ರಾಣೆಬೆನ್ನೂರಲ್ಲಿ ಪಾಂಡುರಂಗ- ರುಕುಮಾಯಿ 31ನೇ ವಾರ್ಷಿಕ ದಿಂಡಿ ಮಹೋತ್ಸವ

ರಾಣೆಬೆನ್ನೂರಲ್ಲಿ ಪಾಂಡುರಂಗ- ರುಕುಮಾಯಿ 31ನೇ  ವಾರ್ಷಿಕ ದಿಂಡಿ ಮಹೋತ್ಸವ 31st Annual Dindi Festival of Pandurang-Rukumai in Ranebennur

          ರಾಣೇಬೆನ್ನೂರು 27 :  ಇಲ್ಲಿನ ದೊಡ್ಡಪೇಟೆಯ ಶ್ರೀ ಭಾವಸಾರ ಕ್ಷತ್ರಿಯ ಸಮಾಜದ ದೈವ ಮಂಡಳಿ, ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿ ಆಶ್ರಯದಲ್ಲಿ, ಇದೆ ಜನವರಿ 28,29 ಮತ್ತು30,2026 ರಂದು" ಶ್ರೀ ಪಾಂಡುರಂಗ- ರುಕುಮಾಯಿ" ಅವರ 31ನೇ ವಾರ್ಷಿಕ ದಿಂಡಿ ಮಹೋತ್ಸವ ಧಾರ್ಮಿಕ ಸಮಾರಂಭವು ಜರುಗಲಿದೆ ಎಂದು ದೈವ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.      ಮಾಘಶುದ್ಧ ದಶಮಿ ಬುಧವಾರ ಸಂಜೆ ಪೋತಿ( ಗ್ರಂಥ ) ಸ್ಥಾಪನೆ, ಭಜನೆ, ಅಖಂಡ ವೀಣಾ ಜಾಗರಣೆ. 29ರಂದು ಗುರುವಾರ ಸೂರ್ಯೋದಯ ಕಾಲ 5:00ಯಿಂದ ಕಾಕಡಾರತಿ ಅಭಿಷೇಕ ಭಜನೆ, ಜ್ಞಾನೇಶ್ವರಿ ಗ್ರಂಥ ಸಾಮೂಹಿಕ ಪಾರಾಯಣ. ಸಂಜೆ ನಾಮ ಜಪ, ಪ್ರವಚನ, ಸಂತ  ಭೇಟಿ, 8 ಗಂಟೆಗೆ ಭಜನೆ,ಸಂತ ವಾಣಿ, ಅಭಂಗ, ಭಾರೋಡ ಮತ್ತು ಅಖಂಡದ ಭಜನೆ, 30 ರಂದು ಶುಕ್ರವಾರ  ಮುಂಜಾನೆ ದಿಂಡಿ ಸೋಹಳಾ, ನಗರ ಪ್ರದಕ್ಷಿಣೆ ಸಂತ ಸಮಾರಾಧನೆ ನಂತರ ಸಾರ್ವಜನಿಕವಾಗಿ ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ದೈವ ಮಂಡಳಿಯು ತಿಳಿಸಿದ್ದು, ಮೂರು ದಿವಸಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾನುಧಾಸ - ವೆಂಕಟೇಶ ರಾವ್ ಸರ್ವದೇ, ಚಂದ್ರಕಾಂತ - ಮೋಹನ್ ವಾದೋನಿ, ಹಬಪ ಮಲ್ಲಪ್ಪ ಕಾಕೋಳ, ನಾಮದೇವ ರಾಶಿನಕರ ಅಶೋಕರಾವ್ ಗುಜ್ಜರ, ತುಳಜಾರಾಮ ಗುಜ್ಜರ, ಮನೋಜ ಗುಜ್ಜರ, ವಿಜಯ್ ಜಿಂಗಾಡೆ, ರಾಮಚಂದ್ರ ತೇಲಕರ್, ಸುಬ್ಬಣ್ಣ ಸರ್ವದೇ, ಆರಂಭ ಟಿಕಾರೆ, ಮತ್ತು ಪಂಡರಾಪುರದ ಮೃದಂಗ ಕಾರರು, ಕೀರ್ತನ ಪ್ರವಚನಕಾರರು ಭಾಗವಹಿಸಲಿದ್ದಾರೆ. ಎಂದು ತಿಳಿಸಿದ್ದಾರೆ.