436 ಮಕ್ಕಳು ವೈದ್ಯಕೀಯ ಶಿಬಿರದಲ್ಲಿ ಭಾಗಿ
436 children participated in medical camp
ಹಾವೇರಿ 02: ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೆಂಗಳೂರು ಅಲಿಂಕೊ ಸಂಸ್ಥೆ ಹಾಗೂ ತಾಲೂಕ ಆರೋಗ್ಯ ಇಲಾಖೆ ಸಹಯೋಗದಲ್ಲಿ ತಾಲೂಕಾ ಹಂತದಲ್ಲಿ ಸೋಮವಾರ ಹಾವೇರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ವೈದ್ಯಕೀಯ ಶಿಬಿರ ಜರುಗಿತು.
ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಹಂತದ ವರೆಗೆ ವ್ಯಾಸಾಂಗ ಮಾಡುತ್ತಿರುವ ದೈಹಿಕ ವಿಕಲತೆ, ಬೌದ್ದಿಕ ವಿಕಲತೆ, ಪೂರ್ಣ ಅಂಧರು, ಬಹು ವಿಕಲತೆ, ಶ್ರವಣ ನ್ಯೂನತೆ ಮತ್ತು ಸೆರಬ್ರಲ್‌ಪಲ್ಸಿ ನ್ಯೂನತೆ 436 ಮಕ್ಕಳು ವೈದ್ಯಕೀಯ ಶಿಬಿರಕ್ಕೆ ಹಾಜರಾಗಿದ್ದರು.
ವೈದ್ಯಕೀಯ ಶಿಬಿರದಲ್ಲಿ ಹಾಜರಾದ ಮಕ್ಕಳಿಗೆ ಶಾಲೆಗೆ ಬರಲು ಹಾಗೂ ದಿನನಿತ್ಯ ಜೀವನದ ಉಪಯೋಗಕ್ಕಾಗಿ ಈ ಮೌಲ್ಯಾಂಕನ ಶಿಬಿರದಲ್ಲಿ ಸಾಧನ ಸಲಕರಣೆಗಳ ಪಟ್ಟಿ ಮಾಡಲಾಗುವುದು. ಅರ್ಹ ಫಲಾನುಭವಿಗಳಿಗೆ ಇಲಾಖೆ ಅನುದಾನ ಪಡೆದು ಉಚಿತವಾಗಿ ಸಾಧನ ಸಲಕರಣಗಳನ್ನು ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್ ಪಾಟೀಲ ತಿಳಿಸಿದರು.
ಕರ್ನಾಟಕ ಸಮಗ್ರ ಶಿಕ್ಷಣ ಉಪ ಸಮನ್ವಯಾಧಿಕಾರಿ ನಿರಂಜನಮೂರ್ತಿ ಅವರು, ಈ ಶಿಬಿರದ ಸದುಪಯೋಗ ಪಡೆಯವುದರ ಜೊತೆಗೆ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುವಂತೆ ವಿಶೇಷ ಚೇತನ ಮಕ್ಕಳಿಗೆ ಕರೆ ನೀಡಿದರು.
ಶಿಬಿರದಲ್ಲಿ ಪಿ.ಎಸ್ ಕೊಪ್ಪದ,ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳು, ಸಹಾಯಕ ಸಮನ್ವಯಾಧಿಕಾರಿಗಳು, ಎ.ಸಿ.ಓ.ಗಳು, ಎಲ್ಲಾ ಸಿ.ಆರ್.ಪಿ.ಗಳು ಹಾಗೂ ಬಿ.ಆಯ್, ಈ.ಆರ್.ಟಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 