ಗುಡ್ಡಾಪೂರ ದಾನಮ್ಮದೇವಿ ಪಾದಯಾತ್ರಾ ಸದ್ಭಕ್ತಮಂಡಳಿಯ 32ನೇ ವಾಷರ್ಿಕ ಸಭೆ


ಲೋಕದರ್ಶನ ವರದಿ

ರಬಕವಿ/ಬನಹಟ್ಟಿ 23;  ಕಳೆದ 31 ವರ್ಷಗಳ ಕಾಲ ರಬಕವಿ ಬನಹಟ್ಟಿ ಅವಳಿ ನಗರದಿಂದ ಸಾವಿರಾರು ಭಕ್ತರು ಗುಡ್ಡಾಪುರ ದಾನಮ್ಮದೇವಿಗೆ ಪಾದಯಾತ್ರೆ ಮೂಲಕ ತೆರಳುತ್ತಾರೆ. ಅವರ ಸಾಮಾನು ಸರಂಜಾಮು, ಅಲ್ಪೋಪಹಾರ ಹಾಗೂ ದೇವಸ್ಥಾನದಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಮತ್ತು ಊಟದ ವ್ಯವಸ್ಥೆಗಾಗಿ ಅನೇಕ ದಾನಿಗಳು ಕಳೆದ ವರ್ಷ 95 ಸಾವಿರಕ್ಕೂ ಅಧೀಕ ಹಣ ಮತ್ತು ಹಿಟ್ಟಕ್ಕಿಯನ್ನು ದಾನವಾಗಿ ನೀಡಿದ್ದರೂ ಎಂದು ಪಾದಯಾತ್ರೆ ಮಂಡಳದ ಮುಖಂಡ ನಾಗರಾಜ ಕಾಡಾಪುರ ತಿಳಿಸಿದರು.

ರಬಕವಿ ಕೃಷ್ಣಾ ನದಿ ತೀರದಲ್ಲಿ ಹಮ್ಮಿಕೊಂಡ ವಾಷರ್ಿಕ ಸಭೆಯಲ್ಲಿ ನೂರಾರು ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ 31 ವರ್ಷ ಪಾದಯಾತ್ರೆಯಲ್ಲಿ ನಮಗೇನು ತೊಂದರೆಯಾಗಿಲ್ಲ, ಆ ದಾನಮ್ಮತಾಯಿ ಆಶಿವರ್ಾದದಿಂದ ಪ್ರತಿ ವರ್ಷ ಹೆಚ್ಚು ಹೆಚ್ಚು ಜನ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ, ಅದರಂತೆ ಪ್ರತಿ ವರ್ಷ ದಾನಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಪಾದಯಾತ್ರೆಯೂದ್ದಕ್ಕೂ ಭಕ್ತರ ನಿರ್ವಹಣೆಗೆ  ಆಥರ್ಿಕವಾಗಿ ಯಾವುದೇ ತೊಂದರೆಯಾಗಿಲ್ಲ ಎಂದರು.

ಕಳೇದ ವರ್ಷ ಉಳಿದ ಹಣ ಮತ್ತು ಪ್ರಸಕ್ತ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ ಸೇರಿ ರೂ.191658 ಆಗಿದ್ದು, ಅದರಲ್ಲಿ ಒಟ್ಟು ಕಚರ್ು ರೂ.108216. ರಲ್ಲಿ ರೂ.83442 ಹಣ ಪಾದಯಾತ್ರೆ ಕಮೀಟಿಯಲ್ಲಿ ಉಳಿದಿದೆ ಎಂದು ವಿವರಿಸಿದರು. 

ಇನ್ನೋರ್ವ ಮುಖಂಡ ಮಲ್ಲು ಉಮದಿ ಮಾತನಾಡಿ, ಡಿ.4 ರಂದು ಬೆಳಿಗ್ಗೆ 5 ಗಂಟೆಗೆ ರಬಕವಿ ದಾನಮ್ಮದೇವಿ ದೇವಸ್ಥಾನ ಆವರಣದಿಂದ ಗುಡ್ಡಾಪೂರಕ್ಕೆ ಪಾದಯಾತ್ರೆ ಚಾಲನೆ ನೀಡಲಾಗುವುದು. ಆಸಕ್ತ ಭಕ್ತರು ತಮ್ಮ ಮಾಹಿತಿಯನ್ನು ಸಂಘದ ಕಚೇರಿಯಲ್ಲಿ ನಮೂದಿಸಬೇಕು. ಅಂದು ರಬಕವಿ ಕೃಷ್ಣಾ ನದಿ ದಾಟಿ ಹೋಗಲು ಪ್ರತಿ ವರ್ಷದಂತೆ ಈ ವರ್ಷವೂ ಬೋಟ್ನ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯುದ್ದಕ್ಕೂ ಅಲ್ಪೋಪಹಾರ, ಮಹಾಪ್ರಸಾದ ಹಾಗೂ ವೈಧ್ಯಕೀಯ ವ್ಯವಸ್ಥೆ ಕೂಡಾ ಇರುತ್ತದೆ ಎಂದು ವಿವರಿಸಿದರು.

ಡಿ.6 ರಂದು ಗುಡ್ಡಾಪೂರದಲ್ಲಿ ಜರುಗುವ ದಾನಮ್ಮದೇವಿ ಪಲ್ಲಕ್ಕಿ ಸೇವೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ದಾನಮ್ಮದೇವಿ ಪಾದಯಾತ್ರೆ ಕಮೀಟಿ ಮುಖಂಡ ಶ್ರೀಕಾಂತ ಲಾಳಕೆ ತಿಳಿಸಿದರು.

ರಬಕವಿ ದಾನಮ್ಮದೇವಿ ಪೂಜಾರಿಯವರಾದ ಮಹಾದೇವ ನಂದಯ್ಯಗೋಳ, ನಗರಸಭೆ ಸದಸ್ಯ ಸಂಜ ತೆಗ್ಗಿ, ಯಲ್ಲಪ್ಪ ಕಟಗಿ ಭಕ್ತರಾದ ಸೋಮು ಕುಳ್ಳೊಳ್ಳಿ, ಶಿವಾನಂದ ಮಠದ, ಉದಯ ಗಾಳಿ, ಚಿದಾನಂದ ಮುತ್ತೂರ, ಪ್ರಕಾಶ ಕುಂಬಾರ, ಸಂಜಯ ತೇಲಿ, ಸಂಜಯ ಬಡಿಗೇರ, ಜಮೀಲ ಅತ್ತಾರ, ಅಯೂಬ ನದಾಫ್ ಸೇರಿದಂತೆ ಅನೇಕರು ಈಗಿದ್ದ ಪಾದಯಾತ್ರೆ ಮಂಡಳಿಯ ಸದಸ್ಯರೇ ಮುಂದೇಯೂ ಈ ಸಂಘವನ್ನು ನಡೆಸಿಕೊಂಡು ಹೋಗಬೇಕು ಎಂದು ಸಾಮೋಹಿಕವಾಗಿ ಒಪ್ಪಿಗೆ ಸೂಸಿದರು.