ಚಡಚಣ ತಾಲೂಕು ಆಡಳಿತದಿಂದ 77 ನೇ ಗಣರಾಜ್ಯೋತ್ಸವಚಡಚಣ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ವಿಠ್ಠಲ ಕಟಕಧೋಂಡ
77th Republic Day celebrations by Chadchana Taluk Administration Committed to the comprehensive dev
ಚಡಚಣ 27: ಸಾವಿರಾರೂ ವರ್ಷಗಳ ಕಾಲ ಬ್ರಿಟಿಷರ ಗುಲಾಮ ಸ್ಥಿತಿಯಲ್ಲಿದ್ದ ನಾವು ಇವತ್ತು ಸ್ವಾತಂತ್ರ್ಯ ನಂತರ ಡಾ. ಅಂಬೇಡ್ಕರ್ ಬಲಿಷ್ಠ ಸಂವಿಧಾನದಿಂದ ಜಗತ್ತನಲ್ಲಿಯೇ ಮಾದರಿಯಾಗಿ ಮುಂದುವರದಿದ್ದೇವೆ ಎಂದು ನಾಗಠಾಣ ಮತಕ್ಷೇಕ್ರದ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಡಾ.ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ದುರ್ಬಲ ಜನಾಂಗ ಮತ್ತು ಮಹಿಳೆಯರು ಸೇರಿದಂತೆ ಎಲ್ಲಾರಿಗೂ ಸಮಾನತೆ ನೀಡುವ ಮೂಲಕ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಡಿಯಲ್ಲಿ ನಮ್ಮೇಲ್ಲರಿಗೂ ಸಮಾನತೆ ಹಕ್ಕುಗಳು ನೀಡಿದ್ದು, ಜಗತ್ತು ನಮ್ಮನ್ನು ನೋಡುತ್ತಿದೆ. ಜಗತ್ತಿನಲ್ಲಿ ನಮ್ಮ ದೇಶದ ಪ್ರಬಲವಾಗಿ ಬೆಳೆಯುತ್ತಿದೆ ಎಂದ ಅವರು, ಚಡಚಣ ಏತ ನೀರಾವರಿ, ಹೊಳೆ ಸಂಖ ಕೆರೆ ತುಂಬುವ ಯೋಜನೆಯಿಂದ ಚಡಚಣ ತಾಲೂಕಿನ ಪ್ರತಿಯೊಂದು ಗ್ರಾಮ ನೀರಾವರಿಯಾಗಲಿದೆ. ಚಡಚಣ ತಾಲೂಕಿನ ಆಡಳಿತ ಕಛೇರಿಗಳು ಶ್ರೀಘ್ರದಲೇ ಮಿನಿವಿಧಾನಸೌದ ಕಟ್ಟಡ ಕಟ್ಟುವ ಮೂಲಕ ಎಲ್ಲಾ ಕಛೇರಿಗಳು ಪ್ರಾರಂಭಿಸುವ ಮೂಲಕ ತಾಲೂಕಿ ಸಮಗ್ರ ಅಭಿವೃದ್ದಿಗೆ ಬದ್ದ ಎಂದರು.ತಾಲೂಕು ದಂಢಾಧಿಕಾರಿ ಸಂಜೆಯ ಇಂಗಳೆ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ,
ದೇಶದ ಸುವ್ಯವಸ್ಥೆ ಆಡಳಿತ ನಡೆಸಲು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಮಗೆ ಉತ್ತಮ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.ಸಾಹಿತಿ ವಿದ್ಯಾ ಕಲ್ಯಾಣಶೇಟ್ಟಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ನಾಟಕ, ನೃತ್ಯ ಪ್ರದರ್ಶನ ನಡೆಸಿದರು.ವೇದಿಕೆಯ ಮೇಲೆ ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ್, ತಾಪಂ ಇಓ ಸಂಜಯ ಖಡಗೇಕರ, ಪ.ಪಂ ಮುಖ್ಯಲೆಕ್ಕಾಧಿಕಾರಿ ಬಾಬಾಸಾಹೇಬ ತಾವಸೆ, ಗ್ಯಾರಂಟಿ ತಾಲೂಕಾಧ್ಯಕ್ಷ ರವಿ ಜಾಧವ, ಸಿಡಿಪಿಒ ಸಾಹೇಬಗೌಡ ಜುಂಜ್ರವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ, ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ್, ಕೃಷಿ ಇಲಾಖೆ ದಾನಪ್ಪ ಕತ್ನಾಳಿ, ಪಶು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಗಂಗನಳ್ಳಿ, ಸಿಪಿಐ ಪರಶುರಾಮ ಮನಗೂಳಿ, ಶ್ರೀಕಾಂತ ಗಟಗಲ ,
ಚೇತನ ನಿರಾಳೆ, ಪ್ರಕಾಶಗೌಡ ಪಾಟೀಲ, ಸೈದು ಕೊಡಹೊನ್ನ, ದಶರಥ ಬನಸೋಡೆ, ಮತ್ತು ಶಾಲಾ ವಿದ್ಯಾರ್ಥಿಗಳು, ಎಲ್ಲಾ ಇಲಾಖೆ ಸಿಬ್ಬಂದಿ, ಪ್ರಗತಿಪರ ಸಂಘಟನೆ ನಾಯಕರು, ಉಪಸ್ಥಿತರಿದ್ದರು.ಬಾಕ್ಸ್:-ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಪ್ರಸಸ್ತಿ ಪ್ರಧಾನತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನಗದು ನೀಡಿ ಗೌರವಿಸಲಾಯಿತು. ಮಾಜಿ ಸೈನಿಕ ಲಕ್ಷ್ಮಣ ಕರಂಡೆ, ಬೆಳೆ ಸಮೀಕ್ಷೆ ಅಮರ ಬನಸೋಡೆ, ಕುಸ್ತಿ ಪಟು ಸಿದ್ದಾರಾಮ ಶವರಿ, ಸುಲಗಿತ್ತಿ ಅನುಸೂಯ್ಯಾ ಬನಸೋಡೆ, ಬಾಲ್ಯವಿವಾಹ ತಡೆಗಟ್ಟುವಿಕೆ ಭಾರತಾ ಬನಸೋಡೆ, ಜಾನಪದ ಜಯಶ್ರೀ ಬಿರಾದಾರ, ಕನ್ನಡಪ್ರಭ ತಾಲೂಕು ವರದಿಗಾರ ಶಂಕರ ಹಾವಿನಾಳ. ಭಜನಾ ಅನೀತಾ ಮೇತ್ರಿ, ಅತ್ತುತ್ತಮ ಕಬ್ಬು ಬೆಳೆಗಾರ ಮಹೇಶ ಭೈರಗೊಂಡ(ಉಮರಾಣಿ) ಮತ್ತು ಚಿರತೆ ಸೆರೆಗೆ ಸಹಕರಿಸಿದ ಮಣಕಂಲಗಿ , ಹಲಸಂಗಿ ಗೊಪಾಲಕ ತಂಡದವರಿಗೆ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪಟ್ಟಣದ 6 ಅಂಗನವಾಡಿಗಳಿಗೆ 6 ಟಿವ್ಹಿ ವಿತರಣೆ ಮಾಡಿದರು. ವರದಿಗಾರ ಶಂಕರ ಹಾವಿನಾಳ ಅವರಿಗೆ ಪ್ರಶಸ್ತಿ ನೀಡಿ ಗೌರವ:ವಿವಿಧ ಕ್ಷೇತ್ರಗಳಲ್ಲಿ ಹಾಗೂ ಪತ್ರಿಕೋದ್ಯಮದಲ್ಲಿ ಸಾಧನೆಯನ್ನು ಗುರುತಿಸಿ ಕನ್ನಡಪ್ರಭ ವಾರದಿಗಾರ ಶಂಕರ ಹಾವಿನಾಳ ಗೆ ತಾಲೂಕು ಆಡಳಿತದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಾಧನೆಗೆ ತಾಲೂಕಿನ ಹಿರಿಯ ವರಿದಿಗಾರರಾದ ಅಲ್ಲಮಪ್ರಭು ಕರ್ಜಗಿ, ಮನೋಜ ಕಟಗೇರಿ, ಜಿಲ್ಲಾ ಕಾರ್ಯಕಾರಿಣಿ ಕನಿಪಾ ಅಧ್ಯಕ್ಷ ರಮೇಶ ಬಿರಾದಾರ, ಉಪಾಧ್ಯಕ್ಷರಾದ ಸಂಗಮೇಶ ಹೂಗಾರ, ಅನಿಲ ಕೊಡತೆ, ಕಾರ್ಯದರ್ಶಿ ರಾಜಶೇಖರ ಡೋಣಜಮಠ, ಖಜಾಂಚಿ ವಿನಾಯಕ ಜೀರಂಕಲಗಿ, ಸದಸ್ಯರಾದ ಸುಬ್ರಮಣ್ಯ ಸಂಗಮ, ಶಿವಯ್ಯ ಮಠಪತಿ, ಪ್ರಶಾಂತ ಮುಂಡೇವಾಡಿ, ಗಂಗಾಧರ ಗಿಡವೀರ ಸೇರಿದಂತೆ ಸಂಘಟನೆಯ ಎಲ್ಲ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 