ಸಂಸ್ಕೃತಿ ಪ್ರತಿಬಿಂಬಿಸಿದ ಜಾನಪದ ಸವಾಲ್ ಜವಾಬ್ ಭಜನೆ
A folk song reflecting culture
ರಾಣೇಬೆನ್ನೂರು :14 ಜಾನಪದ ಸಂಸ್ಕೃತಿ ಜನಸಾಮಾನ್ಯರ ನೋವು ನಲಿವುಗಳ ಭಾಷೆ ಮತ್ತು ಸಂಸ್ಕೃತಿಯ ಪ್ರತೀಕವಾಗಿವೆ. ಜಾನಪದ ಕಲೆ ಕೇವಲ ಮನೋರಂಜನೆ ಮಾತ್ರವಲ್ಲ. ಭಜನೆ, ಕೋಲಾಟ, ಲಾವಣಿ, ಗೀಗಿ ಪದಗಳು ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಮಹಾನ್ ಕಲೆಗಳಾಗಿವೆ ಎಂದು ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.
ಅವರು ಇಲ್ಲಿನ ಗೌರಿಶಂಕರ ನಗರದ ಕಾಕಿ ಕುಟುಂಬದವರ ದೇವಸ್ಥಾನಗಳ ಆವರಣದಲ್ಲಿ ದಿ, ದೊಡ್ಡ ನಾಗಪ್ಪ ತಿರಕಪ್ಪ ಮತ್ತು ದಿ, ಸಣ್ಣ ನಾಗಪ್ಪ ತಿರಕಪ್ಪ ಕಾಕಿ ಅವರ ಪುಣ್ಯ ಸ್ಮರಣೋತ್ಸವದ ನಿಮಿತ್ತಯೋಜಿಸಿದ್ದ, ಸವಾಲ್ ಜವಾಬ್ ಭಜನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದ ಇತಿಹಾಸ ಕಾಲಗಳಿಂದಲೂ ಜನಪದ ಕಲೆ ಮತ್ತು ಸಾಹಿತ್ಯ ಸಂಗೀತ ಜನಸಾಮಾನ್ಯರ ಭಾವನೆಗಳನ್ನು ಹಿಡಿದಿಟ್ಟುಕೊಂಡಿವೆ. ಅಂದಿನಿಂದ ಇಂದಿಗೂ ಸಹಾ ಪ್ರಸ್ತುತವಾಗಿವೆ. ಜಾನಪದ ಸಾಹಿತ್ಯದ ಅಂತಸ್ಪದ ಕುರಿತು ಸಂಶೋಧನೆಯ ನಡೆಯಬೇಕಾದ ಇಂದಿನ ಅಗತ್ಯ ಮತ್ತು ಅವಶ್ಯವಿದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವು ಸಹಾ ಭಾರಿ ಸವಾಲ್ ಜವಾಬ್ ಭಜನಾ ಕಾರ್ಯಕ್ರಮವು ಆಯೋಜಿಸಿದ್ದರು. ಸಂಜೆಯಿಂದ ಮದ್ಯ ರಾತ್ರಿವರೆಗೂ ಜರುಗಿದ ನಾಡಿನ ಖ್ಯಾತ ಕಲಾವಿದರಾದ .ಚಿಕ್ಕಮರಳಿಹಳ್ಳಿಯ ಶ್ರೀ ಮಾರುತಿ ಸೇವಾಭಾಯಿ ಭಜನಾ ಸಂಘ, ಕನಕೂರಿನ ಶ್ರೀ ರಾಮಲಿಂಗೇಶ್ವರ ಭಜನಾ ಸಂಘದ ಕಲಾವಿದರು ಪ್ರದರ್ಶಿಸಿದ ಭಜನೆ ಸಾರ್ವಜನಿಕರ ಗಮನ ಸೆಳೆದವು. ವಿದ್ಯಾರ್ಥಿಗಳು ಮತ್ತು ಜನಪದ ಕಲೆ ವಿಷಯ ಕುರಿತು ಬಿಸಿಎಂ ಇಲಾಖೆ ನಿವೃತ್ತ ಅಧಿಕಾರಿ ವಿ. ಎಸ್. ಹಿರೇಮಠ ಉಪನ್ಯಾಸ ನೀಡಿದರು. ಗಣ್ಯ ವರ್ತಕ ಮಲ್ಲೇಶಪ್ಪ ಅರಿಕೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ದತ್ತಿ ಧಾನಿ ಹನುಮಂತಪ್ಪ ದೊಡ್ಡನಾಗಪ್ಪ ಕಾಕಿ,
ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಮಾಜಿ ನಗರಸಭಾ ಸದಸ್ಯ ಶಿವಾನಂದ ಸಾಲಗೇರಿ , ಮಾಹಿತಿ ಹಕ್ಕು ತಜ್ಞ ಜೆ. ಎಂ. ರಾಜಶೇಖರ್, ನಿವೃತ್ತ ಪ್ರಾಚಾರ್ಯ ಶಿವಾನಂದ ಬಗಾದಿ, ರೂಪಾ ಶ್ರೀನಿವಾಸ ಕಾಕಿ, ವಿಜಯಲಕ್ಷ್ಮಿ ಕಾಕಿ, ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಜಗದೀಶ ಮಳಿಮಠ, ಕೊಟ್ರೇಶಪ್ಪ ಎಮ್ಮಿ ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಗೌ ಕಾರ್ಯದರ್ಶಿ ಜಗದೀಶ ಮಳೆಮಠ, ಪ್ರಕಾಶ ಗಚ್ಚಿನಮಠ, ಎಸ್. ಎಚ್. ಪಾಟೀಲ, ಪ್ರಭುಲಿಂಗಪ್ಪ ಹಲಗೇರಿ, ಚಂದ್ರಶೇಖರ ಮಡಿವಾಳರ, ಪ್ರಕಾಶ ಗಚ್ಚಿನಮಠ, ಶೋಭಾ ನಾಗನಗೌಡ, ರವಿಕುಮಾರ ಪಾಟೀಲ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 