ಉಗರಗೋಳದಲ್ಲಿ ಪಂಜಾಗಳ ಭವ್ಯ ಮೆರವಣಿಗೆ
A grand parade of claws in the Arctic
ಉಗರಗೋಳದಲ್ಲಿ ಪಂಜಾಗಳ ಭವ್ಯ ಮೆರವಣಿಗೆ
ಉಗರಗೋಳ 06: ಗ್ರಾಮದಲ್ಲಿ ಭಾನುವಾರ ಶ್ರದ್ಧಾ-ಭಕ್ತಿಯಿಂದ ಮೊಹರಂ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಾಯಿ ದೇವರ ಮೆರವಣಿಗೆ ನಡೆಯಿತು. ರಂಗೋಲಿ ಮತ್ತು ಹೂವಿನಿಂದ ಮೆರವಣಿಗೆ ಮಾರ್ಗ ಅಲಂಕರಿಸಲಾಗಿತ್ತು. ಗ್ರಾಮದ ಆರು ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಪಂಜಾಗಳು ಮತ್ತು ಡೋಲಿಗಳು ಹನುಮಂತ ದೇವರ ದೇವಸ್ಥಾನದ ಮುಂದೆ ಸೇರಿದವು. ತೆಕ್ಕೇದ ಬಾವಾಸಾಹೇಬ್(ಹಟೇಲ್ ಬಾಷಾ) ದೇವರಿಗೆ ಭೇಟಿಯಾಗಿ ಮರಳಿದವು.. ಪಂಜಾಗಳ ಮೇಲೆ ನಾಣ್ಯಗಳು, ಖಾರೀಕ್ ಮತ್ತು ಕಲ್ಲುಸಕ್ಕರೆ ಹಾರಿಸಿ ಭಕ್ತರು ಭಕ್ತಿ ಮೆರೆದರು. ಹಿಂದೂ-ಮುಸ್ಲಿಮರು ಸೇರಿಕೊಂಡು ಮೊಹರಂ ಆಚರಿಸಿದರು. ಕೆರೆ ಓಣಿ ಮಸೂತಿಯ ಮಕ್ಕಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿ ಧರಿಸಿ ಅಂಬ್ರೆಲಾ ಡ್ಯಾನ್ಸ್ ಮಾಡಿ ಗಮನಸೆಳೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 