28ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರೆ​‍್ನ, ದಾನಿಗಳಿಗೆ ಸತ್ಕಾರ ಸಮಾರಂಭ

28ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರೆ​‍್ನ, ದಾನಿಗಳಿಗೆ ಸತ್ಕಾರ ಸಮಾರಂಭ 28th Annual Ayyappaswamy Mahapuja, Annasantara, and Reception Ceremony for Donors

 

ಬೆಟಗೇರಿ 28: ಪ್ರತಿಯೊಬ್ಬರೂ ಭಕ್ತಿ, ಶ್ರೇದ್ಧೆಯಿಂದ ದೇವರ ನಾಮಸ್ಮರಣೆ ಮಾಡಿ ಭಗವಂತನ ಕೃಪಾರ್ಶೀವಾದಕ್ಕೆ  ಪಾತ್ರರಾಗಬೇಕು. ಮನುಷ್ಯನಿಗೆ ನೆಮ್ಮದಿ ಮುಖ್ಯ, ಕಠಿಣ ವೃತಾಚರಣೆ ಮೂಲಕ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅಯ್ಯಪ್ಪನ ನಾಮಸ್ಮರಣೆ ಮಾಡಿದರೆ ಅಯ್ಯಪ್ಪಸ್ವಾಮಿ ಕೃಪೆಯಾಗುತ್ತದೆ. ದೇವರ ಮೇಲಿನ ಭಕ್ತಿ ತಮಗೆ ಶಕ್ತಿಯಾಗುತ್ತದೆ ಎಂದು ಸುಕ್ಷೇತ್ರ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.  ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ ಡಿ.27ರಂದು ನಡೆದ 28ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರೆ​‍್ನ, ದಾನಿಗಳಿಗೆ ಸತ್ಕಾರ ಸಮಾರಂಭ ಹಾಗೂ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

  ಅಯ್ಯಪ್ಪಸ್ವಾಮಿ ಬಗ್ಗೆ ನನಗೆ ಬಹಳ ಒಲವು, ಏಕೆಂದರೆ ಅಯ್ಯಪ್ಪನಿಗೆ ಇಂಥವರು ಭಕ್ತರು ಅಂತಾ ಇಲ್ಲಾ, ಎಲ್ಲಾ ಜನಾಂಗದ ಜನ ಅಯ್ಯಪ್ಪಸ್ವಾಮಿ ಮಾಲೆ ಧರಿಸುತ್ತಾರೆ. ಎಲ್ಲಾ ಜನಾಂಗದ ಪ್ರತೀಕ ಅಯ್ಯಪ್ಪಸ್ವಾಮಿ, ಎಲ್ಲಾ ಕಡೆ ನೋಡಬೇಕು ನೀವು ಜಾತಿ ಹೆಚ್ಚಿ ಮೆರೆಯುತ್ತಿದೆ, ಜಾತಿಯಿಂದ ವಿನಾಶವಾಗುತ್ತದೆ, ಜಾತಿ, ಮತ, ಪಂಥ ಎನ್ನದೇ ಎಲ್ಲರೂ ಒಂದಾಗಿ ಬಾಳಿರಿ, ಮುಂದಿನ ವರ್ಷ ಮಳೆ, ಬೆಳೆ ಚೆನ್ನಾಗಿ ಆಗುತ್ತೆ, ಜಾತಿ, ಧರ್ಮ ಪದ್ದತಿಯಿಂದ ಯುದ್ದ, ಬಾಂಬು, ಪ್ರಳಯ ಹೇಗಾಗುತ್ತೆ ನೋಡಿ, ಎಲ್ಲವನ್ನು ಯುಗಾದಿ ನಂತರ ಹೇಳುತ್ತೇನೆ. ಸ್ಥಳೀಯ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯವರು ಸತತ 28 ವರ್ಷಗಳಿಂದ ಅಯ್ಯಪ್ಪಸ್ವಾಮಿ ಮಹಾಪೂಜಾ ಕಾರ್ಯಕ್ರಮ ಆಯೋಜಿಸುತ್ತಿರುವ ಕಾರ್ಯ ಸಂತೋಷ ತಂದಿದೆ. ಬೇಗ ಸಮುದಾಯ ಭವನ ನಿರ್ಮಿಸಿ, ನೂತನ ಕಟ್ಟಡದ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ಕೋಡಿಮಠದ ಶ್ರೀಗಳು ಅಭಿಪ್ರಾಯಿಸಿದರು. 

  ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಸ್ಥಳೀಯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಬಹುದಿನದ ಕನಸು ಅಯ್ಯಪ್ಪಸ್ವಾಮಿ ಸನ್ನಿದಾನದ ಸ್ಥಳದಲ್ಲಿ ಸುಮಾರು 25ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ತಂದು, ಕಟ್ಟಡ ನಿರ್ಮಾನ ಕುರಿತು ಚರ್ಚಿಸಿ ನೂತನ ಸಮುದಾಯ ಭವನ ನಿರ್ಮಿಸುವಂತೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.  

  ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಚೇತನದೇವರು, ಬೊಮ್ಮನಹಳ್ಳಿ ಶ್ರೀಗಳು, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಕಡಕೋಳ ಸಿದ್ದರಾಯಜ್ಜನವರು, ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಹನುಮಂತ ವಡೇರ, ಮುತ್ತೆಪ್ಪ ವಡೇರ ನೇತೃತ್ವ, ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗುರುಸ್ವಾಮಿಗಳಾದ ವೀರನಾಯ್ಕ ನಾಯ್ಕರ, ಬಸವರಾಜ ಬೆಟಗೇರಿ ಸೇರಿದಂತೆ ಹಲವಾರು ಜನ ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿಗಳು ಸಮ್ಮುಖ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಅಧ್ಯಕ್ಷತೆ ವಹಿಸಿದ್ದರು. 

ವೈಭವದಿಂದ ನಡೆದ ವಿವಿಧ ಕಾರ್ಯಕ್ರಮಗಳು:  ಶನಿವಾರದಂದು ಮುಂಜಾನೆ 10 ಗಂಟೆಗೆ ಅಯ್ಯಪ್ಪಸ್ವಾಮಿ ಮಹಾಪೂಜೆ ಸಮಾರಂಭಕ್ಕೆ ಆಗಮಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳನ್ನು ಬರಮಾಡಿಕೊಳ್ಳಲಾಯಿತು. ಸಂಜೆ 6 ಗಂಟೆಗೆ ಇಲ್ಲಿಯ ಬಸವೇಶ್ವರ ವೃತ್ತದಿಂದ ಅಯ್ಯಪ್ಪಸ್ವಾಮಿ ಸನ್ನಿದಾನದ ತನಕ ಒಂಟೆ, ಸುಮಂಗಲೆಯರಿಂದ ಆರತಿ, ಕುಂಭ, ಕರಡಿ ಮಜಲು, ಜಾಂಜ್‌ಪಥ್‌ಕ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿ ಮೂರ್ತಿಯೊಂದಿಗೆ  ಕೋಡಿಮಠದ ಶ್ರೀಗಳ ಮೆರವಣಿಗೆ ವೈಭವದಿಂದ ನಡೆಯಿತು. ಸಂಜೆ 7ಗಂಟೆಗೆ ಅಗ್ನಿಪೂಜೆ, ಮಾಲಾದಾರಿಗಳಿಂದ ಬೆಂಕಿಪಾದ ನಡೆಯುವುದು, ಅಯ್ಯಪ್ಪ ಸ್ವಾಮಿ ಮಹಾಪೂಜೆ, ಮಹಾಭಿಷೇಕ ನಡೆದು, ಗಣ್ಯರಿಗೆ, ದಾನಿಗಳಿಗೆ ಸತ್ಕಾರ ಸಮಾರಂಭ, ಮಹಾಪ್ರಸಾದ ಜರುಗಿದ ಬಳಿಕ ಪ್ರಸಕ್ತ ವರ್ಷದ ಕಾರ್ಯಕ್ರಮ ಸಮಾರೂಪಗೊಂಡಿತು. 

  ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಸುಭಾಷ ಕರೆನ್ನವರ, ರಾಜು ಪತ್ತಾರ, ಬಸವರಾಜ ಪಣದಿ, ಲಕ್ಷ್ಮಣ ಸೋಮಗೌಡ್ರ, ಸದಾಶಿವ ಕುರಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ಸಂಘ-ಸಂಸ್ಥೆಗಳ ಹಾಗೂ ಗ್ರಾಪಂ, ತಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಸಂತ-ಶರಣರು, ರಾಜಕೀಯ ಮುಖಂಡರು, ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು,   ನೂರಾರು ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗುರುಸ್ವಾಮಿಗಳು, ಮಾಲಾಧಿಕಾರಿಗಳು, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಸದಸ್ಯರು,