ಮಹೋತ್ಸವಕ್ಕಾಗಿ ಸಿದ್ದಗೊಳ್ಳುತ್ತಿರುವ ಜಾತ್ರಾ
A fair being prepared for the mahotsava
ಮಹೋತ್ಸವಕ್ಕಾಗಿ ಸಿದ್ದಗೊಳ್ಳುತ್ತಿರುವ ಜಾತ್ರಾ
ಕೊಪ್ಪಳ 11 : ದಕ್ಷಿಣ ಭಾರತದ ಕುಂಭಮೆಳ ಎಂದು ಪ್ರಖ್ಯಾತಿ ಪಡೆದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಜನೇವರಿ 15 ರಂದು ಜರುಗುವ ಪ್ರಯುಕ್ತ ಜಾತ್ರಾ ಸಿದ್ದತೆಗಳು ಭರದಿಂದ ಸಾಗುತ್ತಲಿವೆ. ಇಂದು ರಥೋತ್ಸವ ಸಾಗುವ ಮೈದಾನ ಹಾಗೂ ಅಂಗಡಿ ಮುಂಗಟ್ಟುಗಳನ್ನು ಹಾಕುವ ಜಾತ್ರಾ ಆವರಣವನ್ನು ಇಟ್ಯಾಚಿ, ಡೋಜರ್ ಮತ್ತಿತರ ಯಂತ್ರಗಳ ನೆರವಿನಿಂದ ನೆಲವನ್ನು ಸಮತಟ್ಟು ಮಾಡಿ ಸ್ವಚ್ಛಗೊಳಿಸುವ ಕಾರ್ಯ ಕೆಲಸ ಬಿರುಸಿನಿಂದ ಸಾಗುತ್ತಲಿವೆ. ಈ ಕಾರ್ಯಗಳು ಮುಂಬರುವ ಜಾತ್ರೆಗೆ ಹೆಚ್ಚಿನ ಮೆರಗು ತಂದುಕೊಡಲಿದೆ.
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವದ ನಿಮಿತ್ಯ ಜರುಗುವ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ದಿನಾಂಕ 11-01-2025, ಶನಿವಾರ, ಸಂಜೆ 5.00 ಗಂಟೆಗೆ ಬಸವಪಟ ಕಾರ್ಯಕ್ರಮ, ದಿನಾಂಕ 12-01-2025 ರವಿವಾರ, ಸಂಜೆ 5.00 ಗಂಟೆಗೆ ಗವಿಮಠ ಆವರಣದಲ್ಲಿನ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ, ದಿನಾಂಕ 13-01-2025 ಸೋಮವಾರ, ಸಂಜೆ: 5 ಘಂಟೆಗೆ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸದ ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ, ದಿನಾಂಕ 14-01-2025 ಮಂಗಳವಾರ ಸಂಜೆ: 5 ಘಂಟೆಗೆ ಕೈಲಾಸಮಂಟಪದಲ್ಲಿನ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ: ಹಾಗೂ ಉಚ್ಛಾಯಿ (ಲಘು ರಥೋತ್ಸವ) ಜರುಗಲಿದೆ. 15/01/2025 ಬುಧವಾರ ಸಂಜೆ: 5.00 ಘಂಟೆಗೆ ಮಹಾಮಹಿಮ ಗವಿಸಿದ್ಧೇಶ್ವರ ಮಹಾರಥೋತ್ಸವದ ಚಾಲನೆಗೊಳ್ಳಲಿದೆ ಸಂಜೆ: 6.00 ಘಂಟೆಗೆ ಕೈಲಾಸ ಮಂಟಪದಲ್ಲಿ ಧಾರ್ಮಿಕ ಗೋಷ್ಠಿ - ಅನುಭಾವಿಗಳ ಅಮೃತ ಚಿಂತನ ಗೋಷ್ಠಿಗಳು ಮೂರು ದಿನಗಳ ಕಾಲ ಜರುಗಲಿವೆ. ದಿನಾಂಕ 16.01.2024 ರಂದು ಗುರುವಾರ ಸಂಜೆ: 5:00 ಘಂಟೆಗೆ ಶ್ರೀಮಠದ ಆವರಣದಲ್ಲಿ ಬಳಗಾನೂರ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜರುಗುವದು. 17.01.2024 ರಂದು ಶುಕ್ರವಾರ 5:00 ಘಂಟೆಗೆ, ಕೈಲಾಸ ಮಂಟಪದಲ್ಲಿನ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಜರುಗಲಿದೆ ಎಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು 