ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 61 ಪ್ರಕರಣಗಳು ಇತ್ಯರ್ಥ

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 61 ಪ್ರಕರಣಗಳು ಇತ್ಯರ್ಥ  61 cases settled at the National Lok Adalat


ಲೋಕದರ್ಶನ ವರದಿ 

ಹೂವಿನಹಡಗಲಿ  ಸೆ.21:  ಲೋಕ ಅದಾಲತ್ನಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಕಕ್ಷಿದಾರರಲ್ಲಿ ಪರಸ್ಪರ ಸಾಮರಸ್ಯ ಸಾಧ್ಯ. ಇದರಿಂದ ನ್ಯಾಯಾಲಯದ ಬಹಳಷ್ಟು ಕೆಲಸವು ಉಳಿಯುತ್ತದೆ. ಲೋಕ ಅದಾಲತ್ನಲ್ಲಿ ಒಟ್ಟು 61 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ  ಮಧುಸೂದನ್  ಡಿ.ಕೆ. ತಿಳಿಸಿದರು.ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಚಕ್ ಬೌನ್ಸ್‌ 138 ಮತ್ತು ಪಾಲು ವಿಭಾಗದಲ್ಲಿ ಪಾಲು ವಿಭಾಗ ಪ್ರಕರಣಗಳು ಇತ್ಯಾದಿ ಕಕ್ಷಿದಾರರು ಮತ್ತು ವಕೀಲರು ಮೂಲಕ ರಾಜಿ ಸಂಧಾನ ಮಾಡಲಾಯಿತು.   ಕಿರಿಯ ಶ್ರೇಣಿ ನ್ಯಾಯಾಲಯದ ಪೀಠಾಸಿನ ವಹಿಸಿ 79 ಪ್ರಕರಣಗಳ ಪೈಕಿ 61 ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು ರೂ.36,13,500.00 ರೂಗಳ ಪರಿಹಾರ ಸಂದಾಯ ಮಾಡಲಾಗಿದೆ.  ಜೊತೆಗೆ 304 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 4 ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು 9,50,000 ರೂ.ಗಳ ಪರಿಹಾರ ಮೊತ್ತವನ್ನು ಸಂದಾಯ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಹಿರಿಯ ವಕೀಲರು, ಸಿಬ್ಬಂದಿ ಇದ್ದರು.