ಪರಮ ಪೂಜ್ಯನೀಯರಾದ ಶ್ರೀ ಕೆ.ಟಿ.ಪಾಟೀಲ ಅವರ 90ನೇ ಜನ್ಮದಿನೋತ್ಸವ
90th Birthday Celebration of His Holiness Shri K.T. Patil
ಪರಮ ಪೂಜ್ಯನೀಯರಾದ ಶ್ರೀ ಕೆ.ಟಿ.ಪಾಟೀಲ ಅವರ 90ನೇ ಜನ್ಮದಿನೋತ್ಸವ
ಹುಬ್ಬಳ್ಳಿ 25: ಶಿಕ್ಷಣವೇ ಬಾಳಿನ ಬೆಳಕು ಎಂಬ ಉಕ್ತಿಯಂತೆ ತಮ್ಮ ಶ್ರೇಷ್ಟ ಜೀವನ ಅನುಭವದಿಂದ ಮಹಿಳಾ ವಿದ್ಯಾಪೀಠವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲು ನಿರಂತರವಾಗಿ ನಿಷ್ಟೆ, ಪ್ರಾಮಾಣಿಕ ಸೇವೆ ಸಲ್ಲಿಸಿದ, ಕಾಯಕ ಜೀವನ ನಡೆಸಿದ ಕಾಯಕ ಯೋಗಿ, ಶಿಕ್ಷಣ ಪ್ರೇಮಿ, ಪರಮ ಪೂಜ್ಯನೀಯರಾದ ಶ್ರೀ ಕೆ.ಟಿ.ಪಾಟೀಲ ಅವರ 90ನೇ ಜನ್ಮದಿನೋತ್ಸವ ಶುಭ ಸಂದರ್ಭದಲ್ಲಿ ಆರು ದಶಕಗಳ ಕಾಲ ಹುಬ್ಬಳ್ಳಿಯ ಪದ್ಮಶ್ರೀ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದ ಕಾರ್ಯದರ್ಶಿಗಳಾಗಿ ಮಹಿಳೆಯರ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ ಶ್ರೀ ಕೆ.ಟಿ.ಪಾಟೀಲ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಹಿಳಾ ವಿದ್ಯಾಪೀಠದ ಉಪನ್ಯಾಸಕಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಉಪಾಧ್ಯಕ್ಷರಾದ ಡಾ. ಸರ್ವಮಂಗಳಾ ಕುದರಿ ಅವರ ನೇತೃತ್ವದಲ್ಲಿ ಶಾಲು, ಗ್ರಂಥ ನೀಡಿ, ಮಾಲಾರೆ್ಣ ಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಲಾಯಿತು. ಭಕ್ತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಹಾಗೂ ಶುಭಾಶಯಗಳನ್ನು ಕೋರಿದರು. ಶ್ರೀ ಕೆ.ಟಿ.ಪಾಟೀಲ ಅವರ ಜೀವನ ಹಾಗೂ ಸಾಧನೆಗಳನ್ನು ಒಳಗೊಂಡ ಮಹಿಳಾ ವಿದ್ಯಾಪೀಠದ ಅಭಿವೃದ್ಧಿಯ ಹರಿಕಾರರು ಸನ್ಮಾನ್ಯ ಶ್ರೀ ಕೆ.ಟಿ.ಪಾಟೀಲರು ಎಂಬ ಅಭಿನಂದನಾ ಪತ್ರವನ್ನು ಶ್ರೀ ಕೆ.ಟಿ.ಪಾಟೀಲರಿಗೆ ಸಮರ್ಿಸಲಾಯಿತು. ನೀಲಾ ಕೆ.ಪಾಟೀಲ, ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಶ್ರೀ ಕತೃ ಜಗದ್ಗುರು ಗುರುಸಿದ್ಧೇಶ್ವರ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ, ಜ್ಯೋತಿ ಜಂಗಣ್ಣವರ, ಶಿವಬಸಪ್ಪ ಸೊಬರದ, ಉಪನ್ಯಾಸಕಿ ಪ್ರೀಯಾಂಕ ಗದಗ, ಸೌಜನ್ಯ ಸೊಬರದ, ಮುಂತಾದವರು ಇದ್ದರು. ಮಹಿಳಾ ವಿದ್ಯಾಪೀಠದ ಉಪನ್ಯಾಸಕಿ ಡಾ. ಸರ್ವಮಂಗಳಾ ಕುದರಿ ಅವರ ಮಾತುಗಳು ಶ್ರೀ ಕೆ.ಟಿ.ಪಾಟೀಲರು ತಂದೆಯ ಸಮಾನರು, ತಾಯಿ ಕರುಳಿನವರು, ಬಹುಮುಖ ಪ್ರತಿಭೆಯುಳ್ಳ ಸರಳ ಸಜ್ಜನಿಕೆಯ ಸಾಕಾರಮೂರ್ತಿ. ನೆಲದ ಮರೆಯ ನಿಧಾನದಂತ ವ್ಯಕ್ತಿತ್ವದವರು. ಪ್ರಗತಿಪರ ಶಿಕ್ಷಣ ಪ್ರೇಮಿಗಳು. ಶಿಕ್ಷಣ, ಸಮಾಜ ಹಾಗೂ ಸಾಹಿತ್ಯ ಹಿತಚಿಂತಕರಾಗಿ ಮಹಿಳಾ ವಿದ್ಯಾಪೀಠದ ವಿದ್ಯಾರ್ಥಿನಿಯರಿಗೆ ಹಾಗೂ ವೃತ್ತಿ ಬಾಂಧವರ ಬದುಕಿಗೆ ಆಶಾಕಿರಣವಾಗಿದ್ದರು. ಮಹಿಳಾ ವಿದ್ಯಾಪೀಠದ ಬೆನ್ನೆಲುಬಾಗಿ ತಮ್ಮ ಜೀವನವನ್ನು ಗಂಧದ ಕೊರಡಿನಂತೆ ತೈದವರು. ಪಾಟೀಲರು ಶಿಕ್ಷಕರನ್ನು ಗೌರವಿಸಿದ ರೀತಿ, ಶಿಕ್ಷಕರಿಗೆ ತಂದೆಯಾಗಿ, ಕಾಯಕಯೋಗಿ, ನೇರ, ದಿಟ್ಟ ನಿರಂತರ ಹೊರಾಟಗಾರರಾಗಿ, ಸಮಾಜ ಸೇವಕರಾಗಿ, ಬಡವರ ಆಪತ್ಬಾಂಧವರಾಗಿ, ಸ್ನೇಹ ಜೀವಿಯಾಗಿ, ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿ, ಕರುಣಾಮಯಿಯಾಗಿ, ಇತಿಹಾಸದಲ್ಲಿ ಅಳಿಸಲಾಗದಂತ ಐತಿಹಾಸಿಕ ಸಂಸ್ಥೆ ಅಭಿವೃದ್ಧಿಯ ಹರಿಕಾರರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯದಕ್ಷತೆ, ನ್ಯಾಯ ನಿಷ್ಠುರತೆ, ಕ್ರೀಯಾಧರ್ಮ, ಮಾನವೀಯ ಮಿಡಿತ ತಮ್ಮ ಬದುಕಿನ ಸೂತ್ರಗಳಾಗಿದ್ದವು. ಶಿಕ್ಷಕರ ಬಗ್ಗೆ ಕಾಳಜಿ, ಜ್ಞಾನ, ವಿಶಾಲ ಮನೋಭಾವ, ಪ್ರೀತಿ, ಸರ್ವಧರ್ಮ ಸಮನ್ವಯತೆಯ ರೀತಿ ನಮ್ಮನ್ನು ಬೆರಗುಗೊಳಿಸುತ್ತವೆ ಎಂದು ಹೇಳಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 