ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ರಾಯರು ಬಂದರು ಮಾವನ ಮನೆಗೆ ಎಂಬ ಹಾಸ್ಯ ಕಾರ್ಯಕ್ರಮ

ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ರಾಯರು ಬಂದರು ಮಾವನ ಮನೆಗೆ ಎಂಬ ಹಾಸ್ಯ ಕಾರ್ಯಕ್ರಮ 

ಬೆಳಗಾವಿ  06 :ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯವರು ಇದೇ ದಿ. 9 ಶನಿವಾರದಂದು ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ “ರಾಯರು ಬಂದರು ಮಾವನ ಮನೆಗೆ” ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.   

ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ, ಕವಿ ಪ್ರೊ. ಎಂ. ಎಸ್‌. ಇಂಚಲ ವಹಿಸಿಕೊಂಡಿದ್ದಾರೆ. ಅತಿಥಿಗಳಾಗಿ ಹಿರಿಯ ಪತ್ರಕರ್ತ ಎಲ್‌. ಎಸ್‌. ಶಾಸ್ತ್ರಿಯವರು ಆಗಮಿಸಲಿದ್ದಾರೆ. ಪ್ರಾಯೋಜಕತ್ವವನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಹಿರಿಯ ಲೆಕ್ಕಪರಿಶೋಧಕರಾದ ಉದಯಕುಮಾರ  ವನಕುದ್ರೆಯವರು ವಹಿಸಿಕೊಂಡಿದ್ದಾರೆ.  

ಅಳಿಯ ಮಾವನ ಮನೆಗೆ ಬಂದಾಗಿನ ಮೋಜಿನ ಪ್ರಸಂಗಗಳನ್ನು ಪತ್ರಕರ್ತ ಮುರುಗೇಶ ಶಿವಪೂಜಿ, ಶ್ರೀಮತಿ ರಾಜೇಶ್ವರಿ ಹಿರೇಮಠ, ಶ್ರೀಮತಿ ಸುಪ್ರಿಯಾ ದೇಶಪಾಂಡೆ, ಶ್ರೀಮತಿ ದೀಪಿಕಾ ಕುಲಕರ್ಣಿ ಮತ್ತು ಜಿ.ಎಸ್‌. ಸೋನಾರ ಹಂಚಿಕೊಳ್ಳಲಿದ್ದಾರೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಕೆ. ತಾನಾಜಿ ನಿರೂಪಿಸಲಿದ್ದಾರೆ. 

ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಾಹಿತ್ಯ ಭವನ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.