ಡಿ.7ರಂದು ಮೆಟ್ರಿಯ ಮಹಾದೇವತಾತನವರ 42ನೇ ಪುಣ್ಮಸ್ಮರಣೆ
42nd death anniversary of Mahadevatat of Metria on December 7th
ಕಂಪ್ಲಿ 04: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಡಿ.7ರ ಭಾನುವಾರದಂದು ಪ್ರಣವಜ್ಯೋತಿ ಮಹಾಕ್ಷೇತ್ರದ ಶ್ರೀವಿಶ್ವಾರಾಧ್ಯ ಗುರುಕುಲ ಮಠ ಸಂಸ್ಥಾಪಕರಾದ ಲಿಂಗೈಕ್ಯ ಹಂದ್ಯಾಳು ಮಠದ ಮಹಾದೇವತಾತನವರ 42ನೇ ಪುಣ್ಮಸ್ಮರಣೆ ಜರುಗಲಿದೆ. ಪುಣ್ಯಸ್ಮರಣೆ ಪ್ರಯುಕ್ತ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಪುರಾಣ ಪ್ರವಚನ ನ. 29ರಿಂದ ಆರಂಭಗೊಂಡಿದ್ದು, ವಿಶ್ವೇಶ್ವರಯ್ಯ ಸ್ವಾಮೀಜಿ ಪುರಾಣ ಪ್ರವಚನ, ಎ.ಎಂ. ಸೋಮಶೇಖರಯ್ಯಸ್ವಾಮಿ ಹಾರೋ್ಮನಿಯಂಗೆ ಸಿ.ಡಿ. ಮೌನೇಶ್ ತಬಲಾಸಾಥ್ ನೀಡಿದರು. ಡಿ.7ರಂದು ಪುರಾಣ ಮಹಾಮಂಗಲ, ಉತ್ಸವ(ಉಚ್ಛಾಯ) ಮತ್ತು ದೀಪೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ ಮಾತೃಶ್ರೀ ಗೌರಮ್ಮನವರ, ಶ್ರೀತಾತನವರ ಕರ್ತೃ ಗದ್ದುಗೆ, ಪ್ರಣವಜ್ಯೋತಿ ಪಂಚಾಚಾರ್ಯರ ಮಹಾಮೂರ್ತಿಗಳಿಗೆ ವಿಶೇಷ ರುದ್ರಾಭೀಷೇಕ, ಗಣಾರಾಧನೆ ಜರುಗಲಿದೆ. ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು, ಬುಕ್ಕಸಾಗರ ವಿಶ್ವಾರಾಧ್ಯ ಶಿವಾಚಾರ್ಯರು, ಹರಗಿನಡೋಣಿ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 