ವಿಜಯಪುರ ಜಿಲ್ಲೆಗೆ ಆಗಮೀಸಿದ ಕನೇರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ಭರ್ಜರಿ ಸ್ವಾಗತ

ವಿಜಯಪುರ ಜಿಲ್ಲೆಗೆ ಆಗಮೀಸಿದ  ಕನೇರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ಭರ್ಜರಿ ಸ್ವಾಗತ A grand welcome to Kaneri Sri Adrushya Kadasiddheshwara Swamiji who arrived in Vijayapura district

ವಿಜಯಪುರ: ಕೊಲ್ಲಾಪುರದ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ವಿಧಿಸಲಾಗಿದ್ದ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧದ ಅವಧಿ ಮುಕ್ತಾಯವಾದ ಎರಡೇ ವಾರದಲ್ಲಿ ಬಬಲೇಶ್ವರಕ್ಕೆ ಸೋಮವಾರ ಆಗಮಿಸಿದ್ದ ಶ್ರೀಗಳಿಗೆ ಭರ್ಜರಿ ಸ್ವಾಗತ ದೊರೆತಿದೆ.

'ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ರಾಜ್ಯ ಸರ್ಕಾರ ಘೋಷಿಸಿ ಒಂದು ವರ್ಷ ಪೂರೈಸಿದ ಸಂದರ್ಭ ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಹಾಗೂ ಮಠಾಧೀಶರ ವಿರುದ್ಧ ನೀಡಿದ್ದ ಹೇಳಿಕೆ ಸಂಬಂಧ ಕನೇರಿ ಶ್ರೀಗೆ ಕಳೆದ .16ರಿಂದ ಡಿ.14ರವರೆಗೆ 2 ತಿಂಗಳ ಕಾಲ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಶ್ರೀಗಳ ಮೇಲಿನ ನಿರ್ಬಂಧದ ಅವಧಿ ಮುಕ್ತಾಯವಾದ ಬೆನ್ನಲ್ಲೇ ಶ್ರೀಗಳನ್ನು ಜಿಲ್ಲೆಗೆ ಬರಮಾಡಿಕೊಳ್ಳಲು ಹಾಗೂ ಬಸವಾದಿ ಶರಣರು ಹಿಂದೂಗಳ ಭಾಗವೇ ಎಂದೇ ಸಾರುವ ಉದ್ದೇಶದೊಂದಿಗೆ ಬೃಹತ್ಬಸವಾದಿ ಶರಣರ ಹಿಂದೂ ಸಮಾವೇಶನಡೆಸಲಾಯಿತು.

ಕರ್ನಾಟಕ-ಮಹಾರಾಷ್ಟ್ರದ ವಿವಿಧ ಸ್ವಾಮೀಜಿಗಳು ಹಾಗೂ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ ಭಾಗದ ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ನಡೆದ ಬೈಕ್ ್ಯಾಲಿ ಜತೆಗೇ ಕನೇರಿ ಶ್ರೀಗಳು ಮೆರವಣಿಗೆಯಲ್ಲಿ ಬಂದರು. ಮಾರ್ಗದುದ್ದಕ್ಕೂ ಕೇಸರಿ ಧ್ವಜ ಹಿಡಿದ ಜನರ ದಂಡು, ಕನೇರಿ ಶ್ರೀಗಳ ಭಾವಚಿತ್ರ ಹಿಡಿದ ಭಕ್ತರು ಕಂಡು ಬಂದರು. ಕನೇರಿ ಶ್ರೀಗಳುಕರ್ನಾಟಕದ ಯೋಗಿ ಆದಿತ್ಯನಾಥಎಂಬ ಘೋಷಣೆಗಳು ಮೊಳಗಿದವು. ‘ನಮ್ಮ ಬಹುದೊಡ್ಡ ಆಸೆ, 2028ಕ್ಕೆ ಬಿಜೆಪಿಯಿಂದ ಕನೇರಿ ಸ್ವಾಮೀಜಿಗಳು ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಘೋಷಣೆ ಆಗಬೇಕುಎಂಬ ಬರಹಗಳೂ ಕಂಡು ಬಂದವು.

ಬಸವಣ್ಣನವರು ಸೇರಿದಂತೆ ಎಲ್ಲ ಶರಣರು ಹಿಂದೂಗಳೇ. ಬಸವಣ್ಣನವರನ್ನು ನಾಸ್ತಿಕರನ್ನಾಗಿ ಮಾಡಬೇಡಿ. ಬಸವಣ್ಣನವರು ಎಲ್ಲರನ್ನೂ ಕೂಡಿಸುವ ಕೆಲಸ ಮಾಡಿದರು. ಬಸವಣ್ಣನವರು ಶುದ್ಧ ಹಿಂದೂ ಧರ್ಮವನ್ನು ಕೊಟ್ಟಿದ್ದಾರೆ. ಬಸವಣ್ಣನವರ ಹೆಸರಲ್ಲಿ ವೀರಶೈವ-ಲಿಂಗಾಯತ ಎಂದು ಬೇರೆ ಮಾಡಬೇಡಿ. ಮೊದಲು ಹಿಂದೂ ಎನ್ನಿ, ನಂತರ ವೀರಶೈವ-ಲಿಂಗಾಯತ ಎನ್ನಿ. ಆಗ ನನ್ನ ಮಾತು ಸಹ ಬಂದ್ ಆಗುತ್ತದೆ ಎಂದು ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡ ಕನೇರಿ ಶ್ರೀಗಳು, ಬಸವಣ್ಣನವರು ಹಾಗೂ ಮಾದಾರ ಹರಳಯ್ಯನಿಂದ ಹಿಡಿದು ಮರುಳಶಂಕರರವರೆಗೆ ಎಲ್ಲ ಶರಣರನ್ನು ಸ್ಮರಿಸಿ, ವಚನಗಳನ್ನು ಉಲ್ಲೇಖಿಸಿ ಮಾತನಾಡಿದರು. ವಚನಗಳ ಬಗ್ಗೆ ಚರ್ಚೆ ಮಾಡೋಣ. ಯಾರದ್ದೇ ತಪ್ಪಿದ್ದರೂ, ಅದನ್ನು ಒಪ್ಪಿಕೊಳ್ಳೋಣ ಎಂದು ಚರ್ಚೆಗೂ ಆಹ್ವಾನಿಸಿದರು.

ಹಿಂದೂ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ಬಸವಣ್ಣವರನ್ನು ತಿದ್ದಿದರು. ಕರ್ಮಸಿದ್ಧಾಂತವನ್ನು ಅವರು ಒಪ್ಪಿಕೊಂಡಿದ್ದರು. ವಚನಗಳಲ್ಲಿ ವೇದಗಳನ್ನು ಉಲ್ಲೇಖಿಸಿದ್ದರು. ಶಿವನ ಚಮತ್ಕಾರವನ್ನೂ ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಶಿವನ ರೂಪವನ್ನು ವರ್ಣನೆ ಮಾಡಿದ್ದಾರೆ. ಬಸವಣ್ಣನವರ ವಚನಗಳನ್ನು ಚೆನ್ನಾಗಿ ಓದಬೇಕು. ಆದರೆ, ಬಸವಣ್ಣನವರನ್ನು ನಾಸ್ತಿಕರನ್ನಾಗಿ ಬಿಂಬಿಸುವ ಯತ್ನ ನಡೆದಿರುವುದು ನೋವಿನ ಸಂಗತಿ. ಸುಧಾರಣೆಯಾಗಿ ಎಂದು ಹೇಳುವವರೇ ಸುಧಾರಣೆಯಾಗಿಲ್ಲ ಎಂದರೆ ಕೇಳುಗರು ಹೇಗೆ ಸುಧಾರಣೆಯಾಗಬಲ್ಲರು ಎಂದು ಪ್ರಶ್ನಿಸಿದರು.

ಹೊಸ ಧರ್ಮ ಕಟ್ಟಿದರೆ ಹೊಸ ಮಠವನ್ನೂ ಕಟ್ಟಿ, ಹಳೆ ಮಠ ಖಾಲಿ ಮಾಡಿ ಎಂದು ಭಕ್ತರು ಹೇಳಬೇಕು. ಸನಾತನ ಧರ್ಮದ ಮಠ, ಲಿಂಗ, ಕಾವಿ, ರುದ್ರಾಕ್ಷಿ, ಮಂತ್ರ ಬಿಡಿ, ಆದರೆ ಕಾವಿ ಬಿಟ್ಟರೆ ನಿಮಗೆ ಊಟ ಸಿಗುವುದೂ ಕಷ್ಟವಾಗುತ್ತದೆ ಎಂದ ಅವರು, ವೈಚಾರಿಕ ಭೇದವಿದ್ದರೂ ಆತ್ಮೀಯತೆ ಇರಲಿ ಎಂದು ಹೇಳಿದರು.