17 ವರ್ಷದ ಬಾಲಕರ ಪುಟ್‌ಬಾಲ್ ಪಂದ್ಯಾವಳಿ: ಮೊದಲನೇ ಸ್ಥಾನ ಲಯನ್ಸ್‌ ಪುಟ್ಬಾಲ್ ಕ್ಲಬ್

17 ವರ್ಷದ ಬಾಲಕರ ಪುಟ್‌ಬಾಲ್ ಪಂದ್ಯಾವಳಿ: ಮೊದಲನೇ ಸ್ಥಾನ ಲಯನ್ಸ್‌ ಪುಟ್ಬಾಲ್ ಕ್ಲಬ್ 17-year-old boys' football tournament: 1st place Lions Football Club

ವಿಜಯಪುರ 29: ಆಟವನ್ನು ಹವ್ಯಾಸವಾಗಿ ತೆಗೆದುಕೊಂಡು ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನವಾಗಿ ಕಾಯ್ದುಕೊಳ್ಳಬೇಕು ಎಂದು ಡಿವೈಎಸ್ಪಿ ಗೌರವ ಡಾಕ್ಟರೇಟ್ ಬಸವರಾಜ ಯಲಿಗಾರ ಹೇಳಿದರು. 

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಲಯನ್ಸ್‌ ಪುಟಬಾಲ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 17 ವರ್ಷದ ವಯೋಮಿತಿ ಬಾಲಕರ ಪುಟ್‌ಬಾಲ್ ಪಂದ್ಯಾವಳಿಯ ಬಹುಮಾನ ವಿತರಿಸಿ ಅವರು ಮಾತನಾಡಿದರು. ಆಟದಲ್ಲಿ ಸೋಲು ಗೆಲುವುದು ಮುಖ್ಯವಲ್ಲ. ಕ್ರೀಡೆಯಲ್ಲಿ ಉತ್ಸುಕರಾಗಿ ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡೆಗಳನ್ನು ಮನೋರಂಜನೆಗಾಗಿ ಆಡಬೇಕು. ನಮ್ಮ ಆರೋಗ್ಯಕ್ಕೆ ಕ್ರೀಡೆಗಳು ಉತ್ತಮವಾಗಿವೆ ಎಂದು ಎಲ್ಲರೂ ಕ್ರೀಡಾಭಿಮಾನವನ್ನು ಹೊಂದಬೇಕು ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಫಯಾಜ ಕಲಾದಗಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂತೋಷ ರಾಠೋಡ, ದಾರಾಸಿಂಗ ಪವಾರ, ಐ.ಸಿ.ಪಠಾಣ, ಹಮೀದ ಜಾಗೀರದಾರ, ಗಣೇಶ ಭೋಸಲೆ, ಯಲ್ಲಪ್ಪ ಜಂಪ್ಲೆ, ಮೊಹಮ್ಮದ ಹಿಟ್ನಳ್ಳಿ ಸೇರಿದಂತೆ ಮುಂತಾದವರು ವೇದಿಕೆಯ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮನೋಜ ದೊಡಮನಿ, ಆಕಾಶ ಅಳಗುಡಕಿ, ಪ್ರಜ್ವಲ ಭೋಸ್ಲೆ ಇದ್ದರು. ಕಾರ್ಯಕ್ರಮವನ್ನು ಎಂ.ಡಿ. ಹಾದಿಮನಿ ನಿರೂಪಿಸಿದರು, ವಿನಾಯಕ ಶಿಂಗೆ ವಂದಿಸಿದಿರು. ಮೊದಲನೇ ಬಹುಮಾನ ಲಯನ್ಸ್‌ ಪುಟ್ಬಾಲ್ ಕ್ಲಬ್ ವಿಜಯಪುರ , ಎರಡನೇ ಬಹುಮಾನ ಬಾಗಲಕೋಟ ಪುಟ್ಬಾಲ್ ಕ್ಲಬ್ ಪಡೆದುಕೊಂಡಿತು.