ಅಥಣಿ ನ್ಯಾಯವಾದಿ ಸಂಘದ ಅಧ್ಯಕ್ಷರಾಗಿ ಎ.ಎ. ಹುದ್ದಾರ, ಉಪಾಧ್ಯಕ್ಷರಾಗಿ ಆರಿ್ಪ. ಹಗೇದ ಆಯ್ಕೆ
A.A. Huddara elected as President of Athani Bar Association, A.R.P. Hageda elected as Vice Presiden
ಅಥಣಿ ನ್ಯಾಯವಾದಿ ಸಂಘದ ಅಧ್ಯಕ್ಷರಾಗಿ ಎ.ಎ. ಹುದ್ದಾರ, ಉಪಾಧ್ಯಕ್ಷರಾಗಿ ಆರಿ್ಪ. ಹಗೇದ ಆಯ್ಕೆ
ಅಥಣಿ 30: ವಕೀಲರ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎ.ಹುದ್ದಾರ , ಉಪಾಧ್ಯಕ್ಷರಾಗಿ ಆರಿ್ಪ. ಹಗೇದ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸಿ.ಕೆ.ಬಾಗಿ, ಖಜಾಂಚಿಯಾಗಿ ಜಿ.ಡಿ.ಹಿರೇಮಠ, ಕಾರ್ಯದರ್ಶಿಯಾಗಿ ಎನ್.ಪಿ.ಬಾಬರ ಚುನಾವಣೆಯಲ್ಲಿ ಮತ್ತು ಪ್ರಹಿಳಾ ಪ್ರತಿನಿಧಿಯಾಗಿ ನ್ಯಾಯವಾದಿ ಗೀತಾ ಕಾಂಬಳೆ ಅವಿರೋಧವಾಗಿ ಎಂದು ಚುನಾವಣಾಧಿಕಾರಿ ಬಿ.ಎಸ್.ಅಂಬಿ ಘೋಶಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಎ.ಎ.ಹುದ್ದಾರ ಮಾತನಾಡಿ, ಈಗಾಗಲೇ ಮಂಜುರಾದ 36 ಕೋಟಿ ರೂ. ಮೊತ್ತದ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ನಾನು ಇಪ್ಪತ್ತನಾಲ್ಕು ಗಂಟೆ ಕಾರ್ಯನಿರ್ವಹಿಸುವುದಾಗಿ ಹೇಳಿದರು. ನ್ಯಾಯವಾದಿ ಸಂಘದ ಹಿಂದಿನ ಅಧ್ಯಕ್ಷರುಗಳು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ನಾನೂ ಕೂಡ ಅವರಂತೆಯೇ ಸಂಘದ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುವೆ ಎಂದರು.
ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕಾರ ನೀಡಿದ ಹಿರಿಯ, ಕಿರಿಯ ವಕೀಲ ಬಂಧುಗಳನ್ನು ಅಭಿನಂದಿಸಿದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಆರಿ್ಪ.ಹಗೇದ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ನನ್ನ ಸಹೋದ್ಯೋಗಿಗಳಿಗೆ ಚಿರ ಋಣಿ ಎಂದ ಅವರು ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದರು. ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರಿಯ ನ್ಯಾಯವಾದಿ ಎಸ್.ಎ.ಪಾಟೀಲ(ಹುಲಗಬಾಳ) ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೆ.ಎ.ವಣಜೋಳ, ನಿಂಗಪ್ಪ ಖೋಕಲೆ, ಎಸ್.ಎ.ಪಾಟೀಲ, ಬಸವರಾಜ ಢಂಗಿ, ಸುನೀಲ ಸಂಕ, ಧರೆಪ್ಪ ಠಕ್ಕಣ್ಣವರ, ಬಸವರಾಜ ಅಂಬಿ, ಎಮ್.ಡಿ.ಗುಂಜಿಗಾಂವಿ ಸೇರಿದಂತೆ ನೂರಾರು ವಕೀಲರು ಎ.ಎ.ಹುದ್ದಾರ ಗೆಲುವಿಗೆ ಸಂಭ್ರಮಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 