ರಬಕವಿಯಲ್ಲಿ4 ಸ್ಕೆ್ವೈರ್ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ರಬಕವಿಯಲ್ಲಿ4 ಸ್ಕೆ್ವೈರ್ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ 4 Square Souharda Cooperative Society inaugurated in Rabakavi

            ರಬಕವಿ-ಬನಹಟ್ಟಿ 23 : ಸಮಾಜದಕಟ್ಟಕಡೆಯ ವ್ಯಕ್ತಿಗೂಆರ್ಥಿಕ ನೆರವುಕಲ್ಪಿಸುವತ್ತಸಹಕಾರಿ ಸಂಘಗಳು ಮೊದಲುಆರ್ಥಿಕವಾಗಿ ಬಲಾಧ್ಯವಾಗಬೇಕು. ದೇಗುಲ, ಮಠಗಳು, ಶಾಲೆ ಕಾಲೇಜುಗಳಂತೆಯೇ ಸಹಕಾರಿ ಸಂಘಗಳೂ ಕೂಡ ಸಮಾಜದ ಆಸ್ತಿಯಾಗಿವೆ ಎಂದುತುಮಕೂರಿನ ಸಿದ್ದಗಂಗಾ ಮಠದಕಿರಿಯ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು. 

                  ರಬಕವಿಯಜೈನ ಮಂದಿರ ಹತ್ತಿರದ4 ಸ್ಕೆ್ವೈರ್‌ಸಮೂಹ ಸಂಸ್ಥೆಗಳ 15ನೇ ವಾರ್ಷಿಕೋತ್ಸವ ಹಾಗೂ 4 ಸೈರ್ ಸೌಹಾರ್ದ ಸಹಕಾರಿ ಸಂಘದಉದ್ಘಾಟನೆ ನೆರವೇರಿಸಿ ಮಾತನಾಡಿದಅವರು, ಸುರಕ್ಷತೆ, ಹೈಟೆಕ್ ಸೆಲ್ಯೂಶನ್, ಸಾವಯವಕೈಗಾರಿಕೆ, ಆರ್‌ಬಿ ಎಂಟರ್‌ಪ್ರೈಸಿಸ್ ಮೂಲಕ ಒಂದುವರೆದಶಕ ಸೇವೆ ಸಲ್ಲಿಸಿ ಇದೀಗ ಸಹಕಾರಿಕ್ಷೇತ್ರಕ್ಕೂಕಾಲಿಟ್ಟ ಸಂಸ್ಥೆಯ ಆಡಳಿತಗಾರರು, ಹಣಕಾಸುಕ್ಷೇತ್ರದಲ್ಲಿ ಪ್ರಾಮಾಣಿಕತೆ, ಶುದ್ಧಹಸ್ತತೆ ಸೌಜನ್ಯಯುತವಾಗಿ ವರ್ತಿಸುವಂತೆ ಉಳಿಸಿಕೊಂಡು, ಸಿಬ್ಬಂದಿ ಗ್ರಾಹಕರೊಡನೆ ನೋಡಿಕೊಂಡಲ್ಲಿ ಸಂಸ್ಥೆ ಹೆಮ್ಮರವಾಗಿ ಬೆಳೆಯುವುದರ ಜೊತೆಗೆಆರ್ಥಿಕವಾಗಿ ಹಿಂದುಳಿದವರನ್ನೂ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆಕಾಣಿಕೆ ನೀಡಿದಂತಾಗುತ್ತದೆಂದರು. 

                 ಹಾವೇರಿಯ ಸದಾಶಿವ ಸ್ವಾಮೀಜಿ ಮಾತನಾಡಿ, ತ್ರಿವಿಧದಾಸೋಹ ನಡೆಸುವ ಮೂಲಕ ಶೈಕ್ಷಣಿಕಕ್ರಾಂತಿ ಮಾಡಿದ ಡಾ.ಶಿವಕುಮಾರ ಶ್ರೀಗಳ ಪರಂಪರೆ ಮುಂದುವರಿಸಿರುವ ಶಿವಸಿದ್ದೇಶ್ವರ ಶ್ರೀಗಳು ಮೊದಲ ಬಾರಿಗೆ ಅವಳಿ ನಗರಕ್ಕೆ ಪುಣ್ಯಪಾದಾರೆ​‍್ಣ ಮಾಡಿರುವುದು ನಿಮ್ಮೆಲ್ಲರಿಗೂ ಶುಭಕರವೆಂದರು.ನಾವು ಪಕ್ಷಿಯಿಂದ ಹಂಚಿತಿನ್ನುವಗುಣಕಲಿತು ಸಮಾಜದಲ್ಲಿ ಸರ್ವರನ್ನೂ ಒಗ್ಗೂಡಿಸಿಕೊಂಡು ಸರ್ವರ ಪ್ರಗತಿ ನಮ್ಮೆಲ್ಲರ ಪ್ರಗತಿಎಂದು ಬಾಳಿದಲ್ಲಿ ಬದುಕು ಸಾರ್ಥಕವಾಗಲಿದೆಎಂದು ಹೇಳಿದರು. 

             ರಬಕವಿಯ ಶ್ರೀಗುರುದೇವ ಬ್ರಹ್ಮಾನಂದಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಜನತೆಯ ವಿಶ್ವಾಸವೃದ್ಧಿಸಿಕೊಂಡುಸಮುದಾಯದ ಸೇವೆ ಮಾಡುವ ಹೊಣೆಗಾರಿಕೆ ಸಹಕಾರಿ ಸಂಘದ ಮೇಲಿದೆಎಂದರು. 

                 ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ಸಹಕಾರಿಕ್ಷೇತ್ರದಲ್ಲಿನಆರ್ಥಿಕ ಸಂಘಗಳು ಇಂದು ಅಶಿಸ್ತು ಹಾಗೂ ಅಪ್ರಾಮಾಣಿ ಕತನದ ಕಾರಣ ಪಾತಾಳ ತಿಳಿಯುತ್ತಿವೆ. ಆರ್ಥಿಕ ಶಿಸ್ತು, ಹೊಣೆಗಾರಿಕೆ ಮತ್ತು ಸೌಜನ್ಯಯುತ ಸೇವೆಯ ಮೂಲಕ ಸಂಸ್ಥೆ ಜನಮಾನಸದಲ್ಲಿ ಬೆಳೆಯಬೇಕು. ಅಷ್ಟ ದಿಕ್ಕುಗಳಲ್ಲೂ ಸಂಸ್ಥೆ ವೃದ್ಧಿಗೊಳ್ಳಲಿ, ಅರ್ಹರಿಗೆ ಸ್ಪಂದಿಸಿ ಆರ್ಥಿಕ ನೆರವು ಕಲ್ಪಿಸಿ ಸಮಾಜದಲ್ಲಿ ಸ್ಥಿರತೆ ಮೂಡಿಸಲೆಂದರು. 

                 ವೇದಿಕೆಯಲ್ಲಿ ಶೇಗುಣಸಿಯ ಡಾ.ಮಹಾಂತಶ್ರೀ, ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ, ಹಳಿಂಗಳಿಯ ಮಹಾವೀರಅಲ್ಲಮಪ್ರಭು ಸ್ವಾಮೀಜಿ, ರುದ್ರಣ್ಯಾಕಮ್ಮಾರ, ಸಂಜಯ ಶೆಟ್ಟೆನ್ನವರ, ಮಲ್ಲಿಕಾರ್ಜುನ ಮಠದ, ತಹಸೀಲ್ದಾರ ಗೀರೀಶ ಸ್ವಾದಿ, ದಾನಯ್ಯ ಹಿರೇಮಠ, ಸತೀಶ ಹಜಾರೆ, ಸಣ್ಣಯ ಮುನಪ್ಪ ನಾಯಕ, ಸದಾಶಿವ ಮೇಲಗಿರಿ ಉಪಸ್ಥಿತರಿದ್ದರು. 

                  ಸೋಮಶೇಖರಕೊಟ್ರಶೆಟ್ಟಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ಎಸ್‌.ಎಂ. ಅಮ್ಮಣಗಿಮಠ, ಮಹಾದೇವ ಕವಿಶೆಟ್ಟಿ, ಸಂಜಯತೇಲಿ, ಅರ್ಜುನಕಾಖಂಡಕಿ, ಸುಭಾಸ ಮಧುರಖಂಡಿ, ಪ್ರಭು ನಾಯಕ, ಡಾ.ರವಿ ಜಮಖಂಡಿ, ವಿಜಯಕುಮಾರ ಹಲಕುರ್ಕಿಇತರರುಇದ್ದರು.