ಕೇತೇಶ್ವರ ಸ್ವಾಮಿಯ 895 ಜಯಂತೋತ್ಸವ
895th birth anniversary of Keteshwara Swamy
ರಾಣೇಬೆನ್ನೂರು : 04 ಇಲ್ಲಿನ ಹಲಗೇರಿ ರಸ್ತೆಯಲ್ಲಿರುವ ಮೇದಾರ ಸಮುದಾಯದ ಆರಾಧ್ಯ ದೈವ, ಕಾಯಕಯೋಗಿ ಮಹಾ ತಪಸ್ವಿ, ಶರಣ ಶ್ರೀ ಕೇತೇಶ್ವರ ಸ್ವಾಮಿಯ 895ನೇ ಜಯಂತೋತ್ಸವದ ಧಾರ್ಮಿಕ ಕಾರ್ಯಕ್ರಮವು ನಾಳೆ ನವೆಂಬರ್ 5, 2025 ರಂದು ಬುಧವಾರ ನಡೆಯಲಿದೆ ಎಂದು ಶ್ರೀ ಮಲಿಯಮ್ಮ ದೇವಿ ದೇವಸ್ಥಾನ ಮೇದಾರ ಸಮಾಜ ಸೇವಾ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಮುಂಜಾನೆ 10 ಗಂಟೆಗೆ ಕೆಇಬಿ ವಿನಾಯಕ ದೇವಸ್ಥಾನದಿಂದ, ಕೇತೇಶ್ವರ ಸ್ವಾಮಿಯ ತೈಲ ಭವ್ಯ ಭಾವಚಿತ್ರದ ಮೆರವಣಿಗೆ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಧ್ಯಾಹ್ನ 12 ಗಂಟೆಗೆ, ಮೇದಾರ ಓಣಿಯ, ದೇವಸ್ಥಾನದ ಆವರಣದಲ್ಲಿ ಸಾಂಗ ತ್ಯಗೊಂಡು ನಂತರ ಧಾರ್ಮಿಕ ಸಭಾ ಕಾರ್ಯಕ್ರಮವು ಜರುಗಲಿದೆ. ಸಮಾರಂಭದಲ್ಲಿ ನಗರದ ಅನೇಕ ಗಣ್ಯರು, ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 