ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 24ನೇ ಪೀಠಾರೋಹಣ ಯಶಸ್ವಿಗೆ ಕರೆ
A call for the success of the 24th enthronement of Basavalingeshwara Shivacharya Mahaswamy
ಯಲಬುರ್ಗಾ 12 : ನಮ್ಮದು ಅತ್ಯಂತ ಬಡತನದ ಮಠವಾಗಿದೆ ನಮ್ಮ ಮಠಕ್ಕೆ ಬಡವರೇ ಭಕ್ತರಾಗಿದ್ದಾರೆ ಅಂತಹ ಲಕ್ಷಾಂತರ ಭಕ್ತರಿಂದ ನಮ್ಮ ಮಠಕ್ಕೆ ಯಾವುದೇ ಕೊರತೆ ಇಲ್ಲವಾಗಿದೆ ಅಂತಹ ಭಕ್ತರನ್ನು ಪಡೆದ ನಾವು ಭಾಗ್ಯವಂತರು ಎಂದು ಶ್ರೀಧರ ಮುರಡಿ ಹಿರೇಮಠದ ಷ,ಬ್ರ,ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಶ್ರೀಧರ ಮುರಡಿ ಹಿರೇಮಠದ ಶ್ರೀಗಳ 24ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಾಗೂ ಸತತ ಹತ್ತು ದಿನಗಳ ಕಾಲ ಜರುಗುವ ಧಾರ್ಮಿಕ ಸಾಮಾಜಿಕ ಕಾರ್ಯಗಳ ಕುರಿತು ಮಾಹಿತಿ ನೀಡಿ ಶ್ರೀಗಳು ಮಾತನಾಡಿದರು.
ಜ,18 ರಿಂದ ಪ್ರಾರಂಭವಾಗುವ ಕಾರ್ಯಕ್ರಮಗಳು ಜ,28ರವರೆಗೆ ಪ್ರತಿದಿನ ಸಂಜೆ ವಿವಿಧ ಮಠಾದೀಶರ ಹಾಗೂ ಅನೇಕ ಗಣ್ಯರ ನೇತೃತ್ವದಲ್ಲಿ ಜರುಗಲಿವೆ ಹಾಗೂ ಜಿಲ್ಲಾ ಆಯುಷ್ ಇಲಾಖೆಯಿಂದ ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಇರುತ್ತದೆ, ಹಾಗೂ ಜ.22 ರಂದು ಎಸ್,ಡಿ,ಎಮ್ ನಾರಾಯಣ ಹಾರ್ಟ ಸೆಂಟರ್ ದಾರವಾಡ ವೈದ್ಯರಿಂದ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಏರಿ್ಡಸಲಾಗಿದೆ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಏರಿ್ಡಸಲಾಗಿದೆ ಹಾಗೂ ಜ.26 ರಂದು ಶ್ರೀ ಕಂಚಿ ಕಾಮಕೋಟಿ ಮೇಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರಿಂದ ಉಚಿತ ಕಣ್ಣಿನ ತಪಾಸಣೆ ಇರುತ್ತದೆ,
ಹಾಗೂ ಜ.28 ಕೊನೆಯ ದಿನ ಶ್ರೀಮದ್ ಕಾಶೀ ಜ್ಙಾನಸಿಂಹಾಸನಾಧೀಶ್ವರ 1008 ಜಗದ್ಗುರು ಡಾ, ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವವತ್ಪಾದರು ಜಂಗಮವಾಡಿಮಠ,ವಾರಣಾಸಿ ಪೂಜ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಸಭೆ ಜರುಗುವವು,ನಂತರ ಲಘು ರಥೋತ್ಸವ ಜರುಗಲಿದೆ ಹಾಗೂ ಪ್ರತಿದಿನ ಒಂದೊಂದು ವಿಷಯ ಕುರಿತು ಉಪನ್ಯಾಸ, ಭಕ್ತರಿಂದ ತುಲಾಭಾರ, ಅನ್ನಸಂತರೆ್ಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳನ್ನ ಏರಿ್ಡಸಿದ್ದು ತಾಲೂಕಿನ ಎಲ್ಲಾ ಭಕ್ತಾಧಿಗಳು ಆಗಮಿಸಿ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೋಳಿಸಲು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಾಧಿಕಾರ ಮಹೋತ್ಸವದ ಬಿತ್ತಿಪತ್ರವನ್ನು ಶ್ರೀಗಳು ಬಿಡುಗಡೆಗೋಳಿಸಿದರು ಹಾಗೂ ಮುಖಂಡರಾದ ಬಸನಗೌಡ ಪಾಟೀಲ ( ಬಹದ್ದೂರು ದೇಸಾಯಿ) ಟ್ರಸ್ಟ್ ನ ಖಜಾಂಚಿ ಅಡವಯ್ಯ ಕಲ್ಯಾಣಮಠ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿ, ಮುಖಂಡರಾದ ಶರಣಬಸಪ್ಪ ದಾನಕೈ, ಭೀಮಪ್ಪ ಹವಳಿ, ಮಹೇಶ ಹುಬ್ಬಳ್ಳಿ, ಬಸವರಾಜ ಸಾದರ್, ಬಸವರಾಜ ಕೊಳ್ಳಿ, ಸುರೇಶ ವಣಗೇರಿ, ವೀರೇಶ ಸ್ಟಾಂಪಿನ , ಶಿವುಕುಮಾರ್ ಸಾದರ್ ಸೇರಿ ಮಠದ ಅಪಾರ ಭಕ್ತರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 