ಬೂದುಗುಂಪ ಗ್ರಾಮಕ್ಕೆ ಬಸ್ ನಿರ್ಮಿಸಲು ಎ.ಐ.ಡಿ. ಎಸ್. ಓ ವಿದ್ಯಾರ್ಥಿ ಸಂಘಟನೆ
A.I.D.S.O student organization to build a bus for Badugumpa village
ಕೊಪ್ಪಳ 12: ತಾಲೂಕಿನ ಬೂದುಗುಂಪ ಗ್ರಾಮಕ್ಕೆ ಬಸ್ ನಿಲುಗಡೆ ಮತ್ತು ಬಸ್ ತಂಗುದಾಣ ನಿರ್ಮಿಸಲು ಬಸ್ ಗಳನ್ನು ರಸ್ತೆ ತಡೆ ಹಿಡಿದು ನಡೆಸಿದ ವಿದ್ಯಾರ್ಥಿಗಳ ಸ್ವಯಂ ಪ್ರೇರಿತ ಹೋರಾಟಕ್ಕೆ ಎ.ಐ.ಡಿ. ಎಸ್. ಓ ವಿದ್ಯಾರ್ಥಿ ಸಂಘಟನೆ ಬೆಂಬಲ.ಕೊಪ್ಪಳ ತಾಲ್ಲೂಕಿನ ಬೂದಗುಂಪ ಗ್ರಾಮದಲ್ಲಿ ಶಾಲಾ ಕಾಲೇಜುಗಳಿಗೆ ಕೊಪ್ಪಳಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ತಂಗುದಾಣ ಇಲ್ಲದಿರುವುದರಿಂದ ಯಾವುದೇ ರೀತಿಯ ಬಸ್ಸುಗಳು ನಿಲಗಡೆ ಆಗುತ್ತಿಲ್ಲ, ಇದರಿಂದಾಗಿ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಬಸ್ ನಿಲುಗಡೆ ಆಗದೇ ಹಾಗೆ ಚಲಿಸಿ ಕೊಂಡು ಹೋಗುತ್ತವೆ.ನಿನ್ನೇ ಬಸ್ಸಿನಿಂದ ವಿದ್ಯಾರ್ಥಿ ನಿ ಕೆಳಗೆ ಬಿದ್ದರೂ ಕೂಡ ಬಸ್ ಸಂಚಾಲಕನು ಹಾಗೆಯೇ ಬಸ್ ಚಾಲನೆ ಮಾಡಿದ ಘಟನೆ ನಡೆದಿದೆ.
ಈ ರೀತಿಯಾಗಿ ವಯೋ ವೃದ್ಧರು, ಸಣ್ಣ ಮಕ್ಕಳು ಮತ್ತು ವಿದ್ಯಾರ್ಥಿಗಳು ಬಿಸಿಲಿನಲ್ಲಿಯ ನಿಂತು ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಘಟನೆಗಳಿಂದ ಬೇಸರಗೊಂಡಂತಹ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಸ್ ತಡೆದು ಹೋರಾಟವನ್ನು ನಡೆಸಿದರು. ಈ ವೇಳೆಯಲ್ಲಿ ವಿದ್ಯಾರ್ಥಿಗಳ ಸ್ವಯಂ ಪ್ರೇರಿತ ಹೋರಾಟದಲ್ಲಿ ಎ.ಐ.ಡಿ. ಎಸ್. ಓ ಮುಖಂಡರಾದಂತಹ ತುಳಜಾ ರಾಮ್ ಮತ್ತು ಸಿಂಧು ಕೌದಿ ಭಾಗವಹಿಸಿ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನು ್ನ ಈಡೇರಿಸಬೇಕೆಂದು ಬೆಂಬಲಿಸಿದರು.ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಕೂಡಲೇ ಇಚಲಕರಂಜಿ, ಹುಬ್ಬಳ್ಳಿ, ಕಾರವಾರ, ಸಿಂಧನೂರು ಮತ್ತು ರಾಯಚೂರು ಸೇರಿದಂತೆ ಎಲ್ಲಾ ಬಸ್ಸುಗಳನ್ನು ನಿಲುಗಡೆ ಮಾಡಬೇಕೆಂದು ಹಾಗೂ ಬೂದುಗುಂಪಾದಲ್ಲಿ ಎರಡು ಕಡೆ ಬಸ್ ತಂಗುದಾಣ ವನ್ನು ನಿರ್ಮಿಸಬೇಕೆಂದು ಸಾರಿಗೆ ಮೇಲ್ವಿಚಾರಕರಾದ ಮಂಜುನಾಥ್ ಮತ್ತು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.ಬಸ್ ನಿಲ್ಲಿಸಿ ಸುಮಾರು 03 ಗಂಟೆಗಳ ಕಾಲ ರಸ್ತೆ ತಡೆದು ವಿದ್ಯಾರ್ಥಿಗಳು ಹೋರಾಟ ನಡೆಸಿದರು. ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಭಾಗ್ಯಶ್ರೀ, ಮಂಜವ್ವ, ಕವಿತಾ,ಕೀರ್ತನ ಪವಿತ್ರ,ಹನುಮಂತಿ, ಶಶಿ ಕಲಾ, ಅಕ್ಷತಾ,ಕರಿಯಮ್ಮ,ನಫೀಜ,ಕರಿಯಣ್ಣ,ಮಲ್ಲಿಕಾರ್ಜುನ, ದೀಪಿಕಾ,ಬಸಮ್ಮ, ರೇಣುಕಾ,ಭೀಮಶ್ರೀ, ಸೌಂದರ್ಯ, ಲಕ್ಷ್ಮಿ, ರೈತ ಸಂಘಟನೆಯ ಹನುಮಂತಪ್ಪ, ಫಕೀರ್ಪ ಸೇರಿದಂತೆ ಅನೇಕ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 