ರನ್ನ ವೈಭವಕ್ಕೆ ಸಾರ್ವಜನಿಕರ ಸಭೆ
ಮಹಾಲಿಂಗಪುರ, 22: ಸಮೀಪದ ರನ್ನ ಬೆಳಗಳಿಯ ಶ್ರೀ ಬಂದಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಬುಧವಾರ ರನ್ನ ವೈಭವದ ಪೂರ್ವಭಾವಿ ಸಾರ್ವಜನಿಕ ಸಭೆ ನಡೆಯುತ್ತು
ಇದೇ ಸಂದರ್ಭದಲ್ಲಿ ಮಹಾಕವಿ ರನ್ನ ಜನ್ಮ ಸ್ಥಳದಲ್ಲಿ ಪ್ರತಿ ರನ್ನ ವೈಭವದ ಪ್ರಾರಂಭದಂತೆ ಈ ವೈಭವದಲ್ಲಿ ಕೂಡ ಪ್ರಾರಂಭದ ದಿನದಂದು ರನ್ನ ರಥದ ಮೆರವಣಿಗೆ, ವಿವಿಧ ಕಲಾ ಪ್ರಕಾರಗಳ ಕಲೆಗಳ ಅನಾವರಣದ ಜೊತೆಗೆ ಮೆರವಣಿಗೆ, ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಭವ್ಯ ವೇದಿಕೆಯಲ್ಲಿ, ಇನ್ನು ಹಲವು ಕಾರ್ಯಕ್ರಮಗಳು ರನ್ನ ಬೆಳಗಲಿಯಲ್ಲಿ ಜರಗುವುದರಿಂದ ಆ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವುದಕ್ಕಾಗಿ ವಿವಿಧ ಸಮಿತಿಗಳ ರಚನೆಯ ಕುರಿತು ಬೆಳಗಲಿ ಪಟ್ಟಣದ ಸಮಸ್ತ ಸಾರ್ವಜನಿಕರ ಅನಿಸಿಕೆ ಅಭಿಪ್ರಾಯಗಳನ್ನು ಸ್ವೀಕರಿಸಿ, ವಿವಿಧ ಸಂಘಟನೆಗಳ, ಕಲಾವಿದರ ಸಂಘ ಸಂಸ್ಥೆಗಳ, ಆಡಳಿತ ಮಂಡಳಿ, ಪಟ್ಟಣ ಪಂಚಾಯತ ಕಾರ್ಯಾಲಯದ ಅಧಿಕಾರಿಗಳು, ಜನಪ್ರತಿನಿಧಿಗಳ, ನಾಗರಿಕರ ಜೊತೆಗೆ ಚರ್ಚೆನಡೆಸಿ ಎಲ್ಲರ ಸಮ್ಮುಖದಲ್ಲಿ ರನ್ನ ವೈಭವದ ಅದ್ದೂರಿ ಆಚರಣೆಗೆ ಸಮಿತಿಯ ರಚಿಸಲು ಒಪ್ಪಿಗೆಯನ್ನು ಪಡೆಯದು ಪ್ರಮುಖರ ಹೆಸರುಗಳನ್ನು ಅಧಿಕಾರಿಗಳನ್ನು ನೇಮಕ ಮಾಡಿದರು, ರನ್ನ ವೈಭವದ ಬಗ್ಗೆ ಮಾಹಿತಿ ನೀಡಿದರು.