ಬಲ್ಡೋಟಾ ಹೋರಾಟಕ್ಕೆ 27 ದಿನ: ಜ್ಯುವೆಲರಿ ಅಸೋಸಿಯೇಷನ್ ಬೆಂಬಲ
27 days to the Baldota struggle: Jewellery Association supports
ಕೊಪ್ಪಳ 26: ಇಂದು ಸಂವಿಧಾನ ಸಮರಾ್ಣ ದಿನವನ್ನು ಈ ವೇದಿಕೆಯಲ್ಲಿ ಆಚರಿಸಿದ್ದೇವೆ, ನಮಗೆ ಸಂವಿಧಾನ ಬದುಕುವ ಹಕ್ಕು, ಮಾತನಾಡುವ ಹಕ್ಕು ಕೊಟ್ಟಿದೆ. ಆದರೂ ಮಾತನಾಡಬೇಕಾದವರು ಮಾತನಾಡುತ್ತಿಲ್ವ. ಒಂದು ವೇಳೆ ಮಾತನಾಡಿದರು ಎಲ್ಲರಿಗೂ ಒಳ್ಳೆಯದಾಗುವದನ್ನು ಮಾತನಾಡುವುದಿಲ್ಲ ಈಗ ವ್ಯಾಪಾರಸ್ಥರು ಕೇವಲ ತಮ್ಮ ವ್ಯವಹಾರದಲ್ಲಿ ತಲ್ಲೀನರಾದರೆ ಕಾರ್ಖಾನೆಗಳು ನಮ್ಮನ್ನು ನುಂಗಿಬಿಡುತ್ತವೆ ಎಂದು ಜುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಗುರುರಾಜ ರಾಯ್ಕರ್ ಅವರು ಆತಂಕ ವ್ಯಕ್ತಪಡಿಸಿದರು.
ಅವರು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಬಲ್ಡೋಟಾ, ಕಿರ್ಲೋಸ್ಕರ, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್‌ಇಂಡಿಯಾ ಸೇರಿ ಇತರೆ ಕಾರ್ಖಾನೆಗಳ ವಿಸ್ತರಣೆ ಮತ್ತು ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ 27ನೇ ದಿನ ಭಾಗವಹಿಸಿ ಮಾತನಾಡಿದರು.
ಮುಂದುವರೆದು, ಕೆಲವರ ಹಿತಾಸಕ್ತಿಗಾಗಿ ಬಹುಸಂಖ್ಯಾತರ ಹಿತಾಸಕ್ತಿಯನ್ನೇ ಮರೆತುಬಿಡುತ್ತಾರೆ. ನಾವು ನಮ್ಮ ವ್ಯವಹಾರದಲ್ಲಷ್ಟೇ ತಲ್ಲೀನರಾದರೆ ಊರನ್ನು ಯಾರು ಉಳಿಸಬೇಕು. ಬಲ್ಡೋಟ ಕಾರ್ಖಾನೆ 54 ಸಾವಿರ ಕೋಟಿಯಲ್ಲಿ ನಗರದ ಪಕ್ಕದಲ್ಲಿ ತನ್ನ ವಿಸ್ತರಣೆಗಾಗಿ ನಮ್ಮನ್ನು ಬಲಿಕೊಟ್ಟು, ಇಲ್ಲಿನ ಪರಿಸರ ಹಾಳಾದರೆ ಯಾರು ಹೊಣೆ? ನಮಗೆ ಈಗ ಸಂಬಂಧವಿಲ್ಲ ಎಂದು ಅಂತರಕಾಯ್ದುಕೊಂಡು ದೂರ ಉಳಿದರೆ ಪರಿಸ್ಥಿತಿ ಕೈಮೀರಿ ಹೋದಾಗ ಎಚ್ಚರಗೊಂಡರೆ ಪ್ರಯೋಜನವಿಲ್ಲ. ಕಂಪನಿ ಏನೆಲ್ಲಾ ಆಟ ಆಡುತ್ತದೆ ಅದನ್ನು ನೋಡಿಕೊಂಡು ಯಾರೂ ಮೌನದಿಂದರಬಾರದು.
ಈ ಹೋರಾಟವನ್ನು ಅಭಿನವ ಗವಿಸಿದ್ದೇಶ್ವರರು ಶುಭಾರಂಭ ಮಾಡಿದರು. ಈ ಹೋರಾಟ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮಕ್ಕಳ ಕೈಯಲ್ಲಿ ಆಕ್ಸಿಜನ್ ಬಾಟಲಿ ಕೊಡೋದು ಬೇಡ. ಒಳ್ಳೆ ಗಾಳಿ, ನೀರು ಕೊಟ್ಟು ಹೋಗೋಣ, ಬಲ್ಡೋಟ ವಿರುದ್ಧ ನಿರ್ದಾಕ್ಷಿಣ್ಯವಾಗಿ ಹೋರಾಡೋಣ ಎಂದರು. ಸಂವಿಧಾನ ದಿನದ ಅಂಗವಾಗಿ ಕಾಲೇಜು ವಿದ್ಯಾರ್ಥಿನಿಯರು ಸಂವಿಧಾನ ಪೀಠಿಕೆ ವಾಚನ ಮಾಡಿದರು. ಧರಣಿ ನಿರತರು ಶಪತ ಸ್ವೀಕರಿಸುತ್ತಾ ಪೀಠಿಕೆ ವಾಚನವನ್ನು ಅನುಸರಿಸಿದರು. ಈ ದಿನದ ಧರಣಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ಧ್ವನಿ) ಕಾರ್ಯಕರ್ತರು ಬಂದು ಬೆಂಬಲಿಸಿ ಹೋರಾಟದ ಹಾಡುಗಳನ್ನು ಹಾಡಿದರು.
ಧರಣಿಯಲ್ಲಿ ಜುವೆಲರ್ಸ್ ಅಸೋಸಿಯೇಷನ್‌ನ ಅನಂತ ಕುಮಾರ್ ಜಂತಗಲ್, ವಾಸಿಂ ಅಕ್ರಂ, ಪಂಪಣ್ಣ ದುರ್ಗಾ ಜುವೆಲರ್ಸ್, ಕಿರಣ್ ಪವಾರ್, ಕೃಷ್ಣ ಚಿತ್ರಗಾರ, ಗಜೇಂದ್ರ ಚಿತ್ರಗಾರ, ಅರುಣ್ ಕಾಳಿಕಾ ಜುವೆಲರ್ಸ್, ಮೌನೇಶ ಎಂ, ವೀರಭದ್ರ್ಪ ಜಂತಕಲ್, ಸೋಮನಾಥ ಸಿ.ಜೆ., ರವೀಂದ್ರ ಮೋಹಿತೆ ಓಕೆ ಜುವೆಲರ್ಸ್, ರಮೇಶ್ ಕಲಾಲ್, ಗಣೇಶ್ ಸಿದ್ದಮ್ಮನಹಳ್ಳಿ, ಬಸವರಾಜ್ ಕೊಡೇಕಲ್, ವಿಜಯ್ ಎನ್ಕೆ, ಪ್ರಕಾಶ್ ವೆರ್ಣೇಕರ್, ದೀಲೀಪ್ ರಾಯ್ಕರ್, ಮಹೇಶ್ ಮನ್ನಾಪುರ್, ಶಂಕರ್ ಶೇಟ್, ರಾಘವೇಂದ್ರ ಕೊಡೇಕಲ್, ವಸಂತ ಕುರುಡೇಕರ್, ರಾಘವೇಂದ್ರ ರೇವಣಕರ್, ಓಬಳೇಶ ಪಾಲ್, ವಿಮಲ್ ಜೈನ್, ಕುಬೇರ್ ದೇವಪೂರ, ಕೇದಾರನಾಥ ದೇವಪೂರ, ಮಂಜುನಾಥ ವೆರ್ಣೇಕರ್, ಯಾಸೀನ್ ಕಿಲ್ಲೇದಾರ್, ಪರ್ವತಿ ಸಿಂಗ್, ಪ್ರಭು ಮುಂಡರಗಿ, ರವಿ ಚಿತ್ರಗಾರ,. ಕ.ದ.ಸಂ.ಸ. ನಿಂಗಪ್ಪ ಎಸ್ ಬೆಣಕಲ್, ಶಶಿಕಲಾ ಮಠದ ಪಾಲ್ಗೊಂಡರು.
ಧರಣಿ ನೇತೃತ್ವವನ್ನು ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಭಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ (ಕೆ.ಬಿ.ಗೋನಾಳ), ಮಂಜುನಾಥ ಜಿ. ಗೊಂಡಬಾಳ, ಸಾವಿತ್ರಿ ಮುಜುಮದಾರ, ರವಿ ಕಾಂತನವರ, ಎಸ್.ಎ.ಗಫಾರ್, ಬಸವರಾಜ ಶೀಲವಂತರ. ಮಹಾದೇವಪ್ಪ ಎಸ್.ಮಾವಿನಮಡು ಯಮನೂರ್ಪ, ಮೂಕಣ್ಣ ಬಸಾಪುರ ವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 