14 ವರ್ಷಗಳ ಹಿಂದೆ ನಡೆದ ಪ್ರಕರಣ: ಎ.ಸಿ.ಎಫ್ ಮದನ್ ನಾಯಕ್ ಹತ್ಯೆ ಅಪರಾಧಿ ಪ್ರಶಾಂತ್ ಲಮಾಣಿಗೆ ಹತ್ತು ವರ್ಷ ಕಾರಾಗೃಹ ಶಿಕ್ಷೆ ಪ್ರಕಟ
A case that happened 14 years ago: Prashant Lamani, the culprit in the murder of ACF Madan Nayak, h
ದಾಂಡೇಲಿ 10: ದಾಂಡೇಲಿಯ ಕಾಳಿ ನದಿ ಪಕ್ಕ ದಾಂಡೇಲಪ್ಪ ದೇವಸ್ಥಾನದ ಬಳಿ 2012 ಮೇ 6 ರಂದು ಪ್ರವಾಸಿಗರ ಹಲ್ಲೆಯಿಂದ ಸಾವನ್ನಪ್ಪಿದ್ದ ಅರಣ್ಯ ಇಲಾಖೆಯ ಅಧಿಕಾರಿ ಎಸಿಎಫ್ ಮದನ್ ನಾಯಕ ಸಾವಿಗೆ ಕಾರಣವಾಗಿದ್ದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯದ ಹೆಚ್ಚುವರಿ ಪೀಠ (ಯಲ್ಲಾಪುರ ಸಂಚಾರಿ) ನ್ಯಾಯಾಲಯದಲ್ಲಿ ಶುಕ್ರವಾರ ಶಿಕ್ಷೆ ಪ್ರಕಟಿಸಿತು.
ಪ್ರಶಾಂತ್ ರಾಮ ಲಮಾಣಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಕಿರಣ್ ಕಿಣಿ ಅವರು ಹತ್ತು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದರು ಹಾಗೂ ಹನ್ನೊಂದು ಸಾವಿರ ರೂ.ದಂಡ ವಿಧಿಸಿದರು. ಮದನ್ ನಾಯಕ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ತಲಾ ಐವತ್ತು ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದರು. ಬಾಗಲಕೋಟೆಯಿಂದ ದಾಂಡೇಲಿ ಕಾಳಿ ನದಿ ಬಳಿ ದಾಂಡೇಲಪ್ಪ ದೇವಸ್ಥಾನದ ಬಳಿ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು, ಮೊಸಳೆಗಳಿಗೆ ಮಾಂಸವನ್ನು ಹಾಕುತ್ತಿದ್ದದನ್ನು ಅರಣ್ಯ ಇಲಾಖೆಯ ಎಸಿಎಫ್ ಮದನ್ ನಾಯಕ ಪ್ರಶ್ನಿಸಿದ್ದರು. ಮೊಸಳೆಗಳಿಗೆ ಮಾಂಸ ಹಾಕದಂತೆ ತಿಳಿ ಹೇಳಿದ್ದರು. ಅರಣ್ಯಾಧಿಕಾರಿ ಮಾತು ಕೇಳದ ಪ್ರವಾಸಿಗರು ಎಸಿಎಫ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಲೆಯ ಹಿಂಭಾಗಕ್ಕೆ ಬಿದ್ದ ಪೆಟ್ಟಿನಿಂದ ಮೆದುಳು ಹ್ಯಾಮ್ರೇಜ್ ನಿಂದ ಘಟನೆ ನಡೆದ ಮರುದಿನ ಸಾವನ್ನಪ್ಪಿದ್ದರು.
ಈ ಕುರಿತು ಅವರ ಪತ್ನಿ ಸುಮತಿದಾಂಡೇಲಿ ಪೊಲೀಸರಿಗೆ ದೂರು ನೀಡಿದ್ದರು. ಹಲ್ಲೆ ಮಾಡಿದವರು ಬಹುತೇಕ ಸರ್ಕಾರಿ ನೌಕರರಾಗಿದ್ದು , ಪೊಲೀಸ್ ತನಿಖೆಯಲ್ಲೂ ಪ್ರಭಾವ ಬೀರಿದ್ದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಗಳು ದಾಂಡೇಲಿಯಲ್ಲಿ ವಕೀಲ ಅಜಿತ್ ನಾಯ್ಕ ನೇತೃತ್ವದಲ್ಲಿ ನಡೆದಿದ್ದವು. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿ.ಐ.ಡಿ. ಗೆ ವಹಿಸಿತ್ತು. ಸಿಐಡಿ ಹಿರಿಯ ಅಧಿಕಾರಿ ಬಿ.ಬಿ.ಅಶೋಕ್ ಕುಮಾರ್ ಈ ಪ್ರಕರಣದ ತನಿಖೆ ನಡೆಸಿ, ಚಾರ್ಜಶೀಟ್ ಸಲ್ಲಿಸಿದ್ದರು.
ಮದನ್ ನಾಯಕ್ ಅನುದ್ದೇಶಿತ ಹತ್ಯೆ (ಸಾವಿನ) ಪ್ರಕರಣದ ವಿಚಾರಣೆ ನಡೆದು 14 ವರ್ಷದ ನಂತರ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿರಸಿ ಹೆಚ್ಚುವರಿ ,ಯಲ್ಲಾಪುರ ಸಂಚಾರಿ ಪೀಠದ ನ್ಯಾಯಾದೀಶ ಕಿರಣ್ ಕಿಣಿ ಅವರು ಮದನ್ ನಾಯಕ್ ಹತ್ಯೆ ಪ್ರಕರಣದ ಅಪರಾಧಿ ಪ್ರಶಾಂತ್ ರಾಮು ಲಮಾಣಿ 10 ವರ್ಷ ಕಾರಾಗೃಹ ವಾಸ 11 ಸಾವಿರ ದಂಡ ವಿಧಿಸುವ ಜೊತೆ ಎಸಿಎಫ್ ಕುಟುಂಬ ಅವಲಂಭಿತರಾದ ಪತ್ನಿ, ಪುತ್ರ, ಪುತ್ರಿಗೆ ಐವತ್ತು ಸಾವಿರ ಪರಿಹಾರ ನೀಡಲು ಆದೇಶಿಸಿತು.
ಆರೋಪಿತರಾದ ಆನಂದ್ ರೂಪಸಿಂಗ್ ನಾಯ್ಕ, ಸುರೇಶ್ ಶಂಕರ್ಪ ನಾಯ್ಕ, ಶೈಲಜಾ , ದಾನಾಬಾಯಿ, ಮಾದುರೀ ರಾಥೋಡ್, ರಾಧ ನಾಯ್ಕ ಗೆ ತಲಾ ಒಂದು ಸಾವಿರ ದಂಡ ವಿಧಿಸಿದೆ. ದಂಡ ತುಂಬಲು ವಿಫಲರಾದರೆ ಒಂದು ತಿಂಗಳ ಸದಾ ಕಾರಾಗೃಹ ಶಿಕ್ಷೆ ಅನುಭವಿಸಲು ಆದೇಶಿಸಿದೆ. ಸರ್ಕಾರದ ಪರ ಖ್ಯಾತ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಾಳಗೇಕರ್ ವಾದ ಮಂಡಿಸಿದ್ದರು.ತೀರ್ಿನ ನಂತರ ರಾಜೇಶ್ ಮಾಳಗೇಕರ್ ,ಪ್ರಕರಣದ ತೀಪು ಸಮಾಧಾನ ತಂದಿದೆ ಎಂದರು. ಎಸಿಎಫ್ ಪತ್ನಿ ಸುಮತಿ ನಾಯಕ ಮಾತನಾಡಿ ಸುದೀರ್ಘ ಸಮಯದ ನಂತರ ನ್ಯಾಯಾ ಸಿಕ್ಕಿದೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 