32ನೇ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ

32ನೇ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ 32nd Ayyappa Mahapuja Festival

                 ಮೂಡಲಗಿ 22: ಇಲ್ಲಿಯ   ಶಿವಬೋಧರಂಗ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ 32ನೇ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ ಮತ್ತು ಅಗ್ನಿ ಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮವು ಡಿ.22ರಂದು ಮದ್ಯಾಹ್ನ 2ಗಂಟೆಗೆ ಜರುಗಿತು. ಮಹಾಪೂಜೆ ನಿಮಿತ್ತವಾಗಿ ಕನ್ನಿ ಸ್ವಾಮಿಗಳಿಂದ ಕುಂಭಮೇಳ ಮತ್ತು ಆನೆ ಮೇಲೆ ಅಂಬಾರಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಾವಚಿತ್ರ,ಮೂರ್ತಿಯ ಭವ್ಯ ಮೆರವಣಿಗೆಯು ಜರುಗಲಿದೆ. ವಿವಿಧ ವಾದ್ಯಮೇಳಗಳೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಬಸವರಂಗ ಮಂಟಪದಲ್ಲಿರುವ ಸ್ವಾಮಿಯ ಸನ್ನಿಧಾನಕ್ಕೆ ಸೇರೀತು. ಸಂಜೆ ಅಗ್ನಿ ಪೂಜೆ ಮತ್ತು ಬೆಂಕಿ ಪಾದ, ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಜರುಗಿ ನಂತರ ಅನ್ನ ಸಂತರೆ​‍್ಣ ಜರುಗಿತು. 

               ಕಾರ್ಯಕ್ರಮದ  ಸಾನ್ನಿಧ್ಯವನ್ನು ಪಟ್ಟಣದ ಶಿವಬೋಧರಂಗ ಮಠದ ದತ್ತಾತ್ರಯಬೋಧ ಸ್ವಾಮಿಜಿ, ಶ್ರೀಧರಬೋಧ ಸ್ವಾಮಿಜಿ, ರಂಗಾಪೂರ-ಮುನ್ಯಾಳ ಸದಾಶಿವಯೋಗಿಶ್ವರ ಮಠದ ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಮದ ಸ್ವಾಮಿಜಿ, ಇಟನಾಳದ ಮೈಲಾರಲಿಂಗೇಶ್ವರ ಮಠದ ಸಿದ್ದೇಶ್ವರ ಸ್ವಾಮಿಜಿ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಶಿವಮೊಗ್ಗದ ಶಬರೀಶ ರೋಜಾ ಷಣ್ಮುಗಂ, ಬಾಗಲಕೋಟದ ಲಕ್ಷ್ಮಣ ಅಬ್ದಲಪೂರ ಗುರುಸ್ವಾಮಿ, ಬೆಳಗಾವಿಯ ಮಾರುತಿ ಗುರುಸ್ವಾಮಿ, ಬೆಂಗಳೂರಿನ ರವಿ ಗುರುಸ್ವಾಮಿಗಳು ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು,  ಮತ್ತಿತರು ಆಗಮಿಸಿದರು.