ಜ.15 ರಂದು ಹರಿಹರದಲ್ಲಿ 6 ನೇ ವರ್ಷದ ಹರಜಾತ್ರಾಮಹೋತ್ಸವ- ವಚನಾನಂದ ಶ್ರೀ

ಜ.15 ರಂದು ಹರಿಹರದಲ್ಲಿ 6 ನೇ ವರ್ಷದ ಹರಜಾತ್ರಾಮಹೋತ್ಸವ- ವಚನಾನಂದ ಶ್ರೀ 6th Annual Harjatramahotsava to be held in Harihar on January 15th - Vachanananda Sri

                ರಾಣಿಬೆನ್ನೂರ  13:  ಹರಿಹರೇಶ್ವರ ಸ್ವಾಮಿಯ ಊರು ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ  ಪೀಠವು ದಕ್ಷಿಣಾಯದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಿಸುವಮಕರ ಸಂಕ್ರಾಂತಿ  ಹಬ್ಬದ ದಿನ 6 ನೇ ವರ್ಷದ ಹರಜಾತ್ರಾ ಮಹೋತ್ಸವವು ಜ.15ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಹೇಳಿದರು.ಶನಿವಾರ ಇಲ್ಲಿನ ಮೇಡ್ಲೇರಿ ರಸ್ತೆಯಲ್ಲಿರುವ ಆದಿಶಕ್ತಿ ಸಭಾಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಿತ್ತೂರುರಾಣಿ ಚೆನ್ನಮ್ಮದ್ವಿಶತಮಾನ ವಿಜಯೋತ್ಸವ ಸಮಾರೋಪ ಸಮಾರಂಭ ಮತ್ತು ಪ್ರಥಮಪಂಚಮಸಾಲಿ ಜಗದ್ಗುರು ಲಿಂ.ಶ್ರೀ ಡಾಽ ಮಹಾಂತ ಶಿವಾಚಾರ್ಯ ಮಹಾಸ್ವಾಮಿಜಿಯವರ 13ನೇವರ್ಷದ ಪುಣ್ಯ ಸ್ಮರಣೋತ್ಸವ ನಡೆಯಲಿದೆ.

                ಈ ವರ್ಷದಿಂದ ವೀರರಾಣಿ ಕಿತ್ತೂರುಚನ್ನಮ್ಮನವರ ಸ್ಮರಣೆಯಲ್ಲಿ ಹರಜಾತ್ರೆ ಮಹೋತ್ಸವ ಆಚರಿಸಲು ಹರಿಹರಪಂಚಮಸಾಲಿ ಪೀಠ ನಿರ್ಧರಿಸಿದೆ. ಚನ್ನಮ್ಮನ ಸವಿ ನೆನಪಿನಲ್ಲಿ ಒಬ್ಬರಿಗೆ  . ಮುಂದಿನ ದಿನಗಳಲ್ಲಿ ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಅಕ್ಕಮಹಾದೇವಿ,ಅರಟಾಳ ರುದ್ರಗೌಡ ವಕೀಲರಾದ ಕಂಬಳಿ ಸಿದ್ದಪ್ಪ, ಮೈಲಾರ ಮಹಾದೇವಪ್ಪ ಮತ್ತಿತರ ಶರಣರ ಎರಡನೆಯರ ಮತ್ತು ಧಾರ್ಶನಿಕರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಚಿಂತನೆ ಹೊಂದಿದೆ. ಈ ಪ್ರಶಸ್ತಿಗಳು ಒಂದು ಜಾತಿ,ಜಿಲ್ಲೆ, ರಾಜ್ಯ, ರಾಷ್ಟಕ್ಕೆ ಮಾತ್ರವಲ್ಲ. ಅಂತರಾಷ್ಟಿಯ ಮಟ್ಟದಲ್ಲಿ ಗುರುತಿಸಿಕೊಂಡಸಾಧಕರಿಗೂ ನೀಡಲು ಪಂಚಮಸಾಲಿ ಪೀಠ ತೀರ್ಮಾನಿಸಿದೆ.  ನಮ್ಮ ರಾಜ್ಯ ಸೇರಿದಂತೆ ಬೇರೆರಾಜ್ಯಗಳಾದ ಮಹಾರಾಷ್ಟ್ರ, ಕೊಲ್ಲಾಪುರ, ಲಾತೂರ್ ಗಡಹಿಂಗ್ಲಜ. ಸೇರಿದಂತೆ  ರಾಜ್ಯವು ಸೇರಿ  25 ಸಾವಿರಕ್ಕೂ ಅಧಿಕಭಕ್ತರು ಜಾತ್ರೆಗೆ ಆಗಮಿಸುವ ನೀರೀಕ್ಷೆ ಇದೆ.

               ವಧು-ವರರ ಸಮಾವೇಶನಡೆಯಲಿದೆ. ತ್ರೀವಿಧ ದಾಸೋಹಿಗಳಾದ ಅಕ್ಷರದಾಸೋಹ, ಅನ್ನ ದಾಸೋಹ ಹಾಗೂಧಾರ್ಮಿಕ ದಾಸೋಹವನ್ನು ಪೀಠವು ಭಕ್ತರಿಗೆ ಉಣಬಡಿಸುತ್ತಿದೆ. ಈ ಕಾರ್ಯಕ್ರಮಕ್ಕೆಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮಯಶಸ್ವಿಗೊಳಿಸಬೇಕು ಎಂದು ಶ್ರೀಗಳು ಕೋರಿದರು.ರಾಜ್ಯಾಧ್ಯಕ್ಷ ಸಣ್ಣಗೌಡ್ರ ಪಾಟೀಲ, ಸಂತೋಷಕುಮಾರ ಪಾಟೀಲ,ಎಸ್‌.ಎಸ್‌.ರಾಮಲಿಂಗಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ಡಾಽ ಬಸವರಾಜ ವೀರಾಪೂರ,ಭಾರತಿ ಜಂಬಗಿ, ಮಂಗಳಗೌರಿ ಪೂಜಾರ, ಬಸವರಾಜ ಹುಲ್ಲತ್ತಿ, ಪುಷ್ಪಾ ಬಾದಾಮಿ, ರಾಜಣ್ಣ ಮೋಟಗಿ,ನಾಗರತ್ನ ಗುಡಿಹಳ್ಳಿ, ಪ್ರಮೀಳಾ ಜಂಬಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಇದ್ದರು.