ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 210144 ಹೆಕ್ಟೇರ್ ಪ್ರದೇಶ ಬಿತ್ತನೆ
210144 hectares of area sown for the winter season in the district
ಗದಗ ನವೆಂಬರ್ 13: ಜಿಲ್ಲೆಯಲ್ಲಿ 2025-26 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 119.6 ಮಿ.ಮಿ. ವಾಡಿಕೆ ಮಳಿಗೆ 73.3 ಮಿ.ಮಿ. ನಷ್ಟು ವಾಸ್ತವಿಕ ಮಳೆಯಾಗಿರುತ್ತದೆ (ಅಕ್ಟೋಬರ ದಿಂದ 10 ನವ್ಹಂಬರ). ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 257925 ಹೆ. ಪ್ರದೇಶದ ಬಿತ್ತನೆ ಗುರಿಯಿದ್ದು, ಇದಕ್ಕೆ ಪ್ರತಿಯಾಗಿ ಗದಗ ತಾಲ್ಲೂಕಿನಲ್ಲಿ 52310 ಹೆ.,ಗಜೇಂದ್ರಗಡ 27745 ಹೆ., ಲಕ್ಷ್ಮೇಶ್ವರ 12075 ಹೆ., ಮುಂಡರಗಿ 34750 ಹೆ., ನರಗುಂದ 25520 ಹೆ., ರೋಣ 49021 ಹೆ., ಹಾಗೂಶಿರಹಟ್ಟಿ 8723 ಹೆ. ಪ್ರದೇಶದಂತೆ ಒಟ್ಟು 210144 ಹೆ., (ಶೇ. 81.47) ರಷ್ಟು ಬಿತ್ತನೆಯಾಗಿರುತ್ತದೆ.
ದಿ. 11 ರಂದು ಜಿಲ್ಲಾಧಿಕಾರಿಗಳು, ಗದಗ ಇವರ ಅಧ್ಯಕ್ಷತೆಯಲ್ಲಿ ರಸಗೊಬ್ಬರಗಳ ಸರಬರಾಜು ಹಾಗೂ ದಾಸ್ತಾನು ಕುರಿತಂತೆ ಸಭೆಯನ್ನು ಜರುಗಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 4958 ಮೆ.ಟನ್‌ಯೂರಿಯಾ, 4483 ಮೆ.ಟನ್‌ಡಿ.ಎ.ಪಿ., 915 ಮೆ.ಟನ್. ಎಂ.ಓ.ಪಿ., 304 ಮೆ.ಟನ್. ಎಸ್.ಎಸ್.ಪಿ. ಹಾಗೂ 5558 ಮೆ.ಟನ್. ವಿವಿಧ ಕಾಂಪ್ಲೇಕ್ಸ್ ರಸಗೊಬ್ಬರಗಳು ಸೇರಿದಂತೆ ಒಟ್ಟು 16221 ಮೆ.ಟನ್ ರಸಗೊಬ್ಬರಗಳನ್ನು ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲಿ ್ಲ ದಾಸ್ತಾನು ಇರುತ್ತದೆ. 2025-26 ನೇ ಸಾಲಿನ ಹಿಂಗಾರು ಹಂಗಾಮಿಗೆ ಜಿಲ್ಲೆಯಲಿ ್ಲರಸಗೊಬ್ಬರಗಳಿಗೆ ಯಾವುದೇ ಕೊರತೆ ಇರುವುದಿಲ್ಲ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 