ಗುರು ಯಾವತ್ತಿಗೂ ನಿವೃತ್ತಿಯಾಗಲಾರ: ಶಿವಪ್ರಸಾದ ದೇವರು
A Guru can never retire: Shivaprasad Devaru
ಲೋಕದರ್ಶನ ವರದಿ
ಕಾಗವಾಡ 25: ಪ್ರತಿಯೊಬ್ಬರು ವಿಜ್ಞಾನಿಗಳು, ತಂತ್ರಜ್ಞಾನಿಗಳು ಇಂಜೀನೀಯರ್ಗಳು ಮತ್ತು ಡಾಕ್ಟರ್ಗಳಾಗಿ ಸೇವೆ ಸಲ್ಲಿಸಬಹುದು. ಆದರೇ ಮೇಲಿನ ಪ್ರತಿಯೊಬ್ಬರನ್ನು ರೂಪಿಸುವ ಒಬ್ಬ ಗುರುವಾಗಿ ಸೇವೆ ಸಲ್ಲಿಸುವುದು ಬಹಳ ಕಷ್ಟದ ಮತ್ತು ಜವಾಬ್ದಾರಿಯ ಕೆಲಸವಾಗಿದೆ. ಅಂತಹ ಸೇವೆಯಿಂದ ಗುರುಗಳು ಯಾವತ್ತಿಗೂ ನಿವೃತ್ತಿಯಾಗಲಾರರು. ಆರವತ್ತರ ವಯಸ್ಸು ಅರಳು-ಮರಳುವೆಂಬ ಕಾರಣಕ್ಕೆ ಸರ್ಕಾರ ಅವರನ್ನು ಸೇವೆಯಿಂದ ನಿವೃತ್ತಿ ಮಾಡಬಹುದು.
ಆದರೇ ಆರವತ್ತು ಮತ್ತೆ ಅರಳುವ ಸಮಯವೆಂದ ಗುರು ತನ್ನ ಜ್ಞಾನಾರ್ಜನೆಯನ್ನು ಎಂದಿಗೂ ನಿಲ್ಲಿಸಲಾರರು ಎಂದು ಚಿಂಚಣಿ ಸಿದ್ಧ ಸಂಸ್ಥಾನ ಮಠದ ಪಪೂ ಶಿವಪ್ರಸಾದ ದೇವರು ಹೇಳಿದ್ದಾರೆ. ಅವರು, ಶನಿವಾರ ದಿ. 25ರಂದು ತಾಲೂಕಿನ ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ 34 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯೋದ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗುತ್ತಿರುವ ಎಂ.ಸಿ. ಹೂಗಾರ ಅವರ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು.
ಚಿಕ್ಕೋಡಿ ಸಿಬಿಕೆಎಸ್ಎಸ್ ಕಾರ್ಖಾನೆಯ ನಿರ್ದೇಶಕ, ಜುಗೂಳ ಪಿಕೆಪಿಎಸ್ ಅಧ್ಯಕ್ಷ ಹಾಗೂ ಸಂಸ್ಥೆಯ ಗೌರವಾಧ್ಯಕ್ಷ ಪರಸಗೌಡಾ (ಅಣ್ಣಾಸಾಬ) ಪಾಟೀಲ ಪ್ರಾಸ್ಥಾವಿಕವಾಗಿ ಮಾತನಾಡಿ, ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಯುವಕರನ್ನು ನಿರ್ಮಾಣ ಮಾಡಿರುವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗುತ್ತಿರುವ ಎಂ.ಸಿ. ಹೂಗಾರ ಅವರ ಸೇವೆಯನ್ನು ಸಂಸ್ಥೆ ಸ್ಮರಿಸುತ್ತದೆ.
ತಮ್ಮ ಮಾರ್ಗದರ್ಶನ ಮುಂದೆಯೂ ಇರಲಿ ಎಂದು ಕೇಳಿಕೊಂಡರು. ಬೆಳಗಾವಿ ಜಿಲ್ಲಾ ಮುಖ್ಯೋಧ್ಯಾಪಕರ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿಸುತ್ತಿರುವ ಎಂ.ಸಿ. ಹೂಗಾರ ಅವರನ್ನು ಸಂಘದ ಗೌರವಾಧ್ಯಕ್ಷ ಎಸ್.ಎಸ್. ಮಠದ, ಅಧ್ಯಕ್ಷ ಸಿ.ಆರ್. ಮೆಳವಂಕಿ ಮತ್ತು 2005-06 ನೇ ಸಾಲಿನ ವಿದ್ಯಾರ್ಥಿಗಳು ಸೇರಿ ಚಿನ್ನದ ಮೂರ್ತಿಗಳನ್ನು ನೀಡಿ, ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಎಂ.ಸಿ. ಹೂಗಾರ ಅವರು ಕೆಎಸ್ಎಸ್ ಸಂಸ್ಥೆಗೆ 1 ಲಕ್ಷ ರೂ. ದೇಣಿಗೆ ನೀಡಿದರು.
ಚಿಕ್ಕೋಡಿ ಸಿಎಲ್ಇ ಶಿಕ್ಷಣ ಮಹಾವಿದ್ಯಾಲಯದ ಆಡಳಿತಾತ್ಮಕ ಸಲಹೆಗಾರ ಆನಂದಮೂರ್ತಿ ಕುಲಕರ್ಣಿ ಮುಖ್ಯ ಅತಿಥಿಗಳಾಗಿ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರು, ಸಂಸ್ಥೆಯ ಸಂಸ್ಥಾಪಕ ಸದಸ್ಯ ಬಾಬಾಸಾಹೇಬ ಪಾಟೀಲ ಅಧ್ಯಕತೆಯನ್ನು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ವಿಲಾಸ ಕಡೋಲೆ, ಮುಖಂಡರಾದ ಅನೀಲ ಕಡೋಲೆ, ಬಸವರಾಜ ನಂದಾಳೆ, ವಿಜಯ ಪಾಟೀಲ, ರಾಜು ಕಡೋಲೆ, ಮಲಗೌಡಾ ಪಾಟೀಲ, ತಾತ್ಯಾಸಾಬ ಪಾಟೀಲ, ನಿವೃತ್ತ ಶಿಕ್ಷಕರಾದ ಆರ್.ಬಿ. ಪಾಟೀಲ, ಎಸ್.ಎಸ್. ಪಾಟೀಲ, ಎ.ಎಸ್. ಮರೆಗುದ್ದಿ, ಎ.ಕೆ. ವ್ಹಾಂಟೆ, ವ್ಹಿ.ವ್ಹಿ ಲಿಂಬಾವಳಿ ಸೇರಿದಂತೆ ನಿವೃತ್ತ ಸಿಬ್ಬಂದಿ ವರ್ಗದವರು, ತಾಲೂಕಿನ ಎಲ್ಲ ಪ್ರೌಢ ಶಾಲೆಗಳ ಶಿಕ್ಷಕರು, ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪತ್ರಕರ್ತರ ಸೋಗಿನಲ್ಲಿ ಬಂದು 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ 