ಶಾಸಕ ಲಕ್ಷ್ಮಣ ಸವದಿ, ರಾಜು ಕಾಗೆ ನೇತೃತ್ವದ ಪೆನಲ್ ಅಭ್ಯರ್ಥಿಗಳಿಗೆ ಭರ್ಜರಿ ಜಯ

ಶಾಸಕ ಲಕ್ಷ್ಮಣ ಸವದಿ, ರಾಜು ಕಾಗೆ ನೇತೃತ್ವದ ಪೆನಲ್ ಅಭ್ಯರ್ಥಿಗಳಿಗೆ ಭರ್ಜರಿ ಜಯ  A landslide victory for the panel candidates led by MLA Lakshman Savadi and Raju Kage

ಶಾಸಕ ಲಕ್ಷ್ಮಣ ಸವದಿ, ರಾಜು ಕಾಗೆ ನೇತೃತ್ವದ ಪೆನಲ್ ಅಭ್ಯರ್ಥಿಗಳಿಗೆ ಭರ್ಜರಿ ಜಯ   

ಅಥಣಿ 27: ಕೃಷ್ಣಾ ಸಕ್ಕರೆ ಕಾರಖಾನೆಯ ಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ಗೆಲುವು ರಮೇಶ ಜಾರಕಿಹೊಳಿಗೆ ಸೋಲು. ಇಂದು ನಡೆದ ಸಕ್ಕರೆ ಕಾರಖಾನೆಯ ಚುನಾವಣೆ ಅಥಣಿ ತಾಲೂಕಿಗಷ್ಟೇ ಅಲ್ಲದೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಕಾರಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ನೇತೃತ್ವದ ರೈತ ಸಹಕಾರ ಪೆನಲ್ ನ ಎಲ್ಲ ಅಭ್ಯರ್ಥಿಗಳು ಭಾರೀ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮುಖಭಂಗ ಅನುಭವಿಸಿದಂತಾಗಿದೆ.  

       ಸತತ 17 ವರ್ಷಗಳಿಂದ ಲಕ್ಷ್ಮಣ ಸವದಿ, ರಾಜು ಕಾಗೆ ನೇತೃತ್ವದಲ್ಲಿ ಪರ​‍್ಪ ಸವದಿ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಅಧಿಕಾರದಲ್ಲಿತ್ತು ಹೀಗಾಗಿ ಮಹೇಶ ಕುಮಠಳ್ಳಿ ನೇತೃತ್ವದ ಬಿಜೆಪಿ, ಗಜಾನನ ಮಂಗಸೂಳಿ ನೇತೃತ್ವದ ಮೂಲ ಕಾಂಗ್ರೆಸ್ ಪಕ್ಷದ ಕೆಲವರು ಹಾಗೂ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ನೇತೃತ್ವದ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸ್ವಾಭಿಮಾನಿ ರೈತ ಸಹಕಾರ ಪೆನಲ್ ನಿಂದ ಸ್ಪರ್ಧಿಸಿದ್ದ ಇವರಿಗೆ ಗೋಕಾಕ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲ ನೀಡಿದ್ದರು ಮತ್ತು ಅವರು ಅಥಣಿಗೆ ಆಗಮಿಸಿ ಲಕ್ಷ್ಮಣ ಸವದಿಯವರನ್ನು ಕಟುವಾಗಿ ಟೀಕಿಸಿದ್ದರು.    ರಮೇಶ ಜಾರಕಿಹೊಳಿಯವರು ಲಕ್ಷ್ಮಣ ಸವದಿಯವರ ವಿರುದ್ಧ ಮಾಡಿದ್ದ ವ್ಯಯಕ್ತಿಕ ಟೀಕೆಗಳೇ ಎದುರಾಳಿಗಳಿಗೆ ವರವಾಗಿ ಬಲ ತಂದು ಕೊಡುವಲ್ಲಿ ಯಶಸ್ವಿಯಾದವು ಈ ಹಿನ್ನೆಲೆಯಲ್ಲಿ ರೈತ ಸಹಕಾರ ಪೆನಲ್ ನ ಎಲ್ಲ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲು ಕೂಡ ಸಾಧ್ಯವಾಯಿತು.   

        ಕಾರಖಾನೆಯ ಅಧ್ಯಕ್ಷ ಪರ​‍್ಪ ಸವದಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಮತ್ತು ತಾಲೂಕಿನ ರೈತರು ನಮ್ಮ ಪೆನಲ್ ನ ಅಭ್ಯರ್ಥಿಗಳನ್ನು ಬೆಂಬಲಿಸಿದ ಪರಿಣಾಮ ಇಂದು ನಾವು ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನಮ್ಮ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡುವ ಮೂಲಕ ಗೊಂದಲಕ್ಕೀಡು ಮಾಡಿದ್ದರು ಆದರೂ ರೈತರು ಟೀಕೆಗಳಿಗೆ ಕಿವಿಗೊಡದೇ ನಮ್ಮ ಪರವಾಗಿ ಮತ ಚಲಾಯಿಸಿದ್ದಾರೆ ಎಂದ ಅವರು ನಮ್ಮನ್ನು ಬೆಂಬಲಿಸಿದ ರೈತರನ್ನು ಅಭಿನಂದಿಸಿದರು.  

     ಕಾಂಗ್ರೆಸ್ ಮುಖಂಡ ಶಿವಕುಮಾರ ಸವದಿ ಮಾತನಾಡಿ, ಚುನಾವಣೆಯ ಫಲಿತಾಂಶ ನ್ಯಾಯಾಲಯದ ಆದೇಶ ಬರುವವರೆಗೆ ಪ್ರಕಟ ಮಾಡಲು ಸಾಧ್ಯವಿಲ್ಲ.  ಫಲಿತಾಂಶ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಲಕ್ಷ್ಮಣ ಸವದಿ ನೇತೃತ್ವದ ರೈತ ಸಹಕಾರ ಪೆನಲ್ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಎಂದರು.   ವಿಜಯೋತ್ಸವದಲ್ಲಿ ಯುವ ಧುರೀಣ ಚಿದಾನಂದ ಸವದಿ, ಸಾವಿರಾರು ಸಂಖ್ಯೆಯಲ್ಲಿ ರೈತರು, ಲಕ್ಷ್ಮಣ ಸವದಿ ಅಭಿಮಾನಿಗಳು, ಜಯ ಶಾಲಿಯಾದ ಅಭ್ಯರ್ಥಿಗಳು ಭಾಗವಹಿಸಿದ್ದರು.