ದಾಸೋಹ ಜೀವನವೇ ಪರಿಪೂರ್ಣ ಬದುಕು: ಯಲಗೋಡದ ಗುರಲಿಂಗ ಶ್ರೀಗಳು

ದಾಸೋಹ ಜೀವನವೇ ಪರಿಪೂರ್ಣ ಬದುಕು: ಯಲಗೋಡದ ಗುರಲಿಂಗ ಶ್ರೀಗಳು A life of slavery is the perfect life: Gurlinga Sri of Yalgoda

ದೇವರಹಿಪ್ಪರಗಿ 10 : ‘ತನ್ನಪಾಡಿಗೆ ಮಾಡುವುದು ಉಪಜೀವನ, ತನ್ನಗಲ್ಲದೇ ಪರಹಿತಕ್ಕೆ ಮಾಡುವುದು ಒಳ್ಳೆಯ ಜೀವನ, ಪರಹಿತದಲ್ಲಿ ಪರಮಾತ್ಮನನ್ನು ಕಾಣುವುದು ದಾಸೋಹ ಜೀವನ ಎಂದು ದಾಸೋಹ ಸೂತ್ರದಲ್ಲಿ ಶರಣಬಸವಪ್ಪ ಅಪ್ಪ ಹೇಳಿದ್ದಾರೆ. ಅಂಥ ದಾಸೋಹ ಜೀವನವೇ ಮನುಜರೆಲ್ಲ ಪಾಲಿಗೆ ಪರಿಪೂರ್ಣ ಬದುಕು’ ಎಂದು ಯಲಗೋಡ ಪರಮಾನಂದಮಠದ ಪ.ಪೂ ಗುರುಲಿಂಗ ಸ್ವಾಮೀಜಿಗಳು ಬಣ್ಣಿಸಿದರು. ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಧರ್ಮ ಸಭೆಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಶರಣಬಸವೇಶ್ವರರು ಕೇವಲ ಧಾರ್ಮಿಕ ಸಂತನಾಗಿರದೆ ಕಾಯಕ ಮತ್ತು ಜ್ಞಾನದ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಮಹಾನ್ ದಾರ್ಶನಿಕ ರಾಗಿದ್ದರು ಗ್ರಾಮಸ್ಥರೆಲ್ಲರೂ ಕೂಡಿ ಭಕ್ತಿ ಮಾರ್ಗದ ಮೂಲಕ ಜಾತಿ ಮತ ಭೇದವಿಲ್ಲದೆ ಭಾವೈಕ್ಯತೆಯನ್ನು ಸಾರಿದ್ದೀರಿ ಹಾಗೂ ಸುಮಾರು 12 ಪರಮಾನಂದ ದೇವರು ತಪಸ್ಸು ಗೈದ ಜಾಗೃತ ಸ್ಥಳಗಳ ಪೈಕಿ ಸುಕ್ಷೇತ್ರ ಹುಣಶ್ಯಾಳ ಗ್ರಾಮವು ಒಂದು, ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಒಂದಾಗಬೇಕು,

ನಮ್ಮಿಂದಲೂ ಸಹಾಯ ಸಹಕಾರ ನೀಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಸಾನಿಧ್ಯವನ್ನು ಮಳಖೇಡದ ಹಜರತ್ ಸೈಯದ್ ಷಾ ಮುಸ್ತಫಾ ಖಾದ್ರಿ ಅವರು ಮಾತನಾಡಿ,ಭಾರತ ಬಹುತ್ವದ ದೇಶ. ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರಾಂತ್ರ್ಯದವರು ಒಟ್ಟಾಗಿ ಬಾಳಬೇಕು. ಮನುಷ್ಯತ್ವ ಬಹಳ ದೊಡ್ಡದು. ಬಿದ್ದವನನ್ನು ಎಬ್ಬಿಸುವುದೇ ಧರ್ಮದ ಸಾರವಾಗಿದೆ, ಎಲ್ಲರೂ ಪರಸ್ಪರ ಪ್ರೀತಿಸಬೇಕು. ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡಿ ಎಂದು ಪಾಲಕರಿಗೆ ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೋರಗಿ-ಪುರದಾಳ ವಿಶ್ವಾರಾಧ್ಯ ಮಠಾಧಿಪತಿಗಳಾದ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರು ಮಾತನಾಡಿ,’ಆಧ್ಯಾತ್ಮವನ್ನು ಜೀವನದಲ್ಲಿ ಆಳವಡಿಸಲು ಪುರಾಣ ಸಹಕಾರಿಯಾಗಿದೆ,

ಆಧ್ಯಾತ್ಮ ಇಲ್ಲದೆ ಜೀವನ ಇಲ್ಲ, ಧ್ಯಾನದಿಂದ ಆರೋಗ್ಯ ವೃದ್ಧಿ, ಬದುಕಿನ ಸಿಹಿಕಹಿಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮ ಸಹಕರಿಯಾಗುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಹವ್ಯಾಸಗಳು ಅವಶ್ಯವಾಗಿದೆ. ಸರಳ ಜೀವನದಿಂದ ಮಾತ್ರ ಉತ್ತಮ ಆರೋಗ್ಯ ಸಂಪಾದಿಸಲು ಸಾಧ್ಯ ಎಂದು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ವೈದ್ಯರಾಗಿ ಗ್ರಾಮಸ್ಥರಿಗೆ ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಜಿಪಂ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ (ಯಡಿಯಾಪೂರ) ಅವರು ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಹಲವು ಜನಾಂಗ, ಭಾಷೆ, ಆಚಾರ -ವಿಚಾರಗಳ ಭಾವೆಕ್ಯತೆ ಸಂಗಮವಾಗಿದೆ, ಶರಣರ ತತ್ವಗಳನ್ನು ಎಲ್ಲರೂ ತಿಳಿದುಕೊಂಡು ಸಮಾಜದಲ್ಲಿ ಅವರ ಪಾಲನೆಗಳನ್ನು ಅರಿತು ನಡೆಯಬೇಕು, ಹುಣಶ್ಯಾಳ ಗ್ರಾಮದಲ್ಲಿ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಪ್ರಾಸ್ತಾವಿಕವಾಗಿ ಯುವ ಮುಖಂಡರಾದ ಶಂಕರಗೌಡ ಕೋಟಿಖಾನಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕ್ರಯ್ಯ ಹಿರೇಮಠ ವಹಿಸಿದ್ದರು.ಇದೇ ಸಂದರ್ಭದಲ್ಲಿ ಶಾಸಕರ ಸಹೋದರರಾದ ಸಚೀನಗೌಡ ಪಾಟೀಲ(ಕುದರಿಸಾಲವಾಡಗಿ), ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಎ.ಎ.ಮೋಮಿನ, ಪ್ರವಚನಕಾರ ವೇ.ಮೂ. ಮಹಾಂತಯ್ಯ ಸ್ವಾಮೀಜಿ, ಬಿಜೆಪಿ ಮುಖಂಡರಾದ ಸಿದ್ದು ಬುಳ್ಳಾ,ತಾಳಿಕೋಟಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ(ಎಂ.ಎಲ್‌.ಎ), ಕೋರವಾರ ಪಿಕೆಪಿಎಸ್ ಅಧ್ಯಕ್ಷರಾದ ಸಂಗಮೇಶ ಛಾಯಗೋಳ, ಮುಖಂಡರುಗಳಾದ ವೀರೇಶ ನಾಡಗೌಡ, ಸುಭಾಷಗೌಡ ದೇವರಗುಡಿ, ಶಂಕ್ರ​‍್ಪ ಬಂಗಾರಗುಂಡ, ಗೋಲ್ಲಾಳಪ್ಪ ಪಟ್ಟಣಶೆಟ್ಟಿ, ಗುತ್ತಪ್ಪಗೌಡ ಕೋಟಿಖಾನಿ, ಹುಸೇನ ನಾಗಾವಿ, ಮಹಾಂತಯ್ಯ ಹಿರೇಮಠ, ಶಾಂತಪ್ಪ ಕೋಟಿಖಾನಿ,ಪ್ರಭುಗೌಡ ದೇವರಗುಡಿ, ಸೋಮನಗೌಡ ಕೋಟಿಖಾನಿ, ನಿಂಗಣ್ಣ ಪಾಕಿ, ಸಲಬಣ್ಣ ಬಡಿಗೇರ, ಅವಣ್ಣ ಯಂಕಂಚಿ, ನಾನಾಗೌಡ ಕರ್ನಾಳ, ಶರಣಗೌಡ ಕೋಟಿಖಾನಿ, ಶರಣಪ್ಪ ಹಿಪ್ಪರಗಿ (ಪಡಶೆಟ್ಟಿ), ಅಪ್ಪಸಾಹೇಬ ದೇವರಗುಡಿ, ಹುಸೇನ ನಾಗಾವಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕ ಸುರೇಶ ಭೋವಿ ಸ್ವಾಗತಿಸಿ,ವಂದಿಸಿದರು.