ಮತ ಚಲಾಯಿಸಿ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ವಿನಮ್ರ ಮನವಿ
A humble request to be given the opportunity to vote and serve
ರಾಣೆಬೆನ್ನೂರು 14 : ವಾಣಿಜ್ಯ ನಗರದ ವಕೀಲರ ಸಂಘಕ್ಕೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ಉಚ್ಚ ಕೆ.ಎಸ್.ಬಿ.ಸಿ.ಯ ಸದಸ್ಯ ಸ್ಥಾನದ ಆಕಾಂಕ್ಷಿ, ಜಿ. ಎಂ. ಗಾದಿಲಿಂಗಪ್ಪ ಅವರು ಇಲ್ಲಿನ ನ್ಯಾಯವಾದಿಗಳ ಸಂಘಕ್ಕೆ ಅಧಿಕೃತ ಭೇಟಿ ನೀಡಿ ತಮ್ಮನ್ನು ಬೆಂಬಲಿಸಿ, ಮತ ಚಲಾಯಿಸಿ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ವಿನಮ್ರ ಮನವಿ ಮಾಡಿದರು. ಬಳ್ಳಾರಿ ಮತ್ತು ಬೆಂಗಳೂರು ನ್ಯಾಯಾಲಯಗಳಲ್ಲಿ ತಮ್ಮ ವಕೀಲ ವೃತ್ತಿಯ ಮೂಲಕ ತಾವು ಗುರುತಿಸಿಕೊಂಡಿದ್ದು, ತಾವು ಕಳೆದ 2018ರಲ್ಲಿ ಕೆಎಸ್ಬಿಸಿ ಚುನಾವಣೆಗೆ ಸ್ಪರ್ಧಿಸಿದ್ದೆ, ಅತ್ಯಲ್ಪ ಮತಗಳ ಅಂತರದಿಂದ ಪರಾಬವಗೊಂಡಿದ್ದೆ.
ಅನುಕಂಪ ನನ್ನ ಮೇಲೆ ಇದೆ. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದು, ಕಷ್ಟ ನಷ್ಟ ಮತ್ತು ವಕೀಲರ ಸಮಸ್ಯೆಗಳ ಅರಿವು ತಮಗಿದೆ. ಬಿ.ಎ.ಎಲ್ ಎಲ್. ಬಿ. ಪದವಿಧರ. "ಅಧಿಕಾರಕ್ಕಾಗಿ ಅಲ್ಲ - ಸೇವೆಗಾಗಿ" "ಸ್ವಾರ್ಥಕ್ಕಾಗಿ ಅಲ್ಲ - ವಕೀಲ ಹಿತರಕ್ಷಣೆಗಾಗಿ" ಮಾತ್ರ ಎನ್ನುವ ತತ್ವ ಮತ್ತು ಸಿದ್ದಾಂತ ಧ್ಯೇಯ ವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ವಕೀಲರ ಧ್ವನಿಯಾಗಲು ನಡೆಯಲಿರುವ (11-03-2026)ಚುನಾವಣೆಯಲ್ಲಿ ನಿಮ್ಮೆಲ್ಲರ ಮತಗಳು ಮತ್ತು ಬೆಂಬಲ ಅಗತ್ಯವಿದೆ. ವಕೀಲರ ರಕ್ಷಣಾ ಕಾಯ್ದೆ ಜಾರಿಗಾಗಿ ಮತ್ತು ಹಕ್ಕುಗಳನ್ನು ಬಲಪಡಿಸು ವಂತೆ ಒತ್ತಾಯಿಸಿ, ವಕೀಲರ ಸಂರಕ್ಷಣೆ ಕಾಯ್ದೆಗಾಗಿ ಪಾದಯಾತ್ರೆಯ ಮೂಲಕ ಅಳಿಲುಸೇವೆ ಸಲ್ಲಿಸಿದ್ದೇನೆ. ವಕೀಲರ ಸರ್ವತೋಮುಖ ಅಭಿವೃದ್ಧಿಗಾಗಿ ವಕೀಲರ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಲು ನಾನು ಸದಾಕಾಲ ಬದ್ಧನಾಗಿದ್ದೇನೆ.
ಎಂದು ತಮ್ಮ ಇಲ್ಲಿಯವರೆಗಿನ ಸೇವೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ. ಹೆಚ್. ಬುರಡಿಕಟ್ಟಿ, ಸದಸ್ಯರಾದ ಶ್ರೀಕಾಂತ್ ಐರಣಿ, ಸುಭಾಷ್ ಕೆಂಗಲ್, ಹಿರಿಯ ವಕೀಲರಾದ ಕೆ.ಎಫ್.ಎಳೇಹೊಳೆ, ಏಕಾಂತ ಮುದಿಗೌಡ್ರ, ನಾಗರಾಜ ಕೋಡಿಹಳ್ಳಿ, ಡಿ.ಎನ್. ಕಟಗಿ, ಕೆ. ಸಿ. ಚೌಡಣ್ಣನವರ, ಎನ್. ಬಿ.ಪಿ ಸೋಮಕ್ಕಳ್ಳವರ, ನಾಗರಾಜ್ ಸುಂಕಾಪುರ, ಕೆ.ಬಿ. ಕುರಿಯವರ, ಕಿರಣ ಕುಮಾರ, ಅಶೋಕ ಸಪ್ಪಣ್ಣನವರ, ಎಸ್.ವಿ. ತೊಗರ್ಷಿ, ಕೆ.ಡಿ. ಮಡಿವಾಳರ, ಎಸ್.ಬಿ. ದಿಂಡದಹಳ್ಳಿ, ಎಂ.ಆರ್. ಅರ್ಕಾಚಾರಿ ನೇತ್ರಾವತಿ, ಮಹಾದೇವಕ್ಕ ಜಿ.ಎಂ. ಹಸೀನಾ ಮೂಲಿಮನಿ, ಎಚ್. ಡಿ. ಹೊನ್ನಕ್ಕಳವರ, ಮಾಲತೇಶ್ ಓಲೇಕಾರ ಸೇರಿದಂತೆ ಮತ್ತಿತರ ಸದಸ್ಯರು ಯುವ ವಕೀಲರು, ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 