60 ಕೆಜಿ ಶ್ರೀಗಂಧದ ತುಂಡು ವಶ: ಆರೋಪಿ ಪರಾರಿ
60 kg piece of sandalwood seized: Accused absconded
ಮುಂಡಗೋಡ 03: ಸುಮಾರು 60 ಕೆಜಿ ಶ್ರೀಗಂಧವನ್ನು ದಾಸ್ತಾನು ಮಾಡಿಕೊಂಡಿದ್ದ ವ್ಯಕ್ತಿಯ ಮನೆ ಮೇಲೆ ದಾಳಿ ನಡೆಸಿದ ಮುಂಡಗೋಡ ವಲಯ ಅರಣ್ಯಾಧಿಕಾರಿ ಅಪ್ಪಾಸಾಹೇಬ ಕಲ್ಲಶೆಟ್ಟಿ ನೇತೃತ್ವದ ತಂಡ ಮಂಗಳವಾರ ಶ್ರೀಗಂಧವನ್ನು ವಶಪಡಿಸಿಕೊಂಡ ಕುರಿತು ವರದಿಯಾಗಿದೆ.
ದಾಸ್ತಾನು ಮಾಡಿಕೊಂಡಿದ್ದ ವ್ಯಕ್ತಿಯನ್ನು ಅಗಡಿ ಗ್ರಾಮದ ಪರಶುರಾಮ ಲಮಾಣಿ ಎಂದು ಹೇಳಲಾಗುತ್ತಿದೆ. ಮುಂಡಗೋಡ ವಲಯದ ಇಂದೂರ ಶಾಖೆಯ ನಂದಿಕಟ್ಟಾಬೀಟ್ ವ್ಯಾಪ್ತಿಯ ಅಗಡಿ ಗ್ರಾಮದಲ್ಲಿ ಆರೋಪಿಪರಶುರಾಮ ತನ್ನ ಮನೆಯಲ್ಲಿ ಶ್ರೀಗಂಧವನ್ನುಅನಧಿಕೃತವಾಗಿ ದಾಸ್ತಾನು ಮಾಡಿಕೊಂಡಿರುವ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಅರಣ್ಯ ಇಲಾಖೆ ಸುಮಾರು 60 ಕೆಜಿ ಶ್ರೀ ಗಂಧದ ತುಂಡಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಯಲ್ಲಾಪುರ ಉಪಅರಣ್ಯ ಸಂರಕ್ಷಾಣಾಧಿಕಾರಿಗಳಾದಹರ್ಷಾಬಾನು ಜೆ.ಪಿ, ಮುಂಡಗೋಡ ಉಪವಿಭಾಗದ ಎಸಿಎಫ್ ರವಿ ಹುಲಕೋಟಿ ಇವರ ಮಾರ್ಗದರ್ಶನದಲ್ಲಿ ಮುಂಡಗೋಡ ವಲಯ ಆರ್.ಎಫ್.ಒ ಅಪ್ಪಾರಾವಕಲ್ಲಶೆಟ್ಟಿ, ಇಂದೂರ ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ವೆರ್ಣೇಕರ, ಅರಣ್ಯ ರಕ್ಷಕರಾದ ಮರ್ದಾನಲಿ, ನಾರಾಯಣ ರಜಪೂತ ದಾಳಿ ನಡೆಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 