ಕಲಾಸಂಘದಿಂದ ಸಾಲುಮರದ ತಿಮ್ಮಕ್ಕನಿಗೆ ನುಡಿನಮನ
A message from the Kalasangha to Saalumarada Thimmakka
ಕೊಪ್ಪಳ 16: ನಗರದ ಕಾವ್ಯಾನಂದ ಉದ್ಯಾನವನದ ಆವರಣದಲ್ಲಿ ಶಿಕ್ಷಕರ ಕಲಾಸಂಘ ಕೊಪ್ಪಳ ಪದ್ಮಶ್ರೀ ಪ್ರಶಸ್ತಿ ಪಡೆದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ನುಡಿನಮನ ಕಾರ್ಯಕ್ರಮ ಜರುಗಿತು. ಸಾಲುಮರದ ತಿಮ್ಮಕ್ಕನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷಗಳ ಮೌನ ಸಲ್ಲಿಸಲಾಯಿತು.
ಪುಷ್ಪನಮನದ ಬಳಿಕ ಮಾತನಾಡಿದ ಶಿಕ್ಷಕ ಪ್ರಾಣೇಶ ಪೂಜಾರ ಸುಮಾರು 50 ಕ್ಕೂ ಹೆಚ್ಚು ಕೊಪ್ಪಳ ಜಿಲ್ಲೆಯ ಹಸಿರು ಶಾಲೆಗಳಿಗೆ ಸಾಲುಮರದ ತಿಮ್ಮಕ್ಕನವರನ್ನು ಕರೆದುಕೊಂಡು ಹೋಗಿ ಸಸಿ ನೆಡಸಿ ಪರಿಸರ ಜಾಗೃತಿ ಮೂಡಿಸಲಾಗಿತ್ತು. ಅದೇ ವರ್ಷ ಶಿಕ್ಷಕರ ಕಲಾಸಂಘದಿಂದ ಟಿಪ್ಪು ಸುಲ್ತಾನ ನಾಟಕ ಪ್ರದರ್ಶನ ಮಾಡಿ ಒಂದು ಲಕ್ಷ ರೂಪಾಯಿಗಳನ್ನು ಸಾಲುಮರದ ತಿಮ್ಮಕ್ಕನವರಿಗೆ ಅರ್ಿಸಲಾಗಿತ್ತು. ಅವರನ್ನು ಆಮಂತ್ರಿಸಲು ಅಮ್ಮನವರ ಊರಿಗೆ ಹೋದಾಗ ತಾವು ಬೆಳಸಿದ ಗಿಡಗಳನ್ನು ತೋರಿಸಿದ್ದಲ್ಲದೆ, ಮನೆಯಲ್ಲಿ ಪ್ರೀತಿಯಿಂದ ಊಟ ಮಾಡಿಸಿ ಕಳುಹಿಸಿದ್ದರು. ಜಗತ್ತಿನ ಪ್ರಭಾವಿ ಮಹಿಳೆಯರಲ್ಲಿ ಸಾಲುಮರದ ತಿಮ್ಮಕ್ಕನವರು ಒಬ್ಬರಾಗಿದ್ದರು. ಅವರು ಸದಾ ಪರಿಸರ ಹಾಗೂ ಹಸಿರಿನ ಕುರಿತು ಮಾತನಾಡುತ್ತಿದ್ದದ್ದು ಅಷ್ಟೇ ಅಲ್ಲ, ಬದುಕಿನುದ್ದಕ್ಕೂ ಗಿಡಗಳನ್ನು ಮಕ್ಕಳಂತೆ ಪೋಷಿಸಿದ ನಿಷ್ಠಾವಂತ ಮಹಿಳೆಯಾಗಿದ್ದರು. ಅವರ ಅಗಲಿಕೆ ತುಂಬಲಾರದ ಕರುನಾಡಿಗೆ ಅಷ್ಟೇ ಅಲ್ಲ ಇಡಿ ಜಗತ್ತಿಗೆ ತುಂಬಲಾರದ ನಷ್ಟ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಶಿಕ್ಷಕರ ಕಲಾಸಂಘದ ಅಧ್ಯಕ್ಷ ರಾಮಣ್ಣ ಶ್ಯಾವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೊಳಿಬಸಯ್ಯ, ಬಾಳಪ್ಪ ಕಾಳೆ, ಮಾರುತಿ ಆರೇರ, ಪಠಾಣ್, ಗುರುರಾಜ ಕುಲಕರ್ಣಿ, ಮಾರುತಿ ಮ್ಯಾಗಳಮನಿ, ಸಾಲುಮರದ ತಿಮ್ಮಕ್ಕನವರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಡಿ. ಶ್ರೀಪತಿ ಹಳ್ಳಿಕೇರಿ, ಗುರುಸ್ವಾಮಿ,ಮಂಜುಳಾ ಬಣ್ಣದ ಬಾವಿ, ಮಂಜುಳಾ ಶ್ಯಾವಿ, ಪ್ರಲ್ಹಾದ , ಮಹಾಂತೇಶ ಚಳ್ಳಮರದ ಸಾರ್ವಜನಿಕರು ಹಾಜರಿದ್ದರು. ನಾಗರಾಜನಾಯಕ ಡೊಳ್ಳಿನ ನಿರೂಪಿಸಿದರು ಮಂಜುನಾಥ ಪೂಜಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 