70 ನೇ ಎ.ಐ.ಡಿ.ಎಸ್.ಓ ಸಂಸ್ಥಾಪನ ದಿನ ಆಚರಣೆ
70th AIDSO Foundation Day Celebration
70 ನೇ ಎ.ಐ.ಡಿ.ಎಸ್.ಓ ಸಂಸ್ಥಾಪನ ದಿನ ಆಚರಣೆ
ಕೊಪ್ಪಳ 28: ವಿವಿಧ ಶಾಲಾ ಕಾಲೇಜುಗಳಲ್ಲಿ 70 ನೇ ಎ.ಐ.ಡಿ.ಎಸ್.ಓ ಸಂಸ್ಥಾಪನ ದಿನವನ್ನು ಆಚರಿಸಿದ ವಿದ್ಯಾರ್ಥಿಗಳು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎ.ಐ.ಡಿ.ಎಸ್.ಓ ಜಿಲ್ಲಾ ಸಂಚಾಲಕರಾದ ಗಂಗಾರಾಜ ಅಳ್ಳಳ್ಳಿ ಮಾತನಾಡಿ ಡಿಸೆಂಬರ್ 28 ನಮ್ಮ ನಲ್ಮೆಯ ಸಂಘಟನೆಯ ಸಂಸ್ಥಾಪನಾ ದಿನ, ದೇಶದ ನವೋದಯ ಚಿಂತಕರಾದ ವಿದ್ಯಾಸಾಗರ್, ಸಾವಿತ್ರಿ ಬಾಯಿ ಪುಲೆ, ಜ್ಯೋತಿಬಾ ಫುಲೆ, ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ , ನೇತಾಜಿ ಕನಸಿನ ಭಾರತ ನಿರ್ಮಿಸಲು, ಸ್ವಾತಂತ್ರ ಸಂಗ್ರಾಮದ ರಾಜಿ ರಹಿತ ಕ್ರಾಂತಿಕಾರಿ ಹೋರಾಟಗಾರರು ಮತ್ತು ನಮ್ಮ ನಾಯಕರು ಹಾಗೂ ಶಿಕ್ಷಕರಾದ ಕಾಮ್ರೇಡ್ ಶಿವದಾಸ್ ಘೋಷ್ ರವರ ಚಿಂತನೆಗಳ ಆಧಾರದ ಮೇಲೆ ಬಂಗಾಳದಾಲ್ಲಿ ಬಹುಪಾಲು ಪ್ರೌಢ ಶಾಲಾ ವಿದ್ಯಾರ್ಥಿಗಳು ಡಿಸೆಂಬರ್ 28, 1954 ನಮ್ಮ ಎ.ಐ.ಡಿ.ಎಸ್.ಓ ಆರಂಭಿಸಿದರು.
ಇಂದು, ದೇಶದಾದ್ಯಂತ 30 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎ.ಐ.ಡಿ.ಎಸ್.ಓ ಕಾರ್ಯ ನಿರ್ವಹಿಸುತ್ತಾ ದೇಶದ ಬಹು ದೊಡ್ಡ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ. ಇಂದು ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲ ಮೂಲಭೂತ ಸಮಸ್ಯೆಗಳ ವಿರುದ್ಧ ಹೋರಾಡಲು, ಮಹಾನ್ ವಿಚಾರಧಾರೆಯ ಆಧಾರದ ಮೇಲೆ ಶಿಕ್ಷಣ-ಮಾನವತೆ-ಸಂಸ್ಕೃತಿಯನ್ನು ಉಳಿಸುವ ಚಳುವಳಿಯನ್ನು ನಾವು ತಳ ಮಟ್ಟದಿಂದ ಆರಂಭಿಸಬೇಕಿದೆ. ದೇಶಾದ್ಯಂತ ಓಇಕ2020 ಪ್ರತಿರೋಧಿಸಲು, ಸಾರ್ವಜನಿಕ ಶಿಕ್ಷಣ ಉಳಿಸಲು ನಾವೆಲ್ಲರೂ ಸಜ್ಜಾಗಬೇಕಿದೆ.
ಈ ದೇಶದ ಪ್ರತಿಯೊಬ್ಬ ಮಗುವಿಗೂ, ಉನ್ನತ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ದೊರಕಬೇಕೆಂದು ಹೋರಾಡಿದ ಭಗತ್ ಸಿಂಗ್, ಸುಭಾಸ್ ಚಂದ್ರ ಬೋಸ್ ರವರ ಕನಸು ಕನಸಾಗಿಯೇ ಉಳಿದಿದೆ. ಅವರು ತಮ್ಮ ಕನಸನ್ನು ನನಸು ಮಾಡುತ್ತಾರೆ ಎಂಬ ಭರವಸೆ ಇರಿಸಿದ್ದು ನಮ್ಮ ಮೇಲೆ ಈ ನೆಲದ ವಿದ್ಯಾರ್ಥಿ ಸಮುದಾಯದ ಮೇಲೆ ಆ ಭರವಸೆ ಈಡೇರಿಸುವ ಐತಿಹಾಸಿಕ ಜವಾಬ್ದಾರಿ ನಮ್ಮ ಮೇಲಿದೆ. ಈ ಜವಾಬ್ದಾರಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಈ ಸಂಸ್ಥಾಪನಾ ದಿನದಂದು ನಾವೆಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳೋಣ ಈ ಹಿನ್ನಲೆಯಲ್ಲಿ ಸಂಸ್ಥಾಪನಾ ದಿನದ ಸಂದೇಶವನ್ನು ನಿಮ್ಮ ಎಲ್ಲ ಸ್ನೇಹಿತರಿಗೆ, ಂಋಖಓ ಸಮಿತಿಗಳ ಎಲ್ಲ ಸದಸ್ಯರಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸೋಣ ನಮ್ಮ ರಾಜ್ಯದಲ್ಲಿಯೂ ಬಲಿಷ್ಠ ಸಂಘಟನೆ ಕಟ್ಟುವ ಕಾರ್ಯಕ್ಕೆ ಮುಂದಾಗೋಣ ಎಂದರು.
ಈ ಸಂಧರ್ಭದಲ್ಲಿ ಎ.ಐ.ಡಿ.ಎಸ್.ಓ ನ ಕಾರ್ಯಕರ್ತರಾದ ಸದಾಶಿವ, ಬಾಬು,ಚೆನ್ನವೀರ, ತಿಪ್ಪೇಶ್, ಭೀಮೇಶ್, ಹನುಮೇಶ್, ಅಂಬರೇಶ್, ಕನಕನಗೌಡ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಹಿಸಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 