ಮುಂಡಗೋಡ ಲೋಕ ಅದಾಲತ್ನಲ್ಲಿ 211 ಪ್ರಕರಣಗಳ ಇತ್ಯರ್ಥ
211 cases settled in Mundagoda Lok Adalat
ಮುಂಡಗೋಡ 14: ಮಾನ್ಯ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರವಾರ ಇವರ ನಿರ್ದೇಶನದಂತೆ ಶನಿವಾರ ಮುಂಡಗೋಡ ಪಟ್ಟಣದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಅಕ್ಷತಾ ಸಿ.ಆರ್. ಅವರು ಸಂಧಾನಕಾರರಾಗಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ವಕೀಲರಾದ ಭಾರತಿ ಡಿ.ಎಚ್. ಅವರು ಭಾಗವಹಿಸಿದ್ದರು. ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಿಧ ಪ್ರಕಾರದ ಒಟ್ಟು 211 ಪ್ರಕರಣಗಳು ಇತ್ಯರ್ಥಗೊಂಡವು. ಇದರಲ್ಲಿ 24 ಅಮಲ್ಟಾರಿ ಪ್ರಕರಣಗಳು, 26 ಎನ್.ಐ. ಆ್ಯಕ್ಟ್ ಪ್ರಕರಣಗಳು, 09 ಮೂಲದಾವಾ ಪ್ರಕರಣಗಳು, 72 ಪ್ರಕರಣಗಳು, 03 ಪಿ.ಸಿ.ಆರ್. ಪ್ರಕರಣಗಳು, 02 ಡಿ.ವಿ. ಆ್ಯಕ್ಟ್ ಪ್ರಕರಣಗಳು, 01 ಐ.ಪಿ.ಸಿ. ಪ್ರಕರಣ ಹಾಗೂ 74 ಕೆ.ಪಿ. ಆ್ಯಕ್ಟ್ ಪ್ರಕರಣಗಳು ಸೇರಿವೆ. ಈ ಪ್ರಕರಣಗಳಿಂದ ಒಟ್ಟು 43,82,941/- ಹಣ ವಸೂಲಿಯಾಯಿತು.
ಇದಲ್ಲದೆ, 22 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡು ಅವುಗಳಿಂದ 36,10,486/- ಹಣ ವಸೂಲಾಗಿದ್ದು, ಈ ಮೊತ್ತವನ್ನು ಸರ್ಕಾರ ಹಾಗೂ ಸಂಬಂಧಿತ ಬ್ಯಾಂಕುಗಳಿಗೆ ಭರಣ ಮಾಡಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರಸಾದ ರಮೇಶ್ ಹೆಗಡೆ, ವಕೀಲರ ಸಂಘದ ಅಧ್ಯಕ್ಷ ಎನ್,ಎಂ ನಿಂಬಾಯಿ , ಉಪಾಧ್ಯಕ್ಷ ಎಸ್,ಎಮ್, ಮಲವಳ್ಳಿ ಕಾರ್ಯದರ್ಶಿ ಎಸ್, ಕೆ, ಕೊಳ್ಳಾನವರ, ಕೆ ಎಸ್ ಗುಲ್ಯಾನವರ, ಸಿ ಎಸ್ ಗಾಣೀಗೇರ, ಗುಡ್ಡಪ್ಪ ಎಸ್.ಕಾತೂರು, ಕೆ ಎನ್ ಹೆಗಡೆ, ಡಿ ಎಫ್ ಪೂಜಾರ , ಎಮ್ ಎನ್ ನಂದಿಗಟ್ಟಿ, ಸುಜೀತ್ ಎಸ್ , ಎನ್ ಎಸ್ ಕಾತೂರು , ಆರ್ ಎಸ್ ಹಂಚಿನಮನಿ, ಆರ್ ಬಿ ಹುಬ್ಬಳ್ಳಿ, ಜಿ ಆರ್ ಆಲದಕಟ್ಪಿ, ಗೀತಾ ಡಿ ಕೆ, ಭಾರತಿ, ಪ್ರಮೋದ್ ಸಣ್ಣಮನಿ, ನ್ಯಾಯಾಲಯದ ಸಿಬ್ಬಂದಿಗಳು ಪೋಲಿಸ್ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 