಸ್ಪರ್ಧಾಳುಗಳು ತಯಾರಿಸಿದ ತಿನಿಸುಗಳ ಪ್ರದರ್ಶನ, ತಯಾರಿಕೆಗೆ, ಬಳಸಿದ ಪದಾರ್ಥಗಳು, ತೋರಿಕೆ, ರುಚಿ ಮತ್ತು ಸುವಾಸನೆಗಳ ಗಳಿಸಿದ ಅಂಕಗಳಾದರದ ಮೇಲೆ ಮೂರು ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ನಾನಗಳನ್ನಾಗಿ ಆಯ್ಕೆ ಮಾಡಲಾಯಿತು.
ಸಿರಿಧಾನ್ಯ ಸಿಹಿ ತಿನಿಸು ವಿಭಾಗದಲಿ ಶೇಕಣ್ಣಾ ಬತ್ತಿಕೊಪ್ಪ (ಪ್ರಥಮ), ರತ್ನಾ ಬುದ್ಧನಗೌಡ (ದ್ವಿತೀಯ) ಹಾಗೂ ಲಕ್ಷ್ಮೀ ಕಮ್ಮಾರ (ತೃತೀಯ) ಸಿರಿಧಾನ್ಯ ಖಾರ ತಿನಿಸು ವಿಭಾಗದಲ್ಲಿ ಈರಣ್ಣ ಹುಲಗಚ್ಚ (ಪುಥಮ), ಮಧುರಾ ನವುಲಿ (ದ್ವಿತೀಯ) ಹಾಗೂ ಸೃಷ್ಟಿ ಕೆಂಡದಮಠ(ತೃತೀಯ)ಮರೆತುಹೋದ ಖಾದ್ಯ ವಿಭಾಗದಲ್ಲಿ ಮಾಲತೇಶ ಶಿಡಗನಾಳ (ಪ್ರಥಮ), ರೂಪಾ ತೋಟದ (ದ್ವಿತೀಯ) ಹಾಗೂ ಗೀತಾ ಹಡಪದ (ತೃತೀಯ) ಇವರುಗಳು ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಅಂಕಗಳಿಸಿ ಮೂರು ವಿಭಾಗದ ಪ್ರಥಮ ಸ್ಥಾನಗಳಿಸಿದ ವಿಜೇತರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ ನಾಗರಾಜ ಎಲ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ: ಪುನಿತ್, ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾದ್ಯಾಪಕರಾದ ಡಾ. ವಿನಯಕುಮಾರ ಎಂ ಎಂ ಮ.ನಿ.ಪು ಶಿವಬಸವ ಸ್ವಾಮಿಗಳು, ವಿರಕ್ತಮಠ ಅಕ್ಕಿಆಲೂರ, ಮ.ನಿ.ಪ್ರ ಅಭಿನಯ ಮೃತ್ಯುಂಜಯ ಸ್ವಾಮಿಗಳು, ದೇವಮಂದಿರ ಮಠ ಮಣಕವಾಡ, ಮ.ನಿ.ಪ್ರ ಅಭಿನವ ಶಿವಲಿಂಗ ಸ್ವಾಮಿಗಳು, ಮಾದನಹಿಪ್ಪರಗಿ, ಮ.ನಿ.ಪ ಸಿದ್ದಲಿಂಗ ಸ್ವಾಮಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 